ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೊಲೆ, ಅತ್ಯಾಚಾರ ಯತ್ನ: ತಲೆಮರೆಸಿದ್ದ ಆರೋಪಿ ಸೆರೆ

Srinivasa Murthy VN
Updated On : 17 Mar 2014, 10:38 am

ವಿಟ್ಲ: ಪತ್ನಿ ಕೊಲೆ ಯತ್ನ ಹಾಗೂ ನಾದಿನಿ ಅತ್ಯಾಚಾರ ಯತ್ನ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಲತಃ ಮುಂಬೈ ಸೀತಾ ಕ್ಯಾಂಪ್ ನಿವಾಸಿ ಹಸನ್ ಅವರ ಪುತ್ರ ಹನೀಫ್ ಯಾನೆ ಜೋಗಿ ಹನೀಫ್ (31) ಬಂಧಿತ ಆರೋಪಿ. ಈತ ಕೇಪು ಗ್ರಾಮದ ನಿರ್ಕಾಜೆ ಸಮೀಪದ ಕುಕ್ಕೆಬೆಟ್ಟು ನಿವಾಸಿ ಮಹಮ್ಮದ್ ಅವರ ಪುತ್ರಿ ಸೆಲಿಮಾ (28) ಎಂಬಾಕೆಯನ್ನು ವಿವಾಹವಾಗಿದ್ದ. ಬಳಿಕ ವರದಕ್ಷಿಣೆಗಾಗಿ ಆಕೆಗೆ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಈತ ತನ್ನ ಪತ್ನಿಗೆ ಗಂಭೀರವಾಗಿ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಪತ್ನಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು.
ಇದಾದ ಕೆಲ ದಿನಗಳ ಹಿಂದೆ ಆತ ತನ್ನ ಮನೆಗೆ ಬಂದು, ನನ್ನ ಮೇಲೆ ದೂರು ನೀಡುತ್ತೀಯಾ ಎಂದು ಬೆದರಿಸಿ, ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ಬಗ್ಗೆ ನಾದಿನಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು. ಈತನ ವಿರುದ್ಧ ವಿಟ್ಲ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ಶನಿವಾರ ಈತ ಕೇಪು ಎಂಬಲ್ಲಿರುವ ಪತ್ನಿಯ ಮನೆಗೆ ಬಂದಿದ್ದ. ಬಳಿಕ ಅಲ್ಲಿಂದ ಸಾಲೆತ್ತೂರು ಕಡೆ ತೆರಳಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಧನ ವಿಧಿಸಲಾಗಿದೆ.

ಪತ್ರಿಕೆ ಮಾರಾಟದ ಗೂಡಂಗಡಿ ಧ್ವಂಸ
ಮೂಲ್ಕಿ: ಮೂಲ್ಕಿಯ ಬಸ್ ನಿಲ್ದಾಣದ ಬದಿಯಲ್ಲಿರುವ ಪತ್ರಿಕೆ ಮಾರಾಟದ ಗೂಡಂಗಡಿಯನ್ನು ಶನಿವಾರ ರಾತ್ರಿ ಯಾರೋ ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಗೂಡಂಗಡಿಯ ಗಂಗಾಧರ ಶೆಟ್ಟಿ ಭಾನುವಾರ ಬೆಳಗ್ಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಪತ್ರಿಕೆ ಮಾರಾಟದಿಂದ ಬಂದ ಲಾಭದಿಂದ ಜೀವನ ನಡೆಸುತ್ತಿರುವ ಗಂಗಾಧರ ಶೆಟ್ಟಿಯವರು ಈ ಘಟನೆಯಿಂದ ಕಂಗಲಾಗಿದ್ದು ಸ್ಥಳೀಯರು ತಾತ್ಕಾಲಿಕವಾಗಿ ಗೂಡಂಗಡಿಯನ್ನು ಸರಿಪಡಿಸಿ ಪತ್ರಿಕೆ ಮಾರಾಟಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಅಪಘಾತ: ಇಬ್ಬರು ಪಾದಚಾರಿಗಳಿಗೆ ಗಾಯ
ಕಾಪು: ಇಲ್ಲಿನ ಪಡು ಗ್ರಾಮದ ಕೊಪ್ಪಲಂಗಡಿ ಪ್ರಶಾಂತ್ ಆಸ್ಪತ್ರೆಯ ಎದುರು ನಡೆದುಕೊಂಡು ಹೋಗುತ್ತಿದ್ದ ಇಬ್ಬರಿಗೆ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.
 ಗಾಯಗೊಂಡವರನ್ನು ಕಿರಣ ಮತ್ತು ರೋಶಿನಿ ಎಂದು ಗುರುತಿಸಲಾಗಿದೆ. ಟಾಟಾ ಏಸ್ ವಾಹನ ಚಾಲಕ ತನ್ನ ವಾಹನವನ್ನು ಅತೀವೇಗವಾಗಿ ಚಲಾಯಿಸಿಕೊಂಡು ಬಂದೀರುವುದೇ ಈ ಅಪಘಾತಕ್ಕೆ ಕಾರಣ ಎಂಬುದಾಗಿ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement