ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೊನೆಗೂ ಸುಳ್ಯಕ್ಕೆ ಸಿಕ್ತು ಗೂಟದ ಕಾರು

Srinivasa Murthy VN
Updated On : 25 May 2014, 12:54 pm

ಸುಳ್ಯ: ಕೊನೆಗೂ ಕಾಂಗ್ರೆಸ್ ಸರ್ಕಾರ ಸುಳ್ಯಕ್ಕೆ ಇದೇ ಪ್ರಥಮವಾಗಿ ಗೂಟದ ಕಾರು ದಯಪಾಲಿಸುವ ಮೂಲಕ ಪ್ರಾತಿನಿಧ್ಯ ನೀಡಿದೆ.
ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಲಹಾ ಮಂಡಳಿ ಅಧ್ಯಕ್ಷರಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅಧಿಕಾರ ವಹಿಸಿಕೊಂಡಿದ್ದಾರೆ. ಕೇಂದ್ರ ಸಲಹಾ ಮಂಡಳಿ ಅಧ್ಯಕ್ಷೆ ಪ್ರೇಮಾ ಕಾರ್ಯಪ್ಪ ಹಾಗೂ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಅವರು ಅಧಿಕಾರ ಸ್ವೀಕರಿಸಿದರು.
ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ದಿವ್ಯಪ್ರಭಾ ಚಿಲ್ತಡ್ಕ ನೇಮಕವಾಗಿತ್ತು. ಆದರೆ ಈ ನೇಮಕ ವಿಷಯ ತಿಳಿಯುತ್ತಿದ್ದಂತೆ ಸುಳ್ಯದ ಕೆಲವು ಹಿರಿಯ ನಾಯಕರು ಸುದ್ದಿಗೋಷ್ಠಿ ಕರೆದು ಈ ನೇಮಕವನ್ನು ವಿರೋಧಿಸಿದ್ದರು.
ಸಾಕಷ್ಟು ಸುದೀರ್ಘ ಕಾಲ ಪಕ್ಷದಲ್ಲಿ ಸೇವೆ ಸಲ್ಲಿಸಿದವರು ಇದ್ದರೂ ಕೂಡಾ ಕೆಲವು ವರ್ಷದ ಹಿಂದಷ್ಟೇ ಪಕ್ಷದಲ್ಲಿ ಸಕ್ರಿಯರಾದ ದಿವ್ಯಪ್ರಭಾಗೆ ಈ ಸ್ಥಾನ ನೀಡಿದ್ದಾರೆ ಎಂಬುದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನು ರಾಜ್ಯದ ಹಲವು ನಾಯಕರ ಗಮನಕ್ಕೂ ತಂದರು.
ಈ ಸಂದರ್ಭ ಮತ್ತೆ ಕೆಲವು ನಾಯಕರು ದಿವ್ಯಪ್ರಭಾ ಬೆಂಬಲಕ್ಕೆ ನಿಂತು ಅವರ ನೇಮಕವನ್ನು ಬೆಂಬಲಿಸಿದ್ದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಕೂಡಾ ನೇಮಕವನ್ನು ಸ್ವಾಗತಿಸಿತ್ತು.
ಹೀಗೆ ಒಟ್ಟಾರೆ ಪಕ್ಷದೊಳಗೆ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ದಿವ್ಯಪ್ರಭಾ ನೇಮಕದ ಅಂತಿಮ ಆದೇಶಕ್ಕೆ ತಡೆ ನೀಡಲಾಗಿತ್ತು. ಲೋಕಸಭಾ ಚುನಾವಣೆ ನಡೆದು ಫಲಿತಾಂಶವೂ ಬಂದ ಬಳಿಕ ಮತ್ತೆ ಆದೇಶವಾದ ಹಿನ್ನೆಲೆಯಲ್ಲಿ  ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಬಿಜೆಪಿಯಿಂದ ಸುಳ್ಯದವರಾದ ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿ, ಶೋಭಾ ಕರಂದ್ಲಾಜೆ ಮಂತ್ರಿಯಾಗಿ, ಎಸ್.ಎನ್.ಮನ್ಮಥ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಗೂಟದ ಕಾರು ಪಡೆದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement