'ಕಡಲ ನೀರು ಕುಡಿಯಲು ಯೋಗ್ಯ ಮಾಡುವ ಯೋಜನೆ ಜಾರಿಯಾಗಲಿ'
ಮಂಗಳೂರು: ಸಮುದ್ರದ ಉಪ್ಪು ನೀರಿನಿಂದ ಲವಣಾಂಶ ಹೊರ ತೆಗೆದು ಅದನ್ನು ಕುಡಿಯಲು ಯೋಗ್ಯ ಮಾಡಬಹುದು. ಈಬಗ್ಗೆ ಅನೇಕ ಯೋಜನೆಗಳಿವೆ, ಇದನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಎ.ಶಾಮರಾವ್ ಪ್ರತಿಷ್ಠಾನ ಅಧ್ಯಕ್ಷ ಸಿಎ ರಾಘವೇಂದ್ರ ರಾವ್ ಹೇಳಿದರು.
ಮುಕ್ಕ ಶ್ರೀನಿವಾಸ ಸ್ಕೂಲ್ ಆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ವಿಶ್ವ ಜಲ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರಿಂಗ್ ಅಸೋಸಿಯೇಶನ್ ಅಧ್ಯಕ್ಷ ಪಿ.ರಂಗನಾಥ್ ಐತಾಳ್ ಮಾತನಾಡಿದರು.
ಎನ್‌ಐಟಿಕೆ ಪ್ರೊ. ಡಾ.ಸುಭಾಶ್ ಸಿ. ಯಾರಗಲ್, ನಿಕಟ ಪೂರ್ವ ಅಧ್ಯಕ್ಷ ವಿಜಯವಿಷ್ಣು ಮಯ್ಯ, ಎಸಿಸಿ ತಾಂತ್ರಿಕ ವಿಭಾಗ ಮ್ಯಾನೇಜರ್ ಉಮೇಶ್ ಶೆಟ್ಟಿ, ಪ್ರಾಂಶುಪಾಲ ಡಾ.ಶ್ರೀ ಪ್ರಕಾಶ್ ಬಿ., ಸಿವಿಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ರಾಮಕೃಷ್ಣ ಹೆಗಡೆ ಇದ್ದರು.
ಎಂಜಿನಿಯರ್ ವಿಜಯವಿಷ್ಣು ಮಯ್ಯ ಮತ್ತು ಉಮೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನೀರಿನ ಮಹತ್ವ ಸಮಗ್ರ ಮಾಹಿತಿ ಉಳ್ಳ ಕರಪತ್ರವನ್ನು ಅನಾವರಣಗೊಳಿಸಿ ಹಂಚಲಾಯಿತು. ಪ್ರಣೀತಾ ಕೋಟ್ಯಾನ್, ಹಿತಾ ಕುಂಬ್ಳೆ ನಿರೂಪಿಸಿದರು.