ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮಮತಾ- ಆಯೋಗ ಬಿಗ್ ಫೈಟ್

8 ಮಂದಿ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳ ನಡುವೆ ಬಿಗ್ ಫೈಟ್.

Srinivasa Murthy VN
Updated On : 9 Apr 2014, 12:06 pm
ನವದೆಹಲಿ/ಕೋಲ್ಕತಾ/ಪುರುಲಿಯಾ: 8 ಮಂದಿ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳ ನಡುವೆ ಬಿಗ್ ಫೈಟ್. ಬುಧವಾರ ಬೆಳಗ್ಗೆ 10 ಗಂಟೆ ಒಳಗಾಗಿ ಅಧಿಕಾರಿಗಳ ವರ್ಗವಾಗಲೇಬೇಕು ಎಂದು ಆಯೋಗ ಪಶ್ಚಿಮ ಬಂಗಾಳ ಸರ್ಕಾರಕ್ಕೆ ತಾಕೀತು ಮಾಡಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಂಗಳವಾರ ಪತ್ರ ಬರೆದಿದೆ. ಆಯೋಗದ ಗಡುವಿಗೆ ಕೊನೆಗೂ ಮಣಿದ ಮಮತಾ, ಎಲ್ಲ 8 ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಕೊನೆಗೂ ಒಪ್ಪಿಗೆ ಸೂಚಿಸಿದ್ದಾರೆ. 
ವಿವಾದವೇನು?: ಚುನಾವಣಾ ಕರ್ತವ್ಯಕ್ಕೆಂದು ನೇಮಿಸಲಾಗಿದ್ದ 5 ಮಂದಿ ಎಸ್ಪಿಗಳು, ಒಬ್ಬ ಡಿಸಿ ಸೇರಿ 8 ಅಧಿಕಾರಿಗಳು ಅಕ್ರಮ ಎಸಗುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯದಿಂದ ಇವರನ್ನು ವಜಾ ಮಾಡಿ ಆಯೋಗ ಸೋಮವಾರ ರಾತ್ರಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ತಕ್ಷಣವೇ ಪಾಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತ್ತು. ಜತೆಗೆ, ಈ ಅಧಿಕಾರಿಗಳಿಗೆ ಚುನಾವಣೇತರ ಕರ್ತವ್ಯದ ಹೊಣೆ ಹೊರಿಸಬಹುದು ಎಂದೂ ಸರ್ಕಾರಕ್ಕೆ ತಿಳಿಸಿತ್ತು. ಆದರೆ ಆಯೋಗದ ಆದೇಶವನ್ನು ಧಿಕ್ಕರಿಸಿದ ಮಮತಾ, ನಾನು ಸಿಎಂ ಆಗಿರುವವರೆಗೂ ಈ ಅಧಿಕಾರಿಗಳ ವರ್ಗಾವಣೆ ಸಾಧ್ಯವಿಲ್ಲ ಎಂದಿದ್ದರು.
ಆಯೋಗದ ಗಡುವು

Advertisement

Advertisement

ಮಮತಾರ ಬೆದರಿಕೆಗೆ ಬಗ್ಗದ ಚುನಾವಣಾ ಆಯೋಗ ತನ್ನ ನಿಲುವನ್ನು ಇನ್ನಷ್ಟು ಬಿಗಿಗೊಳಿಸಿದೆ. ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದ ಆದೇಶ ಮರುಪರಿಶೀಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಕೋರಿಕೆಯನ್ನು ಮಂಗಳವಾರ ತಿರಸ್ಕರಿಸಿದೆ. ಜತೆಗೆ, ತನ್ನ ಆದೇಶವನ್ನು ಬುಧವಾರ ಬೆಳಗ್ಗೆ 10 ಗಂಟೆಯೊಳಗೆ ಪಾಲಿಸಲೇಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದೆ. ಮೂಲಗಳ ಪ್ರಕಾರ, ಚುನಾವಣಾ ಆಯೋಗದ ಆದೇಶವನ್ನು ಸರ್ಕಾರ ಪಾಲಿಸದೇ ಇದ್ದಲ್ಲಿ ಅಂತಹ ರಾಜ್ಯದಲ್ಲಿ ಚುನಾವಣೆಯನ್ನೇ ರದ್ದು ಮಾಡುವ ಅಧಿಕಾರ ಆಯೋಗಕ್ಕಿರುತ್ತದೆ.
ಅವಮಾನ ತಾಳಲಾರೆ 
ಆಯೋಗ ಹಾಗೂ ಸರ್ಕಾರದ ನಡುವಿನ ಬಿಕ್ಕಟ್ಟು ಸಂಬಂಧ ಮಂಗಳವಾರ ಮಾತನಾಡಿದ ಸಿಎಂ ಮಮತಾ, ನನಗೆ ಸಂವಿಧಾನದ ಬಗ್ಗೆ ಗೊತ್ತು. ಅದಕ್ಕೆ ಗೌರವವನ್ನೂ ಕೊಡುತ್ತೇನೆ. ಆದರೆ ಬಂಗಾಳವನ್ನು ಅವಮಾನಿಸುವ ಅಧಿಕಾರ ಯಾರಿಗೂ ಇಲ್ಲ. ನಾನು ಯಾರಿಗೂ ತಲೆ ಬಗ್ಗಿಸುವುದಿಲ್ಲ. ದೆಹಲಿಯ ಬೆದರಿಕೆಗೂ ನಾನು ಬಗ್ಗುವುದಿಲ್ಲ ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾದರೆ ಅದಕ್ಕೆ ಮುಖ್ಯಮಂತ್ರಿಯೇ ನೇರ ಹೊಣೆ. ಅಧಿಕಾರಿಗಳ ವರ್ಗಾವಣೆ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಕೈಗೊಂಡಿರುವ ಕ್ರಮ ಸರಿಯಾಗಿಯೇ ಇದೆ.
-ಬಿಮನ್ ಬೋಸ್, ಸಿಪಿಎಂ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement