ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಿಡಿಲು ಬಡಿದು ವೃದ್ಧ ಸಾವು

Srinivasa Murthy VN
Updated On : 10 Apr 2014, 12:54 pm

ಬೆಳ್ತಂಗಡಿ: ಎರಡು ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು ವೃದ್ಧರೊಬ್ಬರು ಸಾವಿಗೀಡಾಗಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
 ತಾಲೂಕಿನ ಪುದುವೆಟ್ಟು ಗ್ರಾಮದ ಸುದೆಗಂಡಿ ಎಂಬಲ್ಲಿನ ನಿವಾಸಿ ಬೊಗ್ರ ಗೌಡ (80) ಮೃತರು. ಅವರು ಮನೆಯೆದುರು ಕುಳಿತಿದ್ದ ಸಂದರ್ಭ ಸಿಡಿಲು ಬಡಿದಿದ್ದು,  ಆಘಾತಕ್ಕೊಳಗಾದ ಅವರು ಕ್ಷಣಮಾತ್ರದಲ್ಲೇ ಮೃತಪಟ್ಟರು.
 ಮತ್ತೊಂದು ಪ್ರಕರಣದಲ್ಲಿ ತೋಟತ್ತಾಡಿ ಗ್ರಾಮದ ನಿವಾಸಿ ಐಸಮ್ಮ (60) ಮತ್ತು ಜಮೀಲಾ (30) ಎಂಬವರಿಗೂ ಸಿಡಿಲು ಬಡಿದಿದ್ದು, ಗಂಭೀರ ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂದುವರಿದ ಮಳೆ, ಗಾಳಿ: ಬೆಳ್ತಂಗಡಿ ತಾಲೂಕಿನಾದ್ಯಂತ ಬುಧವಾರ ಸಂಜೆಯೂ ಗುಡುಗು, ಗಾಳಿ ಸಹಿತ ಭಾರಿ ಮಳೆ ಸುರಿದಿದೆ.
  ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ನೆರಿಯಾ, ಮುಂಡಾಜೆ, ಇಂದಬೆಟ್ಟು, ಗುರುವಾಯನಕೆರೆ ಸೇರಿದಂತೆ ಹೆಚ್ಚಿನ ಪ್ರದೇಶಗಳಲ್ಲಿ ಗಾಳಿ, ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದೆ. ಮಳೆಯೊಂದಿಗೆ ಬೀಸಿದ ಭಾರಿ ಗಾಳಿಗೆ  ಧರ್ಮಸ್ಥಳ, ಕಲ್ಮಂಜ ಪರಿಸರದಲ್ಲಿ ರಬ್ಬರ್ ಹಾಗೂ ಅಡಕೆ ತೋಟಗಳಿಗೆ ಹಾನಿಯಾಗಿದೆ.   ಮಂಗಳವಾರ ಬೀಸಿದ ಭಾರಿ ಗಾಳಿಗೆ ಅಸ್ತವ್ಯಸ್ತಗೊಂಡಿದ್ದ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯ ನಡೆಯುತ್ತಿರುವಾಗಲೇ ಬುಧವಾರವೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ತಾಲೂಕಿನ ಬಹುತೇಕ ಕಡೆ ಮತ್ತೆ ವಿದ್ಯುತ್ ಮತ್ತು ದೂರವಾಣಿ ಸಂಪರ್ಕ ಕಡಿತಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement