ಲೈಂಗಿಕ ಕಿರುಕುಳ ಆರೋಪ: ಶಿಕ್ಷಕ ಸೆರೆ
ಮಂಗಳೂರು: ಕಿವಿ ಹಿಂಡಿದ ಶಿಕ್ಷಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ ಘಟನೆ ಮಂಗಳವಾರ ಸುರತ್ಕಲ್ನಲ್ಲಿ ನಡೆದಿದ್ದು, ಶಿಕ್ಷಕನನ್ನು ಬಂಧಿಸಲಾಗಿದೆ.
ಬಂಧನಕ್ಕೊಳಗಾದ ಶಿಕ್ಷಕ, ಪ್ರಗತಿ ಟ್ಯುಟೋರಿಯಲ್ ಮುಖ್ಯಸ್ಥ ವಿಕಾಸ. ವಿದ್ಯಾರ್ಥಿನಿ 10ನೇ ತರಗತಿಯಲ್ಲಿ ಟ್ಯೂಷನ್ಗೆ ಬರುತ್ತಿದ್ದಳು. 3 ತಿಂಗಳಿಂದ ಸರಿಯಾಗಿ ಹೋಂ ವರ್ಕ್ ಮಾಡುತ್ತಿರಲಿಲ್ಲ. ಬಡತನ ಕಾರಣಕ್ಕೆ ಆಕೆಗೆ ಶುಲ್ಕ ವಿನಾಯ್ತಿ ಮಾಡಲಾಗಿತ್ತು. ಕಲಿಕೆಗೆ ಸರಿಯಾಗಿ ಗಮನ ಕೊಡದ ಹಿನ್ನೆಲೆಯಲ್ಲಿ ಶಿಕ್ಷಕ ಕಿವಿ ಹಿಂಡಿದ್ದಲ್ಲದೆ, ಪರೀಕ್ಷೆಯಲ್ಲಿ ಅಂಕ ಕಡಿತಗೊಳಿಸುತ್ತಿದ್ದರು ಎನ್ನಲಾಗಿದೆ.
ಇದನ್ನೇ ಕೆಲವರ ಕುಮ್ಮಕ್ಕಿನ ಮೇರೆಗೆ ಲೈಂಗಿಕ ಕಿರುಕುಳ ಎಂದು ದೂರು ನೀಡಲಾಗಿದೆ ಎನ್ನಲಾಗಿದ್ದು, ಇದರ ಹಿಂದೆ ಮಹಾನಗರ ಪಾಲಿಕೆ ಸ್ಥಳೀಯ ಸದಸ್ಯರೊಬ್ಬರ ಕೈವಾಡ ಇದೆ ಎಂದು ಹೇಳಲಾಗಿದೆ. ಆರೋಪಿ ಶಿಕ್ಷಕನಿಗೆ 3 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಶಿಕ್ಷಕನ ಪತ್ನಿಯೂ ಅದೇ ಟ್ಯುಟೋರಿಯಲ್ನಲ್ಲಿ ಶಿಕ್ಷಕಿ. ವಿದ್ಯಾರ್ಥಿನಿ ನೀಡಿದ ದೂರಿನಂತೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.