ಬೀಚ್ಗೆ ಈಜಲು ಹೋದ ಇಬ್ಬರು ಸಮುದ್ರಪಾಲು
ಮಂಗಳೂರು: ಸುರತ್ಕಲ್ ಎನ್ಐಟಿಕೆ ಮಲ್ಲಮಾರ್ ಬೀಚ್ಗೆ ಹೋಗಿದ್ದ ಕುಳಾಯಿ ಗೋಕುಲನಗರ ನಿವಾಸಿಗಳಿಬ್ಬರು ತೆರೆಗೆ ನೀರುಪಾಲಾದ ಘಟನೆ ಭಾನುವಾರ ಸಂಭವಿಸಿದೆ.
ಶ್ರೀರಾಮ (22) ಮತ್ತು ಅಶ್ವಿನ್(24) ಸಮುದ್ರ ಪಾಲಾದ ನತದೃಷ್ಟರು. ಶ್ರೀರಾಮ ಖಾಸಗಿ ಮಾರುಕಟ್ಟೆ ಉದ್ಯೋಗಿ. ಅಶ್ವಿನ್ ಬೈಕಂಪಾಡಿಯಲ್ಲಿ ಜೆಸಿಬಿ ಘಟಕ ಹೊಂದಿದ್ದರು. ಇವರಿಬ್ಬರು ಸ್ನೇಹಿತ ಮುತ್ತುಲಿಂಗಂ ಜತೆ ಮಧ್ಯಾಹ್ನ ಬೀಚ್ಗೆ ತೆರಳಿದ್ದರು. ಕೆಲಹೊತ್ತಿನ ಬಳಿಕ ಮರಳಿನಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ನಂತರ ಶ್ರೀರಾಮ ಮತ್ತು ಅಶ್ವಿನ್ ಈಜಲು ನೀರಿಗೆ ಇಳಿದಿದ್ದರು. ಅಷ್ಟರಲ್ಲಿ ತೆರೆ ಅಪ್ಪಳಿಸಿ ಶ್ರೀರಾಮನನ್ನು ಸೆಳೆದಿತ್ತು. ಆತನನ್ನು ರಕ್ಷಿಸಲು ತೆರಳಿದ ಅಶ್ವಿನ್ ಕೂಡ ನೀರುಪಾಲಾದರು. ಸಂಜೆ ವೇಳೆಗೆ ಇಬ್ಬರ ಶವ ಬೀಚ್ ಕಿನಾರೆಯಲ್ಲಿ ಪತ್ತೆಯಾಗಿದೆ. ಘಟನೆ ಬಗ್ಗೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.