ಕಾನ ಇಡ್ಯಾದಲ್ಲಿ ಮತ್ತೆ ನೈತಿಕ ಪೊಲೀಸ್ಗಿರಿ
ಮಂಗಳೂರು: ಜಾರ್ಖಂಡ್ ಮೂಲದ ಮುಸ್ಲಿಂ ಯುವಕ, ಯುವತಿ ಸಂಬಂಧಿಯ ಮನೆಯಲ್ಲಿ ಇದ್ದ ವೇಳೆ ನೈತಿಕ ಪೊಲೀಸರು ದಾಳಿ ನಡೆಸಿ, ಹಲ್ಲೆ ಮಾಡಿದ ಘಟನೆ ಭಾನುವಾರ ಸುರತ್ಕಲ್ ಸಮೀಪದ ಕಾನ ಇಡ್ಯಾದಲ್ಲಿ ನಡೆದಿದೆ. ಮೊಹಮ್ಮದ್ ಅನ್ಸಾರ್(25) ಗೆಳೆಯನ ಮನೆಯಲ್ಲಿ ಪದವಿಧರೆ ಸಂಬಂಧಿ ಯುವತಿ ಜತೆ ತಿಂಡಿ ತಿನ್ನುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ. ಜಾರ್ಖಂಡ ಮೂಲದ ಯುವತಿಗೆ ಈತ ದೂರದ ಸಂಬಂಧಿ. ಅನ್ಸಾರ್ ಮೇಸ್ತ್ರಿ ಕೆಲಸ ಮಾಡುತ್ತಿದ್ದ. ತನ್ನ ಗೆಳೆಯ ಶಿಫಾರಸು ಮೇರೆಗೆ ಟೈಲರಿಂಗ್ ಕೆಲಸ ತೆಗೆಸಿಕೊಡುವುದಾಗಿ ಹೇಳಿ ಸುರತ್ಕಲ್ಗೆ ಕರೆದುಕೊಂಡು ಬಂದಿದ್ದ. ಆದರೆ, ಗೆಳೆಯ ಕಚೇರಿಗೆ ಹೋಗದೆ ಮನೆಯಲ್ಲಿ ಇದ್ದ. ಯುವತಿ ಜತೆ ಅನ್ಸಾರ್ ಮನೆಗೆ ತಿಂಡಿ ತೆಗೆದುಕೊಂಡು ಹೋಗಿದ್ದ. ಮೂರು ಮಂದಿ ತಿಂಡಿ ತಿನ್ನುತ್ತಿದ್ದ ವೇಳೆಗೆ ದಾಳಿ ನಡೆದಿದೆ. ಮೂವರು ಜಾರ್ಖಂಡ್ ಮೂಲದವರು. ಯುವತಿ ತಾಯಿ ಪಂಜಿಮೊಗರಲ್ಲಿ ವಾಸವಿದ್ದಾರೆ. ಹಿಂದೂ ಯುವತಿ, ಮುಸ್ಲಿಂ ಯುವಕನ ಜತೆ ಬಂದ ಕಾರಣಕ್ಕೆ ಹಲ್ಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬುರ್ಕಾ ಹಾಕಿಲ್ಲ ಎಂಬ ಕಾರಣಕ್ಕೆ ಹಲ್ಲೆ ನಡೆದಿರುವ ಸಾಧ್ಯತೆಗಳಿವೆ. ಸುರತ್ಕಲ್ ಪೊಲೀಸರು ಹೇಳಿಕೆ ಪಡೆದು ಬಿಟ್ಟಿದ್ದಾರೆ.