'ನೆರೆಮನೆಯಾಕೆ ಪ್ರೀತಿ' ಟೆಕ್ಕಿ ಪತ್ನಿ ಕೊಲೆಗೆ ಕಾರಣ: ಪೆಟ್ರೋಲ್ ಹಾಕಿ ಸುಟ್ಟ ಮಹಿಳೆಯ ಸೆರೆ
ಮಂಗಳೂರು: ಗುಜ್ಜರಕೆರೆಯ ಮನೆಯಲ್ಲಿ ಆಂಧ್ರಪ್ರದೇಶ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಪತ್ನಿ ಸೌಮ್ಯಳನ್ನು ಕೊಲೆ ಮಾಡಿದ ನೆರೆ ಮನೆಯ ಮಹಿಳೆ ಶ್ರದ್ಧಾಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಮಹಿಳೆ ಕೊಲೆ ಮಾಡುವ ಹಿಂದಿನ ದಿನ ಸಮೀಪದ ಪೆಟ್ರೋಲ್ಬಂಕ್ನಿಂದ ಪೆಟ್ರೋಲ್ ಪಡೆದುಕೊಂಡು ಹೋಗಿರುವುದು ಪೊಲೀಸರಿಗೆ ಈ ಪ್ರಕರಣದಲ್ಲಿ ತನಿಖೆಗೆ ದೊಡ್ಡ ತಿರುವು ನೀಡಿತ್ತು.
ಕಿರಣ್ ಮತ್ತು ಶ್ರದ್ಧಾ ಜತೆಯಾಗಿ ಕೆಲಸ ಮಾಡುತ್ತಿದ್ದರು. ಆಗ ಗೆಳೆತನ ಇತ್ತು. ಮೃತ ಆಂಧ್ರ ಪ್ರದೇಶ ಮೂಲದ ಸೌಮ್ಯ ಕಾಲೇಜ್ ಕಲಿತಿರಲಿಲ್ಲ. ಶ್ರದ್ಧಾಗೆ ಗಂಡನ ಜತೆ ಗೆಳೆತನ ಇರುವುದು ಸೌಮ್ಯಗೆ ಗೊತ್ತಿತ್ತು. ಇದೇ ವಿಚಾರದಲ್ಲಿ ಗಂಡನ ಜತೆಯೂ ಜಗಳ ಆಗಿತ್ತು.
ಎರಡು ಬಾರಿ ನಮ್ಮ ಮನೆಯ ಗ್ಯಾಸ್ ಸಿಲಿಂಡರ್ ಸ್ಟವ್ ಆನ್ ಮಾಡಿ ಕೊಲ್ಲಲು ನೋಡಿದ್ದಳು. ನನಗೆ ಕೊಲೆ ಮಾಡಲು ಯತ್ನಿಸಿದಳು. ನನ್ನ ಗಂಡನನ್ನು ಏಕೆ ಪ್ರೀತಿಸುತ್ತಿದ್ದಿ ಎಂದು ಆಗಾಗ ಕೇಳಿ ಜಗಳವಾಡುತ್ತಿದ್ದಳು.
ನಿನ್ನೆಯೂ ಜಗಳವಾಗಿದೆ. ಇಬ್ಬರು ಪರಸ್ಪರ ದಿಂಬು ಒತ್ತಿ ಹಿಡಿದು ಕೊಲೆ ಮಾಡಲು ಯತ್ನಿಸಿದೆವು. ಆದರೆ ನಾನು ಯಶಸ್ವಿಯಾದೆ.
ಆಕೆ ಪ್ರಜ್ಞಾಶೂನ್ಯಳಾದಾಗ ನಾನು ಮಗುವನ್ನು ಕರೆದುಕೊಂಡು ಹೊರ ಬಂದೆ. ಒಳಗೆ ಪೆಟ್ರೋಲ್ ಹಾಕಿ, ಬೆಂಕಿ ಕಡ್ಡಿ ಗೀರಿ ಬಂದೆ ಎಂದು ಶ್ರದ್ಧಾ ಪೊಲೀಸರ ಬಳಿ ಬಾಯಿ ಬಿಟ್ಟಿದ್ದಾಳೆ.