ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹುಚ್ಚು ನಾಯಿ ಕಡಿತ: ಬಿಹಾರ ಮೂಲದ ವ್ಯಕ್ತಿ ಸಾವು

Srinivasa Murthy VN
Updated On : 16 Jun 2014, 12:20 pm

ಅಂಕೋಲಾ: ಹುಚ್ಚು ನಾಯಿ ಕಡಿತಕ್ಕೆ ಚಿಕಿತ್ಸೆ ಫಲಿಸದೆ ಬಿಹಾರ ಮೂಲದ ವ್ಯಕ್ತಿಯೊಬ್ಬ ಇಲ್ಲಿನ ಬೇಲೆಕೇರಿ ಕ್ರಾಸ್‌ನ ಸೀಬರ್ಡ್ ಪ್ರದೇಶದಲ್ಲಿ ಭಾನುವಾರ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಉದ್ಯೋಗ ಅರಸಿ ಬಿಹಾರನಿಂದ ಬಂದ ತಂದೆ-ಮಗ ಇಬ್ಬರನ್ನೂ ಹುಚ್ಚುನಾಯಿ ಕಡಿದಿತ್ತು. ತಂದೆ ಮುನೀರ್ ಖಾನ್ (40) ಮೃತಪಟ್ಟರೆ, ಪುತ್ರ ಫಿರೋಜ್ ಖಾನ್ ಗಾಯಗೊಂಡಿದ್ದಾನೆ. ಕಡು ಬಡವರಾದ ಇವರು ಸೀಬರ್ಡ್ ಗುತ್ತಿಗೆ ಪಡೆದಿರುವ ಶೇಟ್ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಮೂರು ವರ್ಷಗಳಿಂದ ಕಂಪನಿಯ ತಾತ್ಕಾಲಿಕ ಶೆಡ್‌ನಲ್ಲೇ ನೆಲೆಸಿದ್ದರು.
ಮೇ 23ರಂದು ಹುಚ್ಚು ನಾಯಿ ನುಗ್ಗಿ ಬಂದು, ಮುನೀರ್‌ನನ್ನು ಹಿಗ್ಗಾಮುಗ್ಗಾ ಕಡಿದಿತ್ತು. ತಂದೆಯ ರಕ್ಷಣೆಗೆ ಹೋದ ಫಿರೋಜ್ ಖಾನ್ ಕೂಡ ನಾಯಿ ದಾಳಿಗೆ ತುತ್ತಾಗಿದ್ದ. ಇಬ್ಬರೂ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ವೈದ್ಯರ ಸಲಹೆಯಂತೆ ನಿಯಮಿತವಾಗಿ ಚುಚ್ಚುಮದ್ದನ್ನೂ ತೆಗೆದುಕೊಳ್ಳುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಮುನೀರ್ ಮೃತಪಟ್ಟಿದ್ದಾನೆ.
ತಂದೆ ಶವವನ್ನು ಬಿಹಾರಕ್ಕೆ ಕೊಂಡೊಯ್ದು ಸಂಸ್ಕಾರ ಮಾಡಲಾಗದಷ್ಟು ಆರ್ಥಿಕ ಮುಗ್ಗಟ್ಟಿನಲ್ಲಿರುವ ಫಿರೋಜ್ ಖಾನ್, ಅಂಕೋಲಾದಲ್ಲೇ ಅಂತಿಮ ಸಂಸ್ಕಾರ ನೆರವೇರಿಸಲು ನಿರ್ಧರಿಸಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement