ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಆಯಿಷಾ ಪ್ರಕರಣ: ಮಂಗಳೂರಲ್ಲಿ ಇನ್ನಿಬ್ಬರ ಸೆರೆ

Srinivasa Murthy VN
Updated On : 24 Nov 2013, 1:29 am

ಮಂಗಳೂರು: ಪಟನಾ ಸ್ಫೋಟದ ಉಗ್ರರಿಗೆ ಹಣಕಾಸು ವ್ಯವಹಾರಕ್ಕೆ ಸಹಕರಿಸಿದ ಆಯಿಷಾ ಬಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಲಖಿಸರೈ ಪೊಲಿಸರು ಬಜಪೆ ಮತ್ತು ಅಂಬ್ಲಮೊಗರಿನ ಇಬ್ಬರು ಯವಕರನ್ನು ಬಂಧಿಸಿದ್ದಾರೆ. ಅಂಬ್ಲಮೊಗರು ಸಣ್ಣಮದಕ ಮಹಮ್ಮದ್ ಆಸೀಫ್(23) ಪಾಂಡೇಶ್ವರ ಪೊಲೀಸರ ಸಹಕಾರದಿಂದ ಬಂಧಿಸಲಾಗಿದ್ದು, ಬಜಪೆ ಸೂರಲ್ಪಾಡಿ ನಿವಾಸಿ ಮುಷ್ತಾಕ್ ಎಂಬಾತನನ್ನು ಬಜಪೆ ಪೊಲೀಸರ ನೆರವಿನೊಂದಿಗೆ ಬಿಹಾರ ಪೊಲೀಸರು ಬಂಧಿಸಿದ್ದಾರೆ.  ಆಯಿಷಾ ಬಾನು ಮತ್ತು ಜುಬೇರ್ ಹುಸೇನ್ ಬಂಧಿಸಿ ಬಿಹಾರಕ್ಕೆ ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿದಾಗ ಆಸೀಫ್ ಮತ್ತು ಮುಷ್ತಾಕ್ ನೆರವು ನೀಡಿರುವುದಾಗಿ ಹೇಳಿದ್ದರು. ಈ ಹಿನ್ನೆಲಯಲ್ಲಿ ಮಂಗಳೂರಿಗೆ ಆಗಮಿಸಿದ ಬಿಹಾರ ಪೊಲೀಸರು ಎರಡು ದಿನಗಳಿಂದ ಆರೋಪಿಗಳ ಶೋಧ ನಡೆಸಿದ್ದರು. ಆರೋಪಿಗಳ ಮನೆಗಳನ್ನು ಜಾಲಾಡಿದ ಪೊಲೀಸರು ದಾಖಲೆ ಪತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸೂತ್ರಧಾರ ಜುಬೇರ್ ಹುಸೇನ್ ಸೂಚನೆಯಂತೆ, ಆಯಿಷಾ ಬಾನು ಸಂಬಂಧಿಕರ ಬ್ಯಾಂಕ್ ಖಾತೆ ತೆರೆದಿದ್ದಳು. ಸ್ಥಳೀಯ ಯುವಕರನ್ನು ಪರಿಚಯ ಮಾಡಿಕೊಂಡು ಅವರ ಬ್ಯಾಂಕ್ ಖಾತೆಗಳನ್ನು ತೆರೆದಿದ್ದರು. ಇಬ್ಬರು ಯುವಕರು ಆಯಿಷಾ ಬಾನು ಮತ್ತು ಜುಬೇರ್ ಹುಸೇನ್ ಹಣಕಾಸು ವ್ಯವಹಾರದಲ್ಲಿ ನೇರವಾಗಿ ಶಾಮೀಲಾದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜುಬೇರ್ ಹುಸೇನ್ ಮತ್ತು ಆಯಿಷಾ ಬಾನು ಮಾಡಿದ ಖಾತೆಗಳಿಗೆ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದ ವ್ಯಕ್ತಿಗಳು ಹಣ ಹಾಕುತ್ತಿದ್ದರು ಎಂಬುದನ್ನು ಬಿಹಾರ ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ.

ಜೇನ್ನೊಣ ದಾಳಿ: ರೈತನ ಸಾವು
ಚಿಂತಾಮಣಿ: ರೈತನೊಬ್ಬನಿಗೆ ಜೇನು ಹುಳುಗಳ ದಾಳಿಯಿಂದ ತೀವ್ರ ಅಸ್ವಸ್ಥಗೊಂಡ ರೈತನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಣ್ಣಪಗುಟ್ಟ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಸುಣ್ಣಪಗುಟ್ಟ ಗ್ರಾಮದ ರೈತ ವೆಂಕಟರಾಯಪ್ಪ(60) ಎಂಬಾತನು ಹತ್ತಿರದ ಜಗಣ್ಣ ಎಂಬವರ ತೋಟದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಕೆಲಸ ಮಾಡುತ್ತಿರುವಾಗ ಏಕಾಏಕಿ ಜೇನು ಹುಳುಗಳು ಗುಂಪು ಕಟ್ಟಿಕೊಂಡು ಮುತ್ತಿಗೆ ಹಾಕಿ ಕಚ್ಚಿದ ಪರಿಣಾಮ ವೆಂಕಟರಾಯಪ್ಪ ತೀವ್ರ ಗಾಯಗೊಂಡು ಬಟ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 2 ದಿನಗಳಿಂದ ದಾಖಲಾಗಿ ಶುಕ್ರವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement