ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಾನಸಿಕ ಅಸ್ವಸ್ಥನ ಚಿಕಿತ್ಸೆಗೆ ನೆರವು ಕೋರಿಕೆ

Srinivasa Murthy VN
Updated On : 17 May 2013, 11:51 am

ಮಂಗಳೂರು: ತೀವ್ರ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ 25ರ ಹರೆಯದ ತಮ್ಮ ಮೊಮ್ಮಗನ ಚಿಕಿತ್ಸೆಗೆ ಧನಸಹಾಯ ಮಾಡಬೇಕು ಎಂದು ಸುಳ್ಯ ಹಳೆಗೇಟು ಜಯನಗರದ ಫಾತಿಮಾ ಕೋರಿದ್ದಾರೆ.
ಅವಿವಾಹಿತರಾಗಿರುವ ಅಬ್ದುಲ್ ಖಾದರ್ ಚಿಕ್ಕಂದಿನಲ್ಲೇ ಹೆತ್ತವರನ್ನು ಕಳೆದುಕೊಂಡಿದ್ದು, ಅಜ್ಜಿ ಫಾತಿಮಾ ಅವರೇ ಸಾಕುತ್ತಿದ್ದಾರೆ. ಈತನಿಗೆ 10ನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ಮಾನಸಿಕ ಕಾಯಿಲೆ ಆರಂಭವಾಯಿತು. ಆರ್ಥಿಕ ತೊಂದರೆಯಿಂದ ಈವರೆಗೆ ಗುಣಪಡಿಸಲು ಸಾಧ್ಯವಾಗಿಲ್ಲ.
ಇದರಿಂದಾಗಿ ಈತ ಶಿಕ್ಷಣವನ್ನು ಅರ್ಧದಲ್ಲೆ ಮೊಟಕುಗೊಳಿಸಬೇಕಾಯಿತು. ಕೇರಳದ ಕ್ಯಾಲಿಕಟ್, ಮಂಗಳೂರಿನ ಕಂಕನಾಡಿ, ಮಡಿಕೇರಿ ಮುಂತಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಕಡಿಮೆಯಾಗಿಲ್ಲ. ಇದೀಗ, ವೈದ್ಯರು ರೋಗವಾಸಿಯ ಭರವಸೆ ನೀಡಿದ್ದಾರೆ.
ಇದಕ್ಕಾಗಿ ಎರಡು ವರ್ಷಗಳ ಸೂಕ್ತ ಚಿಕಿತ್ಸೆ ಅಗತ್ಯವಿದ್ದು, ಅಂದಾಜು 5 ಲಕ್ಷ ವೆಚ್ಚ ನಿರೀಕ್ಷಿಸಲಾಗಿದೆ. ಈಗಾಗಲೇ ಚಿಕಿತ್ಸೆಗಾಗಿ ಹಲವೆಡೆ ಸಾಲ ಮಾಡಿರುವ ಫಾತಿಮಾಗೆ 65 ವರ್ಷ ದಾಟಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಆದ್ದರಿಂದ, ಆರ್ಥಿಕವಾಗಿ ಕಂಗೆಟ್ಟಿರುವ ತನಗೆ ಚಿಕಿತ್ಸೆಗೆ ಸೂಕ್ತ ನೆರವು ನೀಡುವಂತೆ ಹೇಳಿಕೆಯಲ್ಲಿ ಕೋರಿದ್ದಾರೆ. ಧನಸಹಾಯ ನೀಡುವವರಿಗೆ ಮಾಹಿತಿ: ಕೆನರಾ ಬ್ಯಾಂಕ್, ಸಂಪಾಜೆ ಶಾಖೆ, ಖಾತೆ ಸಂಖ್ಯೆ-0643101003706, ಐಎಫ್‌ಎಸ್‌ಸಿ ಕೋಡ್: ಈಃಖಇ0000643. ಸಂಪರ್ಕ ಸಂಖ್ಯೆ: 9972102845.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement