ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎಲ್ಲ ಕಾರ್ಮಿಕರಿಗೆ ಭವಿಷ್ಯನಿಧಿ ಒದಗಿಸಲು ಕ್ರಮ: ಆಸ್ಕರ್

Srinivasa Murthy VN
Updated On : 23 Sept 2013, 12:34 pm

ಕ.ಪ್ರ.ವಾರ್ತೆ ಮಂಗಳೂರು ಸೆ. 22
ಸಂಘಟಿತ ಮತ್ತು ಅಸಂಘಟಿತ ವಲಯದ ಎಲ್ಲ ಕಾರ್ಮಿಕರಿಗೆ ಭವಿಷ್ಯನಿಧಿ ಒದಗಿಸಲು ಪ್ರಯತ್ನ ನಡೆಯುತ್ತಿದ್ದು, ಕೇಂದ್ರ ಸರ್ಕಾರ ಬೆಂಬಲ ನೀಡಲಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿದರು.
ಡೊಂಗರಕೇರಿ ಕೆನರಾ ಹೈಸ್ಕೂಲ್ ಸುಧೀಂದ್ರ ಕಲಾಭವನದಲ್ಲಿ ಭಾನುವಾರ ನಡೆದ ಇಂಟಕ್ ಸಂಯೋಜಿತ 'ಕರ್ನಾಟಕ ಭವಿಷ್ಯ ನಿಧಿ ನೌಕರರ ಸಂಘ' ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಪ್ರಸ್ತುತ ಸಂಘಟಿತ ವಲಯದಲ್ಲಿರುವ ಶೇ.7 ಕಾರ್ಮಿಕರಿಗೆ ಮಾತ್ರ ಭವಿಷ್ಯ ನಿಧಿ ದೊರಕುತ್ತಿದೆ. ಉಳಿದವರಿಗೂ ಈ ಸೌಲಭ್ಯ ಕೊಡಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆಲಸ ದೊರೆತ 5 ವರ್ಷದೊಳಗೆ ಭವಿಷ್ಯ ನಿಧಿ ಮೂಲಕ ಕಾರ್ಮಿಕರಿಗೆ ಮನೆ ಕಟ್ಟಲು ಅವಕಾಶವಾಗುವಂತೆ ಭವಿಷ್ಯನಿಧಿ ಮೊತ್ತ ಸಿಗಬೇಕು. ಕೆಲಸದಿಂದ ನಿವೃತ್ತಿಯಾದ ದಿನವೇ ಆತನ ಮುಂದಿನ ಜೀವನಕ್ಕೆ ಅನುಕೂಲವಾಗುವಂತೆ ನಿಧಿಯ ಮೊತ್ತವನ್ನು ನಿಗದಿಪಡಿಸಬೇಕು. ಭವಿಷ್ಯನಿಧಿ ಸಂಸ್ಥೆ ಕಾರ್ಮಿಕರಿಗೆ ವಜ್ರಕವಚವಾಗಿ ನೆರವಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement