ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದು ಭಟ್ಕಳ ತಾಲೂಕು ಸಾಹಿತ್ಯ ಸಮ್ಮೇಳನ

Srinivasa Murthy VN
Updated On : 27 Mar 2014, 10:52 am

ಕನ್ನಡಪ್ರಭ ವಾರ್ತೆ, ಭಟ್ಕಳ, ಮಾ. 26
ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾ. 27 ಗುರುವಾರ  ಶಿರಾಲಿಯ ಸಾಲೆಮನೆ ಹಿರಿಯ ಪ್ರಾಥಮಿಕ ಶಾಲೆಯ ಎಣ್ಣೆಮಡಿ ವೆಂಕಟರಮಣಯ್ಯ ವೇದಿಕೆಯಲ್ಲಿ ನಡೆಯಲಿದೆ. ಚಂದ್ರು ಮೊಗೇರ ಬೆಳ್ನಿ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಬೆಳಗ್ಗೆ ಭಟ್ಕಳ ಉಪವಿಭಾಗಾಧಿಕಾರಿ ಕೂರ್ಮಾರಾವ್ ಎಂ. ರಾಷ್ಟ್ರ ಧ್ವಜಾರೋಹಣ,  ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ರೋಹಿದಾಸ ನಾಯ್ಕ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದು, ಬೆಳಗ್ಗೆ 9ರಿಂದ 10ರ ವರೆಗೆ ಸಮ್ಮೇಳನಾಧ್ಯಕ್ಷರ ಜೊತೆಯಲ್ಲಿ ಸಾಹಿತ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಬೆ.10ರಿಂದ 1ರ ವರೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಲೆಮನೆ ವಿದ್ಯಾರ್ಥಿಗಳಿಂದ  ನಾಡಗೀತೆ, ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಾರಾಯಣ ಮಧ್ಯಸ್ಥ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಹಿರಿಯ ಸಾಹಿತಿ ಜಿ.ವಿ. ಸನದಿ ಉದ್ಘಾಟಿಸಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಜಯಾ ಯಾಜಿ ಕನ್ನಡ ಬಾವುಟ ಹಸ್ತಾಂತರಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ಸೈಯದ್ ಝಮಿರುಲ್ಲಾ ಷರೀಫ ಕೃತಿ ಬಿಡುಗಡೆ ಮಾಡಲಿದ್ದಾರೆ. ಭಟ್ಕಳ ಡಿಎಸ್‌ಪಿ ಮುತ್ತುರಾಜ್ ಎಂ. ಪುಸ್ತಕ ಮಳಿಗೆ ಉದ್ಘಾಟಿಸಲಿದ್ದಾರೆ. ನೌಕರರ ಸಂಘದ ಅಧ್ಯಕ್ಷ ಎಂ.ಬಿ. ನಾಯ್ಕ ಕಲಾ ಪ್ರದರ್ಶನ ಉದ್ಘಾಟಿಸಲಿದ್ದು, ಸಾಹಿತಿ ಡಾ. ಆರ್.ವಿ. ಸರಾಫ ದ್ವಾರಗಳನ್ನು ಉದ್ಘಾಟಿಸುವರು. ಮಧ್ಯಾಹ್ನ 2ರಿಂದ 3.30ರ ವರೆಗೆ ವಿಚಾರಗೋಷ್ಠಿ ಹಾಗೂ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ,  4.30ರಿಂದ 6-30ರ ವರೆಗೆ ಸಮಾರೋಪ ಸಮಾರಂಭ, ಸನ್ಮಾನ ಸಮಾರಂಭ ನಡೆಯಲಿದೆ. ಸಮ್ಮೇಳನಾಧ್ಯಕ್ಷ ಚಂದ್ರ ಮೊಗೇರ ಅಧ್ಯಕ್ಷತೆ ವಹಿಸಿ ಮಾತನಾಡಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರೋಹಿದಾಸ ನಾಯ್ಕ ಸಮಾರೋಪ ಭಾಷಣ ಮಾಡಲಿದ್ದು, ಭಟ್ಕಳ ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಟಿ. ನಾಯ್ಕ ಉಪಸ್ಥಿತರಿದ್ದು ಸಾಹಿತಿಗಳನ್ನು ಸನ್ಮಾನಿಸಲಿದ್ದಾರೆ.   ಆರ್.ಜಿ. ಭಟ್ಟ, ಸಾಹಿತಿ ಪಿ.ಆರ್. ನಾಯ್ಕ,  ವಿ.ಡಿ. ಮೊಗೇರ, ಶಂಕರ ನಾಯ್ಕ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ಹನಿಗತೆಗೆ ಆಹ್ವಾನ
ಶಿರಸಿ:  ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಏಪ್ರಿಲ್ 27ರಂದು ಮುಂಡಿಗೆಸರ ಶ್ರೀಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಜರುಗಲಿದೆ. ಕವಿಗೋಷ್ಠಿ ಹಾಗೂ ಹನಿಗತೆ ವಾಚನದಲ್ಲಿ ಪಾಲ್ಗೊಳ್ಳುವವರು 3 ಕವನ, ಕತೆಗಾರರು ಎರಡು ಹನಿಗತೆಗಳನ್ನು ಏ. 7ರೊಳಗೆ ಮನೋಹರ ಮಲ್ಮನೆ, ಅಧ್ಯಕ್ಷರು, ಕಸಾಪ ತಾಲೂಕು ಘಟಕ, ಶ್ರೀಮಾತಾ, ದುಂಡಶಿ ನಗರ, ಶಿರಸಿ 581402 ಈ ವಿಳಾಸಕ್ಕೆ ಕಳಿಸಬೇಕು. ಕವಿತೆಗಳು ಸುಮಾರು 20 ಸಾಲು, ಹನಿಗತೆ ಫುಲ್‌ಸ್ಕೇಪ್ ಒಂದು ಪುಟ ಮೀರಬಾರದು. ಸಮಯಾವಕಾಶದ ಮಿತಿಯಲ್ಲಿ ಆಯ್ದ 20 ಕವಿಗಳಿಗೆ ಹಾಗೂ ಆರು ಮಂದಿ ಹನಿಕತೆ ಬರಹಗಾರರಿಗೆ ತಲಾ ಒಂದು ಕವಿತೆ-ಹನಿಗತೆಗೆ ಅನುವು ಮಾಡಿಕೊಡಲಾಗುತ್ತದೆ. ಬರಹ ಕಳಿಸುವವರು ತಮ್ಮ ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ನಮೂದಿಸಿರಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement