ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಿಜೆಪಿಗೆ ಈ ಬಾರಿಯೂ ಮುಖಭಂಗ ಖಾತ್ರಿ: ರಮಾನಾಥ ರೈ

Srinivasa Murthy VN
Updated On : 24 Mar 2014, 10:57 am

ಬಂಟ್ವಾಳ: ಹಿಂದೂ ಸಮಾವೇಶಗಳ ಮೂಲಕ ಎಲ್ಲರ ಮನಸ್ಸನ್ನೂ ನೋಯಿಸುವ ಸಂಘ ಪರಿವಾರದ ಪಕ್ಷವೆನಿಸಿದ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿಯೂ ಮುಖಭಂಗ ಖಾತ್ರಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಪಟ್ಟಿದ್ದಾರೆ. ಸಾಲೆತ್ತೂರು ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಮಂಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಬಿ. ಜನಾರ್ದನ ಪೂಜಾರಿ ಚುನಾವಣಾ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣೆ ಬಂದಾಗ  ಸಮಾವೇಶ: ಬಿಜೆಪಿಯವರು ಚುನಾವಣೆ ಸಂದರ್ಭ ಮಾತ್ರ ಹಿಂದೂ ಸಮಾವೇಶ, ಹಿಂದೂ ಸಂಗಮದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಮನಸ್ಸನ್ನು ಕೆರಳಿಸುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ಹರಿಕೃಷ್ಣ ಬಂಟ್ವಾಳ ವ್ಯಂಗ್ಯವಾಡಿದರು.
ಕಾಂಗ್ರೆಸ್‌ಗಾಗಿ ಸಹಿಸಿಕೊಂಡಿದ್ದೇವೆ: ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಮಹಮ್ಮದ್ ಮಾತನಾಡಿ, ನರೇಂದ್ರ ಮೋದಿಗೆ ಈ ದೇಶದ ನಿಜವಾದ ಇತಿಹಾಸವೇ ತಿಳಿದಿಲ್ಲ. ಕಲ್ಲಡ್ಕದಲ್ಲಿ ನಡೆದ ಕಲ್ಲು ತೂರಾಟ ಮೋದಿ ಮಾದರಿ ಆಡಳಿತಕ್ಕೊಂದು ನಿದರ್ಶನ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಪಂಚಾಯಿತಿ ಸದಸ್ಯ ತುಂಬೆ ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯ ಮಾಧವ ಮಾವೆ ಮಾತನಾಡಿದರು.

ರಾಜಕೀಯ ಘನತೆಗೆ ಬಿಜೆಪಿ ಬೆಂಬಲಿಸಿ
ಮಂಗಳೂರು: ರಾಜಕೀಯ ಮತ್ತು ಪ್ರಜಾಪ್ರಭುತ್ವದ ಘನತೆ ಮರು ಸ್ಥಾಪಿಸಲು ಬಿಜೆಪಿ ಗೆಲ್ಲಿಸುವಂತೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಪ್ರಭಾಮಾಲಿನಿ ಹೇಳಿದ್ದಾರೆ. ಕಂಕನಾಡಿ, ಮರೋಳಿ, ವೆಲೆನ್ಸಿಯಾ ಭಾಗಗಳಲ್ಲಿ ಇತ್ತೀಚೆಗೆ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ದದಕ್ಷ, ಪ್ರಾಮಾಣಿಕ ನಡವಳಿಕೆಯಿಂದ ಪ್ರದೇಶಾಭಿವೃದ್ಧಿ ನಿಧಿಯನ್ನು ಸಮರ್ಥವಾಗಿ ಬಳಸಿದ ಸಂಸದರಲ್ಲಿ ನಳಿನ್ ಕುಮಾರ್ ಮೊದಲಿಗರು. ಅವರನ್ನು ಚುನಾಯಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ವಿನಂತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement