17ರಂದು ಕಂಚಿಶ್ರೀ ಮಾಣಿಲ ದೇವಸ್ಥಾನ ಮಂಟಪಕ್ಕೆ ಶಿಲಾನ್ಯಾಸ
ಮಂಗಳೂರು: ಬಂಟ್ವಾಳ ಮಾಣಿಲ ದೇಲಂತಮಜಲು ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀಶಂಕರ ಮಂಟಪಕ್ಕೆ ಕಾಂಚಿ ಕಾಮಕೋಟಿ ಪೀಠದ 69ನೇ ಪೀಠಾಧಿಪತಿ ಶ್ರೀಜಯೇಂದ್ರ ಸರಸ್ವತೀ ಮಹಾಸ್ವಾಮೀಜಿ ಫೆ.17 ರಂದು ಶಿಲಾನ್ಯಾಸ ನೆರವೇರಿಸುವರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನ ಸಮಿತಿ ಪದಾಧಿಕಾರಿ ಪೆಲ್ತಾಜೆ ಸುಬ್ರಹ್ಮಣ್ಯ ಭಟ್, ಬೆಳಗ್ಗೆ 10ಕ್ಕೆ ಶಂಕರ ಮಂಟಪಕ್ಕೆ ಶ್ರೀಗಳು ಶಿಲಾನ್ಯಾಸ ನೆರವೇರಿಸಿ, ಆಶೀರ್ವಚನ ನೀಡುವರು.