ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಾ.ಮೊಗಸಾಲೆ
ಮಂಗಳೂರು: ಮಂಗಳೂರಿನ ಬೆಂಗ್ರೆಯಲ್ಲಿ14ರಂದು ಸಂಜೆ 6ಕ್ಕೆ ನಡೆಯುವ 5ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ, ಕಾಂತಾವರ ಕನ್ನಡ ಸಂಘ ಮತ್ತು ಅಲ್ಲಮ ಪ್ರಭು ಪೀಠದ ಸಂಘಟಕ ಡಾ.ನಾ.ಮೊಗಸಾಲೆ ಆಯ್ಕೆಯಾಗಿದ್ದಾರೆ. ಕಾಸರಗೋಡಿನ ಕೋಳ್ಯೂರಿನಲ್ಲಿ 1944ರಲ್ಲಿ ಜನಿಸಿದ ಡಾ.ನಾರಾಯಣ ಮೊಗಸಾಲೆ, 11 ಕವನ ಸಂಗ್ರಹ, 16 ಕಾದಂಬರಿ, 3 ಸಣ್ಣ ಕಥೆ ಸಂಕಲನ, 13 ಸಂಪಾದಿತ ಕೃತಿಗಳು, 6 ವೈದ್ಯಕೀಯ ಕೃತಿಗಳು ಪ್ರಕಟಿಸಿದ್ದಾರೆ. ತಮ್ಮ ಸಮಗ್ರ ಕೃತಿಗಳನ್ನು ಸ್ವತಃ ಪ್ರಕಟಿಸಿ ಸಾಹಿತಿಗಳಿಗೆ ಮಾದರಿಯಾಗಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಯಲ್ಲದೆ, 25 ಸಾಹಿತ್ಯಿಕ ಗೌರವ, ನೂರಾರು ಸನ್ಮಾನ ಸಂದಿವೆ. 1996ರಲ್ಲಿ ಕಾಂತಾವರ ರೈತ ಯುವಜನ ಸಂಘ, 1978ರಲ್ಲಿ ವರ್ಧಮಾನ ಪ್ರಶಸ್ತಿ ಪೀಠ, 1976ರಲ್ಲಿ ಕನ್ನಡ ಸಂಘ ಕಾಂತಾವರ, 2008ರಲ್ಲಿ ಅಲ್ಲಮ ಪ್ರಭು ಪೀಠ ಸ್ಥಾಪಿಸಿ ಕನ್ನಡ ಭವನ ಕೆಲಸವನ್ನು ನಿರಂತರ ಮಾಡುತ್ತಿದ್ದಾರೆ.