ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಪ್ಪನಾಡು: ಮಹಾರಥೋತ್ಸವ

Srinivasa Murthy VN
Updated On : 24 Mar 2014, 10:54 am

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಮಹಾ ರಥೋತ್ಸವ ವಿಜ್ರಂಭಣೆಯಿಂದ ಜರುಗಿತು. ಬಲಿ ಉತ್ಸವದ ಬಳಿಕ ಓಕುಳಿ, ಪೇಟೆ ಸವಾರಿ, ದೇವಳದಲ್ಲಿ ಶ್ರೀ ದೇವಿ ಮತ್ತು ಸಸಿಹಿತ್ಲು ಶ್ರೀ ಭಗವತಿಯರ ಭೇಟಿ ಬಳಿಕ ಮಹಾ ರಥೋತ್ಸವ ಜರುಗಿತು. ಮಹಾರಥದ ಪ್ರದಕ್ಷಿಣೆ ಬಳಿಕ ಚಂದ್ರಶೇನ ಕುದ್ರುವಿನಲ್ಲಿ ಜಳಕದ ಬಳಿಕ ಬೆಳಗ್ಗೆ ದೇವಳದಲ್ಲಿ ಬಲಿ ಉತ್ಸವ ನಡೆದು ಧ್ವಜಾರೋಹಣ ನಡೆಯಿತು. ದೇವಳದ ಕಾರ್ಯನಿರ್ವಹಣಾಧಿಕಾರಿ ಬಿ. ನಟರಾಜು, ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಎನ್.ಎಸ್. ಮನೋಹರ್ ಶೆಟ್ಟಿ ಇದ್ದರು.

'ಗ್ರಾಹಕರ ಶೋಷಣೆಯಿಂದ ಭ್ರಷ್ಟಾಚಾರ'
ಮಂಗಳೂರು: ಜನನ ಪ್ರಮಾಣಪತ್ರದಿಂದ ಮರಣ ಪ್ರಮಾಣಪತ್ರದವರೆಗೆ ಪ್ರತಿ ಹಂತದಲ್ಲೂ ಗ್ರಾಹಕರ ಶೋಷಣೆ ನಡೆಯುತ್ತಿದ್ದು, ಇದು ಭ್ರಷ್ಟಾಚಾರಕ್ಕೆ ಮೂಲ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದ್ದಾರೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವತಿಯಿಂದ ಇತ್ತೀಚೆಗೆ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಗ್ರಾಹಕರಿಗೆ ಸಂಬಂಧಪಟ್ಟ ಚಟುವಟಿಕೆಗಳ ಕುರಿತು ವಿಷಯಗಳನ್ನೊಳಗೊಂಡ ವೆಬ್‌ಸೈಟ್ ಉದ್ಘಾಟಿಸಿದರು. ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಎಂ.ಜೆ. ಸಾಲಿಯಾನ್, ಸಿಂಡಿಕೇಟ್ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ.ಎನ್.ಕೆ. ತಿಂಗಳಾಯ, ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಸಿ. ಪ್ರಭು, ಆಹಾರ ನಾಗರಿಕ ಸರಬರಾಜು ಉಪನಿರ್ದೇಶಕ ಶರಣ ಬಸಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement