ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಾನು ಧರ್ಮಿಷ್ಠೆ.. ಮಲ್ಲಿಗೆ, ಒಡವೆ ಅಂದ್ರೆ ಇಷ್ಟ: ಶಿಲ್ಪಾ ಶೆಟ್ಟಿ

Srinivasa Murthy VN
Updated On : 25 Nov 2013, 1:19 am

ಮಂಗಳೂರು: ನಾನು ಪಕ್ಕಾ ಧರ್ಮಿಷ್ಠೆ. ನಾಗ, ಭೂತ ಎಲ್ಲ ದೇವರೆಂದರೆ ನನಗಿಷ್ಟ. ಮಲ್ಲಿಗೆ ಅಂದ್ರೆ ಪ್ರಾಣ, ನಾನು ಪಕ್ಕಾ ಬಂಟ ಮನೆತನದವಳು..
ಇವು ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿಯ ಬಿಚ್ಚು ಮಾತುಗಳು. ನಗರದ ಬಲ್ಲಾಳ್‌ಬಾಗ್‌ನ ಕಾಯರ್‌ಮಂಜ್ ಕಟ್ಟಡದಲ್ಲಿ ಭಾನುವಾರ ಪಿ.ಸಿ. ಜ್ಯುವೆಲ್ಲರಿ ಉದ್ಘಾಟಿಸಿ ತನ್ನ ಇಷ್ಟಗಳ ಬಗ್ಗೆ, ಮಹಿಳೆಯರ ಇಷ್ಟಗಳ ಬಗ್ಗೆ ಮಾತನಾಡಿದರು. ಮಂಗಳೂರು ಮಹಿಳೆಯರಿಗೆ ಸೌಂದರ್ಯ ಪ್ರಜ್ಞೆ ಹೆಚ್ಚು, ಇಲ್ಲಿಯವರಿಗೆ ಆಭರಣ ತುಂಬಾ ಇಷ್ಟ, ಅಷ್ಟು ಗ್ಯಾರಂಟಿ ನೀಡುತ್ತೇನೆ. ಮಂಗಳೂರಿಗೆ ಬರಬೇಕೆಂದು ಹಂಬಲಿಸುತ್ತಿರುತ್ತೇನೆ, ಸಮಯಾವಕಾಶ ಕೊರತೆಯಿಂದ ಬರಲು ಸಾಧ್ಯವಾಗಿಲ್ಲ. ಪಿ.ಸಿ. ಜ್ಯುವೆಲ್ಲರಿ ಉದ್ಘಾಟನೆಗೆ ಕರೆದಾಗ ತಕ್ಷಣ ಒಪ್ಪಿಕೊಂಡು ಬಂದೆ. ಇಲ್ಲಿನ ಮಲ್ಲಿಗೆ ಹೂವು ಎಂದರೆ ನನಗೆ ತುಂಬಾ ಇಷ್ಟ. ವಿಮಾನ ನಿಲ್ದಾಣದಿಂದಲೇ ಹೂ ಖರೀದಿಗೆ ಹಠ ಹಿಡಿದಿದ್ದೆ. ಹೂ ಪಡೆದು ಮುಡಿದೆ, ತುಂಬಾ ಖುಷಿ ಆಯಿತು ಎಂದರು.
ಊರಿಗೆ ಬರಲು ಆಗುತ್ತಿಲ್ಲ ಎಂದು ತಪ್ಪಿತಸ್ಥ ಭಾವನೆ ಕಾಡುತ್ತಿದೆ. ಕೆಲಸ ಮಾಡಲು, ರಜೆ ತಿರುಗಾಟಕ್ಕೆ ಹೋಗಲು ಮನಸ್ಸಾಗುತ್ತದೆ. ಆದರೆ ಮಗು ಜತೆ ಇರುವುದು ಅಗತ್ಯ. ಊರಿಗೆ ಬಂದಾಗ ಕಟೀಲ್ ಉಳ್ಳಾಲ್ದಿಯನ್ನು ನೋಡಬೇಕು ಎನಿಸುತ್ತದೆ. ಮಂಗಳೂರಿಗೆ ಬರುವಾಗ ಬಹಳ ಪ್ರೀತಿ ತೋರಿಸಿದಿರಿ, ತುಂಬಾ ಥ್ಯಾಂಕ್ಸ್ ಎಂದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement