ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೆದರಿಕೆಗೆ ಮಣಿದು ಹೋರಾಟ ನಿಲ್ಲದು: ಕೇಮಾರು ಶ್ರೀ

Srinivasa Murthy VN
Updated On : 19 Oct 2013, 12:39 pm

ಬೆಳ್ತಂಗಡಿ: ಸೌಜನ್ಯಾ ಪರ ಮಾತನಾಡಿದರೆ ಖಾವಿ ಬಿಚ್ಚಿಸುವ, ದೌರ್ಜನ್ಯ ನಡೆಸುವ ಮಾತನ್ನಾಡಿದ್ದಾರೆ. ಆದರೆ ಈ ಯಾವುದೇ ಬೆದರಿಕೆಯಿಂದಲೂ ಹೋರಾಟ ನಿಲ್ಲುವುದಿಲ್ಲ ಎಂದು ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಡಿವೈಎಫ್‌ಐ, ಜೆಎಂಎಸ್, ಎಸ್‌ಎಫ್‌ಐ ನೇತೃತ್ವದಲ್ಲಿ ಸೌಜನ್ಯಾಳ ಹುಟ್ಟಿದ ದಿನವಾದ ಶುಕ್ರವಾರ ಆಕೆಯ ಕೊಲೆ, ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿ ದಿನವಿಡಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ತಮ್ಮ ಮಗಳಿಗಾದ ಅನ್ಯಾಯ ಎಂದು ಭಾವಿಸಿ ಮಹಿಳೆಯರೆಲ್ಲರೂ ಧ್ವನಿಯೆತ್ತುವಂತಾಗಬೇಕು. ಇದು ಯಾವುದೇ ಧಾರ್ಮಿಕ ಕೇಂದ್ರ ಅಥವಾ ವ್ಯಕ್ತಿಯ ವಿರುದ್ಧದ ಹೋರಾಟವಲ್ಲ. ಸೌಜನ್ಯಾಳ ಸಾವಿಗೆ ಕಾರಣರಾದವರಿಗೆ ಶಿಕ್ಷಯಾಗಬೇಕು ಎಂಬ ಗುರಿಯೊಂದಿಗೆ ನಡೆಸುತ್ತಿರುವ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು. ತನಿಖೆಯ ದಾರಿ ತಪ್ಪಿಸುವವರು ಯಾರು ಎಂದು ಅನ್ಯಾಯಕ್ಕೊಳಗಾದ ಸೌಜನ್ಯಾಳ ಮನೆಯವರು ಹೇಳಲಿ ಎಂದರು.
ಸೌಜನ್ಯಾ ತಂದೆ ಚಂದಪ್ಪ ಗೌಡ, ತಾಯಿ ಕುಸುಮಾವತಿ, ವಿಠಲ ಗೌಡ ಹಾಗೂ ಮನೆಯವರು, ವಿವಿಧ ಸಂಘಟನೆಗಳ ಮುಖಂಡರು ಇದ್ದರು. ಸಾವಿರಾರು ಸಂಖ್ಯೆಯಲ್ಲಿ ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ ಪ್ರತಿಭಟನಾಕಾರರು ಬೆಳ್ಳಗಿನಿಂದ ಸಂಜೆಯವರೆಗೂ ಧರಣಿಯಲ್ಲಿ ಭಾಗವಹಿಸಿದ್ದರು. ಸೌಜನ್ಯಾಳ ತಾಯಿಗೆ ಪಾನೀಯ ನೀಡುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಲಾಯಿತು.

ಗೃಹರಕ್ಷಕಿಗೆ ಲೈಂಗಿಕ ಕಿರುಕುಳ ನೀಡಿದ್ದ ನಿದರ್ಶ್ ಪದಚ್ಯುತಿ
ಮಂಗಳೂರು:
ಹೋಮ್‌ಗಾರ್ಡ್ ಕಮಾಂಡೆಂಟ್ ಡಾ.ನಿದರ್ಶ್ ಹೆಗಡೆ ಅವರನ್ನು ಪದಚ್ಯುತಗೊಳಿ ಸರ್ಕಾರ ಆದೇಶ ಹೊರಡಿಸಿದೆ. ಹಂಗಾಮಿ ಕಮಾಂಡೆಂಟ್ ಆಗಿ ಹೆಚ್ಚುವರಿ ಎಸ್ಪಿ ಶಿವಕುಮಾರ್ ಅವರನ್ನು ನೇಮಿಸಿದೆ. ನಿದರ್ಶ್ ಹೆಗ್ಡೆ ಅವರು ಗೃಹರಕ್ಷಕಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಮೂರು ಮಕ್ಕಳ ಹೆತ್ತ ತಾಯಿ!
ಗುಳೇದಗುಡ್ಡ:
ಇಲ್ಲಿನ ಬನಶಂಕರಿ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಮೂರು ಮಕ್ಕಳಿಗೆ ಶುಕ್ರವಾರ ಜನ್ಮ ನೀಡಿದ್ದು ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ತಾಯಿ ಸಾವಿತ್ರಿ ಬಸವರಾಜ ಶೆಟ್ಟರ್ ಅವರು ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದವರು. ಗುಳೇದಗುಡ್ಡ ತವರು ಮನೆಗೆ ಹೆರಿಗೆಗೆಂದು ಬಂದಿದ್ದಳು. ಸಾವಿತ್ರಿಗೆ ಇದು ಎರಡನೆಯ ಹೆರಿಗೆ. ಶುಕ್ರವಾರ ಮಧ್ಯಾಹ್ನ 12.40 ಗಂಟೆಗೆ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಆಗಿದೆ. ಮಕ್ಕಳು ಅನುಕ್ರಮವಾಗಿ 1.6, 1.5 ಹಾಗೂ 1.4 ಕೆ.ಜಿ ತೂಕ ಹೊಂದಿವೆ ಎಂದು ಆಸ್ಪತ್ರೆಯ ವೈದ್ಯ ಡಾ.ಬಸವರಾಜ ಭಂಟನೂರ ಮತ್ತು ಎ.ವಿ.ಶಿರಸಂಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement