ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

246 ಗಂಟೆಗಳ ಉಪವಾಸ ಸತ್ಯಾಗ್ರಹ ಅಂತ್ಯ

Srinivasa Murthy VN
Updated On : 22 May 2013, 11:57 am

ಮಂಗಳೂರು: ಶಾಸಕರ ಭರವಸೆ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಅಖಿಲಭಾರತ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಸುದತ್ತ ಜೈನ್ ತಮ್ಮ 11 ದಿನಗಳ ಉಪವಾಸವನ್ನು ಬುಧವಾರ ಕೊನೆಗೊಳಿಸಿದ್ದಾರೆ. ಶಾಸಕ ಜೆ.ಆರ್. ಲೋಬೊ ನೀಡಿದ ಜ್ಯೂಸ್ ಕುಡಿದ ಬಳಿಕ ಜೈನ್ ತಮ್ಮ 246 ಗಂಟೆಗಳ ಉಪವಾಸ ಅಂತ್ಯಗೊಳಿಸಿದರು. ಇದೇ ವೇಳೆಗೆ ಬೆಂಗಳೂರಿನ ಇಎಸ್‌ಐ ನಿರ್ದೇಶಕಿ ಡಾ. ರಹಿಮುನ್ನಿಸಾ ಜತೆಗಿದ್ದರು.
 ಬೀಡಿ ಕಾರ್ಮಿಕರ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆ, ಲೇಡಿಗೋಷನ್ ಆಸ್ಪತ್ರೆ ಸಹಿತ ಎಲ್ಲ ಬೇಡಿಕೆಗಳನ್ನು ಶಾಸಕರು ಪರಿಗಣನೆಗೆ ತೆಗೆದುಕೊಂಡಿದ್ದಾರೆ. ಕದ್ರಿ ಶಿವಭಾಗ್‌ನ ಇಎಸ್‌ಐ ಆಸ್ಪತ್ರೆ ಕುರಿತು ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ಕರೆದಿದ್ದು, ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ್ದರು. ಸಂಘದ ಎಲ್ಲ ಬೇಡಿಕೆಗಳಿಗೆ ಸ್ಪಂದಿಸುವ ಸಂಪೂರ್ಣ ಹೊಣೆ ಹೊರುವುದಾಗಿ ಶಾಸಕರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಉಪವಾಸ ಅಂತ್ಯಗೊಳಿಸಲಾಯಿತು ಎಂದು ಸಂಘದ ಜಿಲ್ಲಾ ಉಪಾಧ್ಯಕ್ಷ ಮೋಹನ್ ಕೆ. ಹೇಳಿದ್ದಾರೆ.
'ಆರೋಗ್ಯ ಸಚಿವ ಯು.ಟಿ.ಖಾದರ್ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದು, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಉಪವಾಸ ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆ ಆಲಿಸಿದ್ದಾರೆ. ಇಎಸ್‌ಐ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು, ವೈದ್ಯ, ಸಿಬ್ಬಂದಿ ನೇಮಿಸುವ ಹೊಣೆ ಶಾಸಕರಿಗೆ ಸೇರಿದೆ. ಆದ್ದರಿಂದ ಸಮಸ್ಯೆ ಬಗೆಹರಿಸಲು ಅವರಿಗೆ ಒಂದು ಅವಕಾಶ ನೀಡುತ್ತೇನೆ' ಎಂದು ಸುದತ್ತ ಜೈನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement