ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸ್ಟೆಪ್ಲರ್ ಪಿನ್ ರೂಪದಲ್ಲಿ ಚಿನ್ನ ಕಳ್ಳಸಾಗಾಟ

Srinivasa Murthy VN
Updated On : 24 Mar 2014, 10:55 am

ಮಂಗಳೂರು: ಸ್ಟೆಪ್ಲೆರ್ ಪಿನ್‌ಗಳು ರೂಪದಲ್ಲಿ ದುಬೈಯಿಂದ ಮಂಗಳೂರಿಗೆ ಚಿನ್ನ ಕಳ್ಳಸಾಗಾಟಕ್ಕೆ ಯತ್ನಿಸುತ್ತಿದ್ದ ಕಾಸರಗೋಡಿನ ವ್ಯಕ್ತಿಯನ್ನು ಬಜಪೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. 577 ಗ್ರಾಂ. ಚಿನ್ನವನ್ನು ಡ್ರೈಫ್ರೂಟ್ಸ್ ಬಾಕ್ಸ್ ಒಳಗೆ ಇರಿಸಿದ್ದರು. ಚಿನ್ನದ ಪಿನ್‌ಗಳಿಗೆ ಬೆಳ್ಳಿ ಬಣ್ಣ ತುಂಬಿದ್ದು, ಮೇಲ್ನೋಟಕ್ಕೆ ತಿಳಿಯುತ್ತಿರಲಿಲ್ಲ. ಆದರೆ ಡ್ರೈಫ್ರೂಟ್ಸ್ ಬಾಕ್ಸ್ ಒಳಗೆ ಲೋಹ ನೋಡಿದ ಅಧಿಕಾರಿಗಳಿಗೆ ಸಂಶಯ ಬಂದು ತಪಾಸಣೆ ನಡೆಸಿದಾಗ ಚಿಲ್ಲ ಕಳ್ಳ ಸಾಗಾಟ ಹೊರಬಿತ್ತು. ಚಿನ್ನದ ಒಟ್ಟು ಮೌಲ್ಯ ರು.  17,19,460 ಅಂದಾಜಿಸಲಾಗಿದೆ. ಕಾಸರಗೋಡು ಚೇಂಗಳ ನಿವಾಸಿ ನೆಸಿಫ್ ಕೋವಲ್ (28) ಭಾನುವಾರ ಬಳೆಗ್ಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬಜಪೆಗೆ ಆಗಮಿಸಿದ್ದ. ಆರೋಪಿಯನ್ನು ಪೊಲೀಸರ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಕಸ್ಟಮ್ಸ್ ಸಹಾಯಕ ಆಯುಕ್ತ ಕೃಷ್ಣ ಪ್ರಸಾದ್ ನೈತೃತ್ವದಲ್ಲಿ ನಡೆದ  ಕಾರ್ಯಾಚರಣೆಯಲ್ಲಿ ಅಧೀಕ್ಷಕರಾದ ಪ್ರಭಾಕರ ಪೂಜಾರಿ, ಲಯನೆಲ್ ಫರ್ನಾಂಡಿಸ್, ಬಿ.ಎ.ಕರಿಯಪ್ಪ, ಎಚ್.ಜಿ.ಯೋಗೇಶ್, ಇನ್‌ಸ್ಪೆಕ್ಟರ್‌ಗಳಾದ ಕುಮಾರಸ್ವಾಮಿ, ಕೆ.ಟಿ.ಪ್ರೀತಿ ಸುಮ, ಎಸ್.ರಂಜನ್  ಬೆಹ್ರಾ, ಅಂಕಿತ್ ಕುಮಾರ್, ಹವಲ್ದಾರ್ ಗುಲಾಬಿ ಭಾಗವಹಿಸಿದರು.

ಅಪಘಾತ; ಕಾರು ಚಾಲಕ ಗಾಯ
ಬಂಟ್ವಾಳ: ಬಿ.ಸಿ. ರೋಡ್- ಕಡೂರು ರಾಷ್ಟ್ರೀಯ ಹೆದ್ದಾರಿಯ ವಗ್ಗ ಬಳಿ ಖಾಸಗಿ ಬಸ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಾಯಗೊಂಡ ಘಟನೆ ಭಾನುವಾರ ಸಂಜೆ ಸಂಭವಿಸಿದೆ. ಬಿ.ಸಿ. ರೋಡ್‌ನಿಂದ ಬೆಳ್ತಂಗಡಿ ಕಡೆಗೆ ಸಾಗುತ್ತಿದ್ದ ಬಸ್‌ಗೆ ಎದುರಿನಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಡಿದು ಬಳಿಕ ಬಸ್‌ನ ಅಡಿ ಭಾಗಕ್ಕೆ ನುಗ್ಗಿ ನಿಂತಿದೆ. ಘಟನೆಯಿಂದಾಗಿ ಕಾರು ಹಾಗೂ ಬಸ್‌ನ ಮುಂಭಾಗ ಜಖಂಗೊಂಡಿದ್ದು ಕಾರಿನ ಚಾಲಕ ಗಾಯಗೊಂಡಿದ್ದಾನೆ. ಕಾರಿನಲ್ಲಿ ಚಾಲಕ ಸಹಿತ ಮೂವರು ಪ್ರಯಾಣಿಸುತ್ತಿದ್ದು ಇವರ ಹೆಸರು, ವಿಳಾಸ ತಿಳಿದು ಬಂದಿಲ್ಲ. ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement