ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಆರ್‌ಎಸ್‌ಎಸ್ ಸಭಾಂಗಣದಲ್ಲಿ ಇಎಸ್‌ಐ ನಿಗಮ ಕಾರ್ಯಕ್ರಮ!

Srinivasa Murthy VN
Updated On : 25 Oct 2013, 12:56 pm

ಮಂಗಳೂರು:  ಸಂಘ ಪರಿವಾರದ ಆಡಳಿತದಲ್ಲಿರುವ ಸಂಘನಿಕೇತನದಲ್ಲಿ ಇಎಸ್‌ಐ ನಿಗಮ ಉಪಪ್ರಾದೇಶಿಕ ಕಚೇರಿ ಉದ್ಘಾಟನೆ ಸಮಾರಂಭ ನಡೆಸಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕ ಜೆ.ಆರ್.ಲೋಬೊ ಹಾಗೂ ಆರೋಗ್ಯ ಸಚಿವ ಯು.ಟಿ.ಖಾದರ್ ಗೈರು ಹಾಜರಾಗಿದ್ದರು!
ಆರ್‌ಎಸ್‌ಎಸ್ ಕಾರ್ಯಾಲಯವೂ ಆಗಿರುವ ಇಲ್ಲಿನ ಸಂಘನಿಕೇತನದ ಸುಂದರ ಸಭಾಂಗಣದಲ್ಲಿ ಗುರುವಾರ ಸಮಾರಂಭ ಆಯೋಜಿಸಲಾಗಿತ್ತು.
ಸಂಘನಿಕೇತನದಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮ ಇರಿಸಿದ ಬಗ್ಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಬೆಳಗ್ಗೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಕಾರ್ಮಿಕ ಸಚಿವ ಕೋಡಿಕುನ್ನಿಲ್ ಸುರೇಶ್ ಮತ್ತು ರಾಜ್ಯ ಕಾರ್ಮಿಕ ಸಚಿವ ಟಿ.ಪಿ.ಪರಮೇಶ್ವರ ನಾಯ್ಕ್ ಬಳಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ನಾಗಪುರ ಬಿಟ್ಟರೆ ಮಂಗಳೂರೇ ಬಿಜೆಪಿಗೆ ಪ್ರಯೋಗಾಲಯ. ಈ ರೀತಿ ಮಾಡುವುದು ಸರಿಯಲ್ಲ ಎಂದು ಕಾರ್ಯಕರ್ತರು ಆಕ್ಷೇಪಿಸಿದರು. “ÑÚºÛMVÚy ಯಾರಿಗೆ ಸೇರಿದೆ ಎನ್ನುವುದು ನನಗೇ ಗೊತ್ತೇ ಇಲ್ಲ. ನಿಗಮ ಅಧಿಕಾರಿಗಳು A¾æàÞfÒ¥Úß§’ ಎಂದು ಕೇಂದ್ರ ಸಚಿವರು ಹೇಳಿದರೆ, ತಾವು ಕೇವಲ ಅತಿಥಿಯಾಗಿ ಆಗಮಿಸಿದ್ದೆ ಎಂದು ಹೇಳಿದರು.
ಸಮಾಧಾನಗೊಂಡ ಕಾರ್ಯಕರ್ತರು: ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದರಿಂದ ನಿಗಮ ಅಧಿಕಾರಿಗಳು ಲೋಕಸಭೆ ಸದಸ್ಯರನ್ನು ಸಂಪರ್ಕಿಸಿರಬಹುದು. ಬಿಜೆಪಿ ಸಂಸದರಾದ್ದರಿಂದ ಸಂಘನಿಕೇತನದಲ್ಲಿ ಮಾಡುವಂತೆ ಸೂಚಿಸಿರಬಹುದು. ಕೇಂದ್ರ ಸಚಿವರೂ ಕೇರಳದವರು. ನಿಗಮ ಅಧಿಕಾರಿಗಳೂ ಕೂಡಾ ಈ ಊರಿನವರು ಅಲ್ಲ. ಹೀಗಾಗಿ ಗೊತ್ತಿಲ್ಲದೆ ಎಡವಟ್ಟು ನಡೆದಿರಬಹುದು ಎಂದು ಕಾರ್ಯಕರ್ತರು ತಮಗೆ ತಾವೇ ಸಮಾಧಾನ ಪಟ್ಟುಕೊಂಡರು.
ಈ ವಿಚಾರ 4 ದಿನ ಮೊದಲೇ ಗೊತ್ತಾಗಿದ್ದರೆ ಕಾರ್ಯಕ್ರಮ ಮುಂದೂಡಬಹುದಾಗಿತ್ತು. ಆದರೆ ಗೊತ್ತಾದಾಗ ಸಮಯ ಮೀರಿ ಹೋಗಿತ್ತು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಶ್ನಿಸಬೇಕು ಎಂದು ಕಾರ್ಯಕರ್ತರು ಕೇಂದ್ರ ಸಚಿವರ ಬಳಿ ಭಿನ್ನವಿಸಿದರು.  
“«Ú«ÚVæ ಆಹ್ವಾನ ನೀಡಿಲ್ಲ ಹೀಗಾಗಿ ಕಾರ್ಯಕ್ರಮಕ್ಕೆ ನಾನು ÔæàÞVÚßÈÚâ¦ÄÇ’ ಎಂದು ರಮಾನಾಥ ರೈ ಹೇಳಿದರೆ, ಬುಧವಾರ ರಾತ್ರಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಆದ್ದರಿಂದ ನಾನು ಹೋಗುವುದಿಲ್ಲ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಯು.ಟಿ.ಖಾದರ್ ಊರಲ್ಲಿಯೇ ಇರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement