ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಕ್ಸಲ್ ಪ್ರಕರಣದಡಿ ಖುಲಾಸೆಯಾಗಿದ್ದ ಕೃಷ್ಣ ನಾಪತ್ತೆ

Srinivasa Murthy VN
Updated On : 10 Mar 2014, 1:08 am

ಚಿಕ್ಕಮಗಳೂರು: ನಕ್ಸಲ್ ಸಂಘಟನುಲ್ಲಿ ತೊಡಗಿದ್ದ ಕಾರಣಕ್ಕಾಗಿ ಜೈಲು ವಾಸ ಅನುಭವಿಸಿ ನಂತರದಲ್ಲಿ ಬಿಡುಗಡೆಯಾಗಿದ್ದ ಜೆ.ಎಂ. ಕೃಷ್ಣ ಕಳೆದ 2 ತಿಂಗಳಿಂದ ಕಾಣೆಯಾಗಿದ್ದಾರೆ. ಈ ಸಂಬಂಧ ಕೃಷ್ಣ ಅವರ ಸಹೋದರ ಜೆ.ಎಂ. ಉಮೇಶ್ ಕಳಸ ಪೊಲೀಸರಿಗೆ ದೂರು ನೀಡಿದ್ದಾರೆ. ಕಳಸ ಹೋಬಳಿಯ ಹೆಮ್ಮಕ್ಕಿ ಗ್ರಾಮದಲ್ಲಿ ವಾಸವಾಗಿದ್ದ ಜೆ.ಎಂ. ಕೃಷ್ಣ, 2007ರಲ್ಲಿ ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕ್ಸಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಸ್ತಗಿರಿಯಾಗಿದ್ದರು. ಅವರು, ಮೈಸೂರು ಜೈಲಿನಲ್ಲಿದ್ದು, 2010ರಲ್ಲಿ ಪ್ರಕರಣ ಖುಲಾಸೆಯಾಗಿ ಬಿಡುಗಡೆಯಾಗಿದ್ದರು. ಮನೆಗೆ ಬಂದಿದ್ದ ಆತ ಏನೂ ಕೆಲಸ ಮಾಡದೆ, ಪರಿಚಯಸ್ಥರ ಮನೆಗೆ ತಿರುಗಾಡಿಕೊಂಡಿ ಮನೆಯಲ್ಲಿ 1 ವರ್ಷವಿದ್ದರು. ನಂತರ ನೆಂಟರ ಮನೆಗೆ ಹೋಗುತ್ತೇನೆಂದು ಅವರ ತಾಯಿ ಲಿಂಗಮ್ಮ ಅವರ ಬಳಿ ಹೇಳಿ ಹೋಗಿದ್ದರು. ಆದರೆ, ಇದುವರೆಗೂ ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿದ್ದಾರೆ. ಜೆ.ಎಂ. ಕೃಷ್ಣ ಅವರ ಸುಳಿವು ಸಿಕ್ಕಲ್ಲಿ ಪೊಲೀಸ್ ಕಂಟ್ರೋಲ್ ರೂಂ (08262235608, 948080 5100) ಅಥವಾ ಕಳಸ ಪೊಲೀಸ್ ಠಾಣೆ ಫೋನ್ ನಂ. (08263274877) ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ಎತ್ತಿನಹೊಳೆ ಎಂಟೈರ್ಲಿ ಡಿಫರೆಂಟ್ ಸದಾನಂದಗೌಡ
ಪುತ್ತೂರು: ನೇತ್ರಾವತಿ ನದಿ ತಿರುವು ಮತ್ತು ಎತ್ತಿನಹೊಳೆ ಯೋಜನೆ ಎಂಟೈರ್ಲಿ ಡಿಫರೆಂಟ್. ಒಂದಕ್ಕೊಂದು ಸಂಬಂಧವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ನಿಟ್ಟಿನಲ್ಲಿ ತಮ್ಮ ಚುನಾವಣಾ ಪ್ರಚಾರ ಪ್ರಾರಂಭಿಸಲು ಭಾನುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಡೀವಿ ಹೇಳುವುದೇನು?: ಎತ್ತಿನಹೊಳೆ ಎನ್ನುವ ತೊರೆ ಮತ್ತು ಇದರ ಪಕ್ಕದಲ್ಲಿ ಹರಿಯುವ 10 ತೊರೆಗಳಿಂದ ಮಳೆಗಾಲದ ಮೂರು ದಿನದ ನೀರನ್ನು ಸಂಗ್ರಹಿಸಿ 24 ಟಿಎಂಸಿ ನೀರು ಹಾಯಿಸುವುದು ಮಾತ್ರ ಈ ಯೋಜನೆ ಉದ್ದೇಶ. ನೇತ್ರಾವತಿ ನದಿ ತಿರುವು ಯೋಜನೆಯನ್ನು ನಾನೂ ವಿರೋಧಿಸುತ್ತೇನೆ. ಭೂ ಮಟ್ಟಕ್ಕಿಂತ 2850 ಅಡಿ ಮೇಲ್ಮಟ್ಟದಲ್ಲಿರುವ ಭಾಗದಲ್ಲಿ ಬೀಳುವ ಮಳೆ ನೀರನ್ನು ಮಾತ್ರ ಸಾಗಿಸುವ ಯೋಜನೆ ಕೈಗೊಳ್ಳಲಾಗಿದೆ. ಆದರೆ ಈ ವಿಚಾರವನ್ನು ಜನತೆಗೆ ಸಮರ್ಪಕವಾಗಿ ತಿಳಿಸುವಲ್ಲಿ ನಾವಾಗಲೀ, ಸರ್ಕಾರವಾಗಲೀ ವಿಫಲರಾಗಿದ್ದೇವೆ. ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರದಲ್ಲಿ 1800 ಅಡಿಯಷ್ಟು ತೋಡಿದರೂ ನೀರು ಸಿಗದಂಥ ದಯನೀಯ ಪರಿಸ್ಥಿತಿ ಇದೆ. ಆ ಭಾಗದ ಜನರಿಗೆ 24 ಟಿಎಂಸಿ ಮಳೆ ನೀರನ್ನು ಕೊಡುವುರಿಂದ ನೇತ್ರಾವತಿ ನದಿ ನೀರಿನ ಹರಿವಿಗೆ ಯಾವುದೇ ತೊಂದರೆ ಆಗಲಾರದು ಎಂದರು.

ಏರ್‌ಪೋರ್ಟಲ್ಲಿ ಅಕ್ರಮ ಚಿನ್ನ ವಶ
ಮಂಗಳೂರು: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ತಂದ 25.22 ಲಕ್ಷ ಮೌಲ್ಯದ 39 ಚಿನ್ನದ ಗಟ್ಟಿಗಳನ್ನು ಭಾನುವಾರ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ.  ದುಬೈನಿಂದ ಬೆಳಗ್ಗೆ ಆಗಮಿಸಿದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಂದ ಕೇರಳ ಪರ್ಕಳದ ಕೋಝಿಕ್ಕಂಟೆ ನಿವಾಸಿ, ಆರೋಪಿ ಮುಹಮ್ಮದ್ ರಫೀಕ್ ಎಂಬಾತನಿಂದ 816.450 ಗ್ರಾಂ ಚಿನ್ನದ ಗಟ್ಟಿಯನ್ನು ತಪಾಸಣೆ ವೇಳೆ ವಶಪಡಿಸಿಕೊಂಡರು. ಆರೋಪಿಯನ್ನು ಬಂಧಿಸಿ, ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement