ಶಿಕ್ಷಣ, ಸಂಶೋಧನೆಗೆ ಹೇರಳ ಅನುದಾನ ಅಗತ್ಯ: ಉಡುಪ
ಮಂಗಳೂರು: ಭಾರತದಲ್ಲಿ ಶಿಕ್ಷಣ ಮತ್ತು ಸಂಶೋಧನೆಗೆ ಅನುದಾನ ನೀಡುವಲ್ಲಿ ಸರ್ಕಾರ ಹಿಂದೇಟು ಹಾಕಬಾರದು ಎಂದು ಅಮೆರಿಕ ಮಚಿಗಾನ್ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪ್ರೊ.ಸತೀಶ್ ಉಡುಪ ಹೇಳಿದ್ದಾರೆ. ಸುರತ್ಕಲ್ ಎನ್ಐಟಿಕೆಯಲ್ಲಿ ಶನಿವಾರ ಘಟಿಕೋತ್ಸವದ ಬಳಿಕ ಮಾತನಾಡಿ, ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಪರಿಣಾಮ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಕ್ಕೂ ತಟ್ಟಿದೆ. ಕಳೆದ ವರ್ಷ ಈ ಕ್ಷೇತ್ರಕ್ಕೆ 400 ಮಿಲಿಯನ್ ಡಾಲರ್ ನೀಡಿದ್ದರೆ, ಈ ವರ್ಷದ 520 ಮಿಲಿಯನ್ ಡಾಲರ್ ಬೇಡಿಕೆಯನ್ನು ಅಮೆರಿಕ ಸರ್ಕಾರ ಪೂರೈಸುತ್ತಿಲ್ಲ. ಭಾರತದಲ್ಲಿ ರಾಜ್ಯ ನಿಧಿಯಿಂದ ಈ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ನೀಡಬೇಕು ಎಂದು ಆಶಿಸಿದರು. ಎನ್ಐಟಿಕೆ(ರಾಷ್ಟ್ರೀಯ ತಾಂತ್ರಿಕ ಸಂಸ್ಥೆ)ಯಲ್ಲಿ ಕಳೆದ ವರ್ಷದಿಂದ ಐಪಿಆರ್ ಸೆಲ್ ಪ್ರಾರಂಭವಾಗಿದ್ದು, ಈವರೆಗೆ ಕೆಮಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಶನ್, ಕೆಮಿಸ್ಟ್ರಿ ಸೇರಿದಂತೆ ಆರು ವಿಷಯಗಳಲ್ಲಿ ಪೇಟೆಂಟ್ ನೀಡಿದ್ದು, ಇನ್ನೂ ಐದು ವಿಷಯಗಳಲ್ಲಿ ಪೇಟೆಂಟ್ಗೆ ಅರ್ಜಿ ಬಂದಿದೆ ಎಂದು ಎನ್ಐಟಿಕೆ ನಿರ್ದೇಶಕ ಪ್ರೊ.ಸ್ವಪನ್ ಭಟ್ಟಾಚಾರ್ಯ ಹೇಳಿದರು.
ಕುಂಬಾರ ಅಧ್ಯಕ್ಷರ ಉಚ್ಚಾಟನೆ
ಚಾಮರಾಜನಗರ: ರಾಜ್ಯ ಕುಂಬಾರ ಮಹಾಸಂಘದ ಅಧ್ಯಕ್ಷರಾಗಿದ್ದ ಶಿವಕುಮಾರ ಚೌಡಶೆಟ್ಟಿ ಅವರು ಸಂಘಕ್ಕೆ ಸರ್ಕಾರದಿಂದ ಬಿಡುಗಡೆಯಾಗಿದ್ದ ಹಣ ದುರುಪಯೋಗ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸಂಘದಿಂದ ಉಚ್ಚಾಟಿಸಲಾಗಿದೆ.