ರಣಾಂಗಣ ಹೂರಣ
ಅಭ್ಯರ್ಥಿಗಳ ವಿಚಾರದಲ್ಲಿ, ಪ್ರಚಾರ ಮಾಧ್ಯಮ, ಸಾಮಾಜಿಕ ಜಾಲತಾಣಗಳ ಬಳಕೆ, ಅಗ್ರ ನಾಯಕರ ವಾಕ್ಸಮರ, ಖರ್ಚು ವೆಚ್ಚ ಇತ್ಯಾದಿಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.
2.3 ಕೋಟಿ ಮೊದಲ ಬಾರಿಗೆ ಮತ ಹಾಕುವವರು
81.4 ಕೋಟಿ ಒಟ್ಟು ಮತದಾರರು
71.4 ಕೋಟಿ (2009)
67.1 ಕೋಟಿ (2005)
9 30 000
ಮತಗಟ್ಟೆಗಳು
1.1 ಕೋಟಿ ಚುನಾವಣಾ ಪ್ರಕ್ರಿಯೆಯಲ್ಲಿರುವ ಸಿಬ್ಬಂದಿ
14 68 430 ವಿದ್ಯುನ್ಮಾನ ಮತಯಂತ್ರಗಳ ಬಳಕೆ
ಮತದಾರರ ಸಂಖ್ಯೆಯಲ್ಲಿ ಸಣ್ಣ ಕ್ಷೇತ್ರ: ಲಕ್ಷದ್ವೀಪ
ಮತದಾರರ ಸಂಖ್ಯೆಯಲ್ಲಿ ದೊಡ್ಡ ಕ್ಷೇತ್ರ: ದೆಹಲಿ ಹೊರ ವಲಯ
ಮತದಾರರ ಲಿಂಗಾನುಪಾತ ಪ್ರಮಾಣ ಪುರುಷ: 52.4, ಮಹಿಳೆ 47.6
ಅತ್ಯಂತ ದೊಡ್ಡ ಕ್ಷೇತ್ರ- ಲಡಾಖ್ (ವ್ಯಾಪ್ತಿವಾರು) 1,73,266.37 ಚ.ಕಿಮೀ
ಸಣ್ಣ ಕ್ಷೇತ್ರ ಚಾಂದ್‌ನಿ ಚೌಕ್ 10.59 ಚ.ಕಿಮೀ
41309
ದೇಶದ ಚುನಾವಣಾ ಇತಿಹಾಸದಲ್ಲಿ ಈವರೆಗೆ ಕಣಕ್ಕಿಳಿದಿರುವ ಸ್ವತಂತ್ರ ಅಭ್ಯರ್ಥಿಗಳ ಸಂಖ್ಯೆಯಿದು. ಇವರ ಪೈಕಿ ಗೆದ್ದವರು ಕೇವಲ 221 ಮಂದಿ. ಮತ್ತೂ ವಿಶೇಷವೆಂದರೆ, 40,420 ಮಂದಿ ಪಕ್ಷೇತರ ಅಭ್ಯರ್ಥಿಗಳು ಸೋತಿದ್ದಷ್ಟೇ ಅಲ್ಲ, ತಮ್ಮ ಠೇವಣಿಯನ್ನೂ ಕಳೆದುಕೊಂಡಿದ್ದಾರೆ.
ಈ ಹಿಂದಿನ ಚುನಾವಣೆ
2009ರಲ್ಲಿ ಏ.16ರಿಂದ ಮೇ 13ರ ವರೆಗೆ ನಡೆದಿತ್ತು. ಒಟ್ಟು 27 ದಿನಗಳು
ಈ ಲೋಕಸಭೆ ಚುನಾವಣೆ ಹಲವು ರೀತಿಯಲ್ಲಿ ವಿಶೇಷತೆಗಳನ್ನು ಹೊಂದಿದೆ. ಅಭ್ಯರ್ಥಿಗಳ ವಿಚಾರದಲ್ಲಿ, ಪ್ರಚಾರ ಮಾಧ್ಯಮ, ಸಾಮಾಜಿಕ ಜಾಲತಾಣಗಳ ಬಳಕೆ, ಅಗ್ರ ನಾಯಕರ ವಾಕ್ಸಮರ, ಖರ್ಚು ವೆಚ್ಚ ಇತ್ಯಾದಿಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ. ಕರ್ನಾಟಕದ 28 ಸೇರಿ ದೇಶದ 543 ಕ್ಷೇತ್ರಗಳಲ್ಲಿ ಹಳೆಯ ಹುಲಿಗಳ ಜತೆಗೆ ಹೊಸ ನಾಯಕರೂ ಇದ್ದಾರೆ.
ನವಾಗ್ರೇಸರರು...
ಚುನಾವಣಾ ಕಣದಲ್ಲಿ ಹಲವು ಅಗ್ರಪಂಕ್ತಿಯ ನಾಯಕರು ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಆಯ್ದ ಒಂಬತ್ತು ಮಂದಿಯ ಬಗ್ಗೆ ಸಂಕ್ಷಿಪ್ತ ಪರಿಚಯವಿದು...
ರಾಹುಲ್ ಗಾಂಧಿ
ವಯಸ್ಸು: 43
ಪಕ್ಷ:ಕಾಂಗ್ರೆಸ್ ಕ್ಷೇತ್ರ:ಅಮೇಠಿ
ನಿಮಗೆ ಗೊತ್ತೇ? ಯಾವತ್ತೂ ರಾಜಕೀಯದಲ್ಲಿ ಮುಳುಗಿರುವ ಅವರು ಪ್ರತಿ ವರ್ಷ ಅವರು ಮ್ಯಾನ್ಮಾರ್‌ನ
ಬೌದ್ಧಧರ್ಮ ಕೇಂದ್ರಕ್ಕೆ ತೆರಳಿ ಅಲ್ಲಿ ಧ್ಯಾನಾಸಕ್ತರಾಗುತ್ತಾರೆ. ಹೀಗೆಂದು ಅವರ ಆಪ್ತ ವಲಯ ಹೇಳುತ್ತದೆ. ರಾಜಕೀಯದ ಜತೆಗೆ ಅವರಿಗೆ ಸ್ಕೂಬಾ ಡೈವಿಂಗ್, ಸೈಕ್ಲಿಂಗ್, ಈಜುವುದರಲ್ಲಿ ಆಸಕ್ತಿ ಇದೆ. ಇದರ ಜತೆಗೆ ಆಪ್ತ ವಲಯದವರು ಆಯೋಜಿಸುವ ಔತಣಕೂಟಗಳಿಗೆ, ಕ್ರಿಕೆಟ್ ಮ್ಯಾಚ್‌ಗಳಿಗೆ ತೆರಳುತ್ತಾರೆ.
ನರೇಂದ್ರ ಮೋದಿ
ವಯಸ್ಸು: 63
ಪಕ್ಷ: ಬಿಜೆಪಿ
ಕ್ಷೇತ್ರ: ವಾರಾಣಸಿ, ವಡೋದರಾ
ನಿಮಗೆ ಗೊತ್ತೇ? ವಿಶೇಷವಾದ ದಿರಿಸನ್ನು ಅವರು ಧರಿಸುತ್ತಾರೆ. ಅರ್ಧ ತೋಳಿನ ಕುರ್ತಾ ಮತ್ತು ಪೈಜಾಮ ಅವರು ಹೆಚ್ಚಾಗಿ ಧರಿಸುತ್ತಾರೆ.ಜೀನ್ಸ್ ಮತ್ತು ಟಿ ಶರ್ಟ್ ಕೂಡ ಅವರು ತೊಡುತ್ತಾರೆ. ಅವರ ಬಳಿ ಅಪರೂಪವಾಗಿರುವ ಟೊಪಿಗಳ ಸಂಗ್ರಹ ಇದೆಯಂತೆ.
ಅರುಣ್ ಜೇಟ್ಲಿ
ವಯಸ್ಸು: 61 ಪಕ್ಷ: ಬಿಜೆಪಿ
ಕ್ಷೇತ್ರ: ಅಮೃತಸರ
ನಿಮಗೆ ಗೊತ್ತೇ? ಸುಪ್ರೀಂಕೋರ್ಟ್‌ನ ಪ್ರಭಾವಿ ನ್ಯಾಯವಾದಿಗಳಲ್ಲೊಬ್ಬರು. ಅತ್ಯಾಕರ್ಷಕವಾದ ಲೇಖನಿಗಳು ಮತ್ತು ಕೈಗಡಿಯಾರಗಳನ್ನು ಅವರು ಸಂಗ್ರಹಿಸುತ್ತಾರೆ. ಪ್ರಬಲ ವಾಗ್ಮಿಯಾಗಿರುವ ಅವರು ತಪ್ಪದೆ ಬ್ಲಾಗ್ ಅಪ್‌ಡೇಟ್ ಮಾಡುತ್ತಾರೆ. ಪ್ರಚಾರದ ಸಂದರ್ಭದಲ್ಲಿಯೂ ಐಪಾಡ್ ಮೂಲಕ ಬ್ಲಾಗ್ ಅಪ್‌ಡೇಟ್ ಮಾಡಲು ಮರೆಯುವುದಿಲ್ಲ.
ಸಲ್ಮಾನ್ ಖುರ್ಷಿದ್
ವಯಸ್ಸು: 61
ಪಕ್ಷ: ಕಾಂಗ್ರೆಸ್ ಕ್ಷೇತ್ರ: ಫರೂಕಾಬಾದ್
ನಿಮಗೆ ಗೊತ್ತೇ? ಇತ್ತೀಚಿನ ವರ್ಷಗಳಲ್ಲಿ ಎಡವಟ್ಟಣ್ಣಯ್ಯನಂತೆ ವರ್ತಿಸುತ್ತಿದ್ದರೂ ಕಾಲೇಜು ದಿನಗಳಲ್ಲಿ ಆಲ್ ರೌಂಡರ್ ಆಗಿದ್ದವರು. ಉತ್ತಮ ಎನ್‌ಸಿಸಿ ಕೆಡೆಟ್, ಕಾಲೇಜು ಕ್ರಿಕೆಟ್ ತಂಡದಲ್ಲಿದ್ದವರು ಆಕಾಶವಾಣಿಯ ಯುವವಾಣಿ ಕಾರ್ಯಕ್ರಮದಲ್ಲಿ ಹಲವು ಬಾರಿ ಭಾಗವಹಿಸಿದ್ದರು. 'ಸನ್ಸ್ ಆಫ್ ಬಾರ್ಬರ್' ಇದು ಖುರ್ಷಿದ್ ಬರೆದ ನಾಟಕ. ಇದು ಹಲವು ಭಾಷೆಗಳಿಗೆ ಅನುವಾದಗೊಂಡಿದೆ.
ಮುಲಾಯಂ ಸಿಂಗ್
ವಯಸ್ಸು: 75
ಕ್ಷೇತ್ರ: ಮೈನ್‌ಪುರಿ, ಆಜಮ್‌ಗಡ
ಪಕ್ಷ: ಸಮಾಜವಾದಿ ಪಕ್ಷ
ನಿಮಗೆ ಗೊತ್ತೇ?: ಸಮಾಜವಾದಿ ನಾಯಕ. ರಾಮ್ ಮನೋಹರ್ ಲೋಹಿಯಾರಿಂದಪ್ರಭಾವಿತಗೊಂಡಿರುವ ಉತ್ತರಪ್ರದೇಶದ ಪ್ರಭಾವಿ ನಾಯಕ. ರಾಜಕೀಯ ವಲಯದಲ್ಲಿ ನೇತಾಜಿ ಎಂದೇ ಜನಪ್ರಿಯಗೊಂಡಿರುವ ಅವರು ಒಂದು ಕಾಲದಲ್ಲಿ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿ ಗೆದ್ದವರು.
ಕಪಿಲ್ ಸಿಬಲ್
ವಯಸ್ಸು: 65
ಪಕ್ಷ: ಕಾಂಗ್ರೆಸ್
ಕ್ಷೇತ್ರ ಚಾಂದ್‌ನಿ ಚೌಕ್
ನಿಮಗೆ ಗೊತ್ತೇ? ಕೇಂದ್ರದಲ್ಲಿ ಸಚಿವರಾಗುವ ಮುನ್ನ ಸುಪ್ರೀಂಕೋರ್ಟ್‌ನಲ್ಲಿ ಖ್ಯಾತ ನ್ಯಾಯವಾದಿಯಾಗಿದ್ದವರು. ಜತೆಗೆ ಕವಿಯೂ ಕೂಡ. ಟ್ವಿಟರ್‌ನಲ್ಲಿ ಸದಾ ಸಕ್ರಿಯ. ದೇಶದ ಪ್ರಮುಖ ಪತ್ರಿಕೆಗಳಿಗೆ ಲೇಖನ ಬರೆಯುತ್ತಾರೆ. ಕಾನೂನು ವಿಚಾರಗಳಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನೂ ಬರೆದಿದ್ದಾರೆ.
ಸುಷ್ಮಾ ಸ್ವರಾಜ್
ವಯಸ್ಸು: 61
ಪಕ್ಷ: ಬಿಜೆಪಿ ಕ್ಷೇತ್ರ: ವಿದಿಷಾ
ನಿಮಗೆ ಗೊತ್ತೇ?: ಭಾಷಣದ ಸಂದರ್ಭದಲ್ಲಿ ಹಿಂದಿ ಆಶು ಕವಿತೆಗಳನ್ನು ಉಲ್ಲೇಖಿಸುತ್ತಾರೆ. ದೆಹಲಿ ರಾಜ್ಯದ ಪ್ರಥಮ ಮಹಿಳಾ ಮುಖ್ಯಮಂತ್ರಿಯೂ ಹೌದು.
ಎಲ್.ಕೆ.ಆಡ್ವಾಣಿ
ವಯಸ್ಸು: 86
ಕ್ಷೇತ್ರ: ಗಾಂಧಿನಗರ ಪಕ್ಷ: ಬಿಜೆಪಿ
ನಿಮಗೆ ಗೊತ್ತೇ?: ಬಾಲಿವುಡ್ ಸಿನಿಮಾಗಳ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. ವಿಶೇಷವಾಗಿ ಚಿತ್ರನಟ ಶಾರುಕ್ ಖಾನ್ ಸಿನಿಮಾಗಳನ್ನು ಪ್ರೀಮಿಯರ್ ಶೋನಲ್ಲಿ ಆನಂದಿಸುತ್ತಾರೆ. ಆರ್‌ಎಸ್‌ಎಸ್ ಮುಖವಾಣಿ 'ಆರ್ಗನೈಸರ್'ನಲ್ಲಿ ಕೆಲ ಕಾಲ ಕೆಲಸ ಮಾಡಿದ್ದರು.
ಸಚಿನ್‌ಪೈಲಟ್
ವಯಸ್ಸು:36
ಪಕ್ಷ: ಕಾಂಗ್ರೆಸ್ ಕ್ಷೇತ್ರ: ಅಜ್ಮೀರ್
ನಿಮಗೆ ಗೊತ್ತೇ? ಬಿಡುವಿಲ್ಲದ ರಾಜಕಾರಣಿಯಾಗಿದ್ದರೂ ಶೂಟಿಂಗ್‌ನಲ್ಲಿ ಅಪ್ರತಿಮ. ಸಿನಿಮಾ, ಪ್ರವಾಸವೆಂದರೆ ಅಚ್ಚುಮೆಚ್ಚು. ಲೋಕಸಭೆ ಸದಸ್ಯನಾಗಿಯೂ ಅವರ ಕಾರ್ಯನಿರ್ವಹಣೆ ಉತ್ತಮವಾಗಿಯೇ ಇದೆ.
ಕಾರ್ತಿ ಚಿದಂಬರಂ (42)
-ಕೇಂದ್ರ ಹಣಕಾಸು ಸಚಿವ ಪಳನಿಯಪ್ಪನ್ ಚಿದಂಬರಂ ಪುತ್ರ
-ವೃತ್ತಿಯಲ್ಲಿ ವಕೀಲ. ಎಐಸಿಸಿ ಸದಸ್ಯ
-ವ್ಯವಹಾರ ಆಡಳಿತದಲ್ಲಿ ಟೆಕ್ಸಾಸ್ ವಿವಿಯಿಂದ ಪದವಿ, ಕೇಂಬ್ರಿಡ್ಜ್ ವಿವಿಯಿಂದ ಕಾನೂನು ಪದವಿ
-ಶಿವಗಂಗಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ.
-ವೃತ್ತಿಪರ ಟೆನಿಸ್ ಆಟಗಾರರಾಗ ಬಯಸಿದ್ದರು. 2012ರಲ್ಲಿ ಟ್ವಿಟರ್ ವಿವಾದ ಉಂಟಾದ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ 66ಎ ವಿಧಿ ಬಳಸಿಕೊಂಡು ವ್ಯಕ್ತಿಯೊಬ್ಬನನ್ನು ಜೈಲಿಗೆ ಕಳುಹಿಸಲು ಸಾಧ್ಯವಿದೆ ಎಂದು ಪ್ರತಿಪಾದಿಸಿದ್ದರು.
-ಈತ ಅಪಾರ ಪ್ರಮಾಣದ ಆಸ್ತಿ ಸಂಪಾದಿಸಿದ್ದರು ಎಂದು ಆಪಾದಿಸಿದ್ದರು.
ಮಿಸಾ ಭಾರತಿ (38)
-ಆರ್‌ಜೆಡಿ ಅಧ್ಯಕ್ಷ ಲಾಲು ಯಾದವ್ ಅವರ ಒಂಬತ್ತು ಮಕ್ಕಳ ಪೈಕಿ ಹಿರಿಯ ಪುತ್ರಿ.
-ಬಿಹಾರದ ಪಾಟಲಿಪುತ್ರದಿಂದ ಅಭ್ಯರ್ಥಿ.
-ಎಂಬಿಬಿಎಸ್ ಅಧ್ಯಯನ ನಡೆಸುತ್ತಿದ್ದವರು ಅರ್ಧಕ್ಕೇ ನಿಲ್ಲಿಸಿದ್ದರು. ಪರೀಕ್ಷೆಯಲ್ಲಿ ಅಕ್ರಮ ನಡೆಸಿದ್ದಾರೆ ಎಂಬ ಆರೋಪ ಇರುವುದರಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ- ಮೂಲಗಳು
-ಮೀಸಾ (ಸುರಕ್ಷಾ ಕಾಯ್ದೆ- ಮೈಂಟನೆನ್ಸ್ ಆಫ್ ಸೆಕ್ಯುರಿಟಿ ಆ್ಯಕ್ಟ್) ಅಡಿಯಲ್ಲಿ ಲಾಲು ಬಂಧನಕ್ಕೆ ಒಳಗಾಗಿದ್ದರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಲಾಲು ಜೈಲುವಾಸಿಯಾಗಿದ್ದರು. ಆ ಸಂದರ್ಭದಲ್ಲಿ ಮೊದಲ ಪುತ್ರಿ ಜನಿಸಿದ ಹಿನ್ನೆಲೆಯಲ್ಲಿ ಮೀಸಾ ಎಂಬ ಹೆಸರು ಇರಿಸಲಾಗಿದೆ.
ಡ್ರೆಸ್‌ಕೋಡ್ ಇದೆ ಸ್ವಾಮಿ....!
ನಾಯಕರ ವಾಕ್ಚಾತುರ್ಯದ ಜತೆಗೆ ಅವರ ದಿರಿಸುಗಳೂ ಪ್ರಮುಖವಾಗುತ್ತವೆ. ಅದೂ ಚುನಾವಣೆ ಸಂದರ್ಭದಲ್ಲಿ ಉಡುಗೆ ತೊಡುಗೆಗಳು ಜನರನ್ನು ಸೆಳೆಯುವಲ್ಲಿ ಮುಖ್ಯ ಭೂಮಿಕೆಯಾಗುತ್ತವೆ.
ಕುಂಕುಮದ ಬೊಟ್ಟು (ಬಿಂದಿ)
ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾರಾಜೇ, ಸ್ಮೃತಿ ಇರಾನಿ, ಕಿರಣ್ ಖೇರ್, ಕೇಂದ್ರ ಸಚಿವೆ ಕೃಷ್ಣಾ ತೀರಥ್‌ರಂಥ ಮಹಿಳಾ ನಾಯಕರು ಎದ್ದುಕಾಣುವಂತೆ ಅದನ್ನು ಬಳಸುತ್ತಾರೆ
ಸಲ್ವಾರ್ ಕಮೀಜ್
ಮಹಿಳಾ ರಾಜಕಾರಣಿಗಳು ಸಾಮಾನ್ಯವಾಗಿ ಸೀರೆ ಉಡುತ್ತಾರೆ. ಈ ಪೈಕಿ ಮುಖ್ಯವಾಗಿ ತಮಿಳುನಾಡು ಮುಖ್ಯಮಂತ್ರಿ ಜಯರಾಂ ಜಯಲಲಿತಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಆಮ್ ಆದ್ಮಿ ಪಕ್ಷದ ನಾಯಕಿಯರಾದ ಶಾಜಿಯಾ ಇಲ್ಮಿ, ರಾಖಿ ಬಿರ್ಲಾ ಸಲ್ವಾರ್ ಕಮೀಜ್ ಧರಿಸುತ್ತಾರೆ.
ಪ್ಯಾಂಟ್-ಶರ್ಟ್
ಸಾಮಾನ್ಯವಾಗಿ ರಾಜಕಾರಣಿಗಳು ಎಲ್ಲರಂತೆ ಪ್ಯಾಂಟ್-ಶರ್ಟ್ ಧರಿಸುವುದಿಲ್ಲ. ಖಾದಿ ದಿರಿಸುಗಳೇ ಅವರಿಗೆ ಪ್ರಿಯ ಮತ್ತು ಟ್ರೇಡ್ ಮಾರ್ಕ್. ಆದರೆ ಆಮ್ ಆದ್ಮಿ ಪಕ್ಷದ ನಾಯಕರಾದ ಅರವಿಂದ ಕೇಜ್ರಿವಾಲ್, ಕುಮಾರ್ ವಿಶ್ವಾಸ್, ಅಶುತೋಷ್ ಕೃಷ್ಣ ಇದಕ್ಕೆ ಅಪವಾದ.
ನೆಹರೂ ಜಾಕೆಟ್
ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಇಂಥದ್ದೇ ಜಾಕೆಟ್ ಇಷ್ಟಪಡುತ್ತಿದ್ದರು. ರಾಹುಲ್ ಗಾಂಧಿ, ಕಪಿಲ್ ಸಿಬಲ್, ದಿಗ್ವಿಜಯ ಸಿಂಗ್ ಕೆಲವೊಮ್ಮೆ ಪ್ರಚಾರದ ವೇಳೆ ಇಂಥದ್ದೇ ಜಾಕೆಟ್ ಧರಿಸುತ್ತಾರೆ. ಇದನ್ನು ಮೊದಲು ಜನಪ್ರಿಯಗೊಳಿಸಿದ್ದು ಮೊದಲ ಪ್ರಧಾನಿ ನೆಹರೂ. ಹಳೆಯ ತಲೆಮಾರಿನ ರಾಜಕಾರಣಿಗಳೆಲ್ಲ ಇಂಥ ಜಾಕೆಟ್ ಧರಿಸುತ್ತಿದ್ದರು.
ಅಳಿಸಲಾಗದ ಶಾಯಿಗೆ ಮೈಸೂರು ನಂಟು
- ಮತದಾನ ಮಾಡಿದ ಬಳಿಕ ಯಾವುದೇ ರಾಸಾಯನಿಕ,ಸೋಪಿನ ದ್ರಾವಣ ಸೇರಿದಂತೆ ಅಳಿಸಲಾಗದಂಥ ಶಾಯಿ ಮೂಲಕ ಕೈ ಬೆರಳಿಗೆ ಗುರುತು ಮಾಡಲಾಗುತ್ತದೆ.
- ಅದನ್ನು ಸಿದ್ಧಪಡಿಸುವ ಹೆಗ್ಗಳಿಕೆ ನಮ್ಮ ರಾಜ್ಯದ್ದು. ಮೈಸೂರು ಪೈಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ ಈ ಶಾಯಿ ಸಿದ್ಧಪಡಿಸುತ್ತದೆ. ಇದು ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಸಂಸ್ಥೆ.
- 1962ರಲ್ಲಿ ದೆಹಲಿಯ ಎನ್‌ಆರ್‌ಡಿಸಿಯಿಂದ ಈ ಸಂಸ್ಥೆಗೆ ಚುನಾವಣೆಗಾಗಿ ಬಳಸುವ ಶಾಯಿ ತಯಾರಿಕೆಗೆ ವಿಶೇಷ ಅನುಮತಿ ಲಭಿಸಿತು.
- 28 ದೇಶಗಳಲ್ಲಿ ನಡೆಯುವ ಚುನಾವಣೆಯಲ್ಲಿ ಮತದಾರರ ಕೈ ಬೆರಳಿಗೆ ಗುರುತು ಹಾಕಲು ಈ ಶಾಯಿ ಬಳಸಲಾಗುತ್ತದೆ.
- ನಮ್ಮ ದೇಶದಲ್ಲಿ ಕೈ ಬೆರಳಿಗೆ ಸಣ್ಣ ಕೋಲಿನಿಂದ ಶಾಯಿ ಗುರುತು ಮಾಡುತ್ತಾರೆ. ಬೇರೆ ಬೇರೆ ದೇಶಗಳಲ್ಲಿ ಶಾಯಿ ಗುರುತಿಗೆ ಇತರ ವಿಧಾನ ಬಳಸುತ್ತಾರೆ.
- ಆಯಾ ವ್ಯಕ್ತಿಯ ದೇಹದ ಉಷ್ಣತೆಗೆ ಅನುಸಾರವಾಗಿ 3-4 ವಾರಗಳ ಓಳಗಾಗಿ ಅದು ತನ್ನಿಂದ ತಾನೆ ಅಳಿಸಿ ಹೋಗುತ್ತದೆ.
-ಈಗ ಶಾಯಿ ಗುರುತನ್ನು ಎಡ ತೋರುಬೆರಳಿನ ಉಗುರಿನ ಆರಂಭದಿಂದ ಮೊದಲ ಸಂದಿಯ ವರೆಗೆ ಹಾಕಲಾಗುತ್ತಿತ್ತು. 2006ರ ಫೆ.1ರಿಂದ ಹೊಸ ನಿಯಮ ಜಾರಿಯಾಗಿದೆ. ಈ ಹಿಂದೆ ಉಗುರು ಮತ್ತು ಚರ್ಮದ ಮಧ್ಯಕ್ಕೆ ಹಾಕಲಾಗುತ್ತಿತ್ತು.
-ಈ ಶಾಯಿ ಸಿಲ್ವರ್ ನೈಟ್ರೇಟ್ ಎಂಬ ಅಂಶವನ್ನೊಳ ಗೊಂಡಿದೆ. ಬೆರಳ ಮೇಲಿನ ಚರ್ಮದ ಕೋಶಗಳು ನಾಶವಾಗುತ್ತಿದ್ದಂತೆ ಶಾಯಿ ಕಲೆ ಮರೆಯಾಗುತ್ತದೆ.
-2009ರ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಮೈಸೂರು ಪೈಂಟ್ಸ್ ಮತ್ತು ವಾರ್ನಿಶ್ 10 ಎಂ.ಎಲ್‌ಗಳಂತೆ 20 ಲಕ್ಷ ಯುನಿಟ್‌ಗಳನ್ನು ಪೂರೈಸಿತ್ತು.
ಆಕಾಶವಾಣಿ ಬಾಲಿವುಡ್
ಚಿತ್ರಜಗತ್ತಿಗೂ ರಾಜಕಾರಣಕ್ಕೂ ಇರುವ ಅವಿನಾಭಾವ ಸಂಬಂಧ ಜಗಜ್ಜಾಹೀರು. ನಾಯಕರಿಗೆ ರಾಜಕೀಯ ತೊಳಲಾಟಕ್ಕೆ ತಕ್ಕಂತೆ ಮ್ಯಾಚ್ ಆಗುವ ಗೀತೆಗಳು
-ಎಲ್.ಕೆ.ಆಡ್ವಾಣಿ
ದಿಲ್ ತೋ ಬಚ್‌ನಾ ಹೆ ಜಿ (ಇಶ್ಕಿಯಾ)
-ಮಮತಾ ಬ್ಯಾನರ್ಜಿ
ಯೇ ಲಾಲ್ ರಂಗ್ ಕಭಿ ಮುಝೆ ಛೋಡೆಗಾ (ಪ್ರೇಮ್ ನಗರ್)
-ಜಸ್ವಂತ್ ಸಿಂಗ್
ದಿಲ್ ಐಸಾ ಕಿಸಿ ನೇ ಮೇರಾ ತೋಡಾ (ಅಮಾನುಶ್)
-ಅರವಿಂದ ಕೇಜ್ರಿವಾಲ್
ಸಾರೆ ನಿಯಮ್ ತೋಡ್ ದೋ (ಖೂಬ್‌ಸೂರತ್)
-ಲಾಲು ಪ್ರಸಾದ್ ಯಾದವ್
ಜಿಯಾ ಹೊ ಬಿಹಾರ್ ಕೆ ಲಾಲಾ (ಗ್ಯಾಂಗ್ಸ್ ಆಫ್ ಸೇಪುರ್)
-ಪ್ರಕಾಶ್ ಕಾರಟ್
ಕಹಾ ಗಯೇ ವೊ ದಿನ್ (ಮೇರಾ ನಾಮ್ ಜೋಕರ್)
-ರಾಖಿ ಬಿರ್ಲಾ
ತ್ರಿಚಿ ಟೋಪಿ ವಾಲೆ (ತ್ರಿದೇವ್)
-ಕುಮಾರ್ ವಿಶ್ವಾಸ್
ಶಾಯರ್ ತೋ ನಹಿ (ಬಾಬ್ಬಿ)
-ಸ್ಮೃತಿ ಇರಾನಿ
ಆ ದೇಖೇಂ ಝರಾ ಕಿಸ್ಮೆ ಕಿತನಾ ನಹಿ ದಮ್ ಹೆ (ರಾಕಿ)
- ಪಿ.ಸಿ.ಸರ್ಕಾರ್
ಲೇಕೆ ಪೆಹ್ಲಾ ಪೆಹ್ಲಾ ಪ್ಯಾರ್ ಬರ್ ಕೆ ಆಖೋಂ ಮೆ ಖುಮರ್ ಜಾಡು ನಗ್ರಿ ಸೆ ಆಯಾ ಹೆ ಕೋಯಿ ಜಾದುಗರ್ (ಸಿಐಡಿ)
-ಅಖಿಲೇಶ್ ಯಾದವ್
ಪಾಪಾ ಕೆಹೆತೆ ಹೇ ಬಡಾ ನಾಮ್ ಕರೇಗಾ (ಖಯಾಮತ್ ಸೇ ಖಯಾಮತ್ ತಕ್)
ಸ್ಪೋರ್ಟ್ಸ್ ಆ್ಯಂಡ್ ಪಾಲಿಟಿಕ್ಸ್
ಚಿತ್ರನಟರಂತೆ ಕ್ರೀಡಾ ಕ್ಷೇತ್ರದವರೂ ವಿವಿಧ ಪಕ್ಷಗಳಿಂದ ಅಭ್ಯರ್ಥಿಗಳಾಗಿ ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದಾರೆ. ಈ ಬಾರಿಯೂ ಈ ಟ್ರೆಂಡ್ ಮುಂದುವರಿದಿದೆ.
-ಬೈಚುಂಗ್ ಭುಟಿಯಾ
ಫುಟ್ಬಾಲ್ ಆಟಗಾರ, ಟಿಎಂಸಿ ಅಭ್ಯರ್ಥಿ, ಡಾರ್ಜಿಲಿಂಗ್‌ನಿಂದ ಸ್ಪರ್ಧೆ
-ಮೊಹಮ್ಮದ್ ಅಜರುದ್ದೀನ್
ಭಾರತೀಯ ಕ್ರಿಕೆಟ್ ತಂಡದ ನಿವೃತ್ತ ಕ್ಯಾಪ್ಟನ್. ಸದ್ಯ ಉತ್ತರಪ್ರದೇಶದ ಮೊರಾದಾಬಾದ್ ಕ್ಷೇತ್ರದ ಸಂಸದ. ಈ ಬಾರಿ ರಾಜಸ್ಥಾನದ ಟಾಂಕ್ ಸವಾಯ್ ಮಾಧೋಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ.
-ಮೊಹಮ್ಮದ್ ಕೈಫ್
ಕ್ರಿಕೆಟ್‌ನಲ್ಲಿ ಫಾರ್ಮ್ ಕಂಡುಕೊಳ್ಳಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಉತ್ತರಪ್ರದೇಶದಿಂದ ಸ್ಪರ್ಧಿಸುತ್ತಿದ್ದಾರೆ.
-ರಾಜ್ಯವರ್ಧನ ರಾಥೋಡ್
ಜೈಪುರ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ತಂದುಕೊಟ್ಟ ಹೆಗ್ಗಳಿಕೆ ಅವರದ್ದು.
ಸಿನಿಮಾ ಜಗತ್ತು, ಪಾಲಿಟಿಕ್ಸ್
ಚುನಾವಣೆಯಲ್ಲಿ ಚಲನಚಿತ್ರ ನಟರೂ ಸಂಸದರಾಗುವ ಕನಸು ಹೊತ್ತು ಅಖಾಡಕ್ಕೆ ಇಳಿದಿದ್ದಾರೆ. ಇಲ್ಲಿದೆ ಕೆಲವರ ವಿವರ.
ಇನೋಸೆಂಟ್ 69
ಮಲಯಾಳಂ ಸಿನಿಮಾನಟ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ. ಚಾಲಕ್ಕುಡಿ ಕ್ಷೇತ್ರದಿಂದ ಸಿಪಿಎಂ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ.
ಕಿರಣ್ ಖೇರ್ 58
ಬಿಜೆಪಿ ಅಭ್ಯರ್ಥಿಯಾಗಿ ಚಂಡೀಗಡದಿಂದ ಸ್ಪರ್ಧೆ. ಹಿಂದಿ ಸಿನಿಮಾ ಮತ್ತು ಟಿವಿ ಜಗತ್ತಿನಲ್ಲಿ ಪರಿಚಿತ ಮುಖ. ರಾಜಕೀಯಕ್ಕೆ ಹೊಸಬರು.
ವಿನೋದ್ ಖನ್ನಾ 67
ಎನ್‌ಡಿಎ ಅವಧಿಯಲ್ಲಿ ಕೇಂದ್ರ ಸಚಿವ. ಪಂಜಾಬ್‌ನ ಗುರುದಾಸ್‌ಪುರದಿಂದ ಈ ಬಾರಿ ಸ್ಪರ್ಧೆ. ಮತಗಳಿಕೆಗಾಗಿ ಓಶೋ ರಜನೀಶ್ ಹೇಳಿಕೆಗಳ ಉಲ್ಲೇಖ.
ಪರೇಶ್ ರಾವಲ್ 63
ಅಹಮದಾಬಾದ್ ಪೂರ್ವದಿಂದ ಬಿಜೆಪಿ ಅಭ್ಯರ್ಥಿ. ಹಾಲಿ ಸಂಸದ ಹರೇನ್ ಪಾಠಕ್ ವಿರೋಧ ಎದುರಿಸಿಕೊಂಡೇ ಸ್ಪರ್ಧಿಸುವ ಅನಿವಾರ್ಯತೆ.
ಹೇಮಾಮಾಲಿನಿ 65
ಮಥುರಾದಿಂದ ಬಿಜೆಪಿಯಿಂದ ಸ್ಪರ್ಧೆ. ಚಿತ್ರ ನಟಿ, ನೃತ್ಯ ಕಲಾವಿದೆಯಾಗಿ ಚಿರಪರಿಚಿತೆ. ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿದ್ದರು.
ರಾಖಿ ಸಾವಂತ್ 35
ನಟಿಯಾಗಿದ್ದರೂ ಐಟಂ ಗರ್ಲ್ ಎಂದೇ ಖ್ಯಾತಿ. ಸ್ವತಂತ್ರ ಅಭ್ಯರ್ಥಿಯಾಗಿ ಮುಂಬೈ ವಾಯವ್ಯ ಕ್ಷೇತ್ರದಿಂದ ಸ್ಪರ್ಧೆ.
ರವಿಕಿಶನ್ 42
ಕಾಂಗ್ರೆಸ್‌ನಿಂದ ಉತ್ತರಪ್ರದೇಶದ ಜೌನ್‌ಪುರದಿಂದ ಸ್ಪರ್ಧೆ. ಕ್ಷೇತ್ರದಲ್ಲಿ ಪಕ್ಷ ಹೆಚ್ಚು ಬಲಿಷ್ಠವಾಗಿಲ್ಲ ಎನ್ನುವ ಅಂಶ ಹಿನ್ನಡೆಯಾಗಬಹುದು.
ಪ್ರಕಾಶ್ ಝಾ 62
ಚಿತ್ರ ನಿರ್ಮಾಪಕ. ಜೆಡಿಯು ಅಭ್ಯರ್ಥಿಯಾಗಿ ಪಶ್ಚಿಮ ಚಂಪಾರಣ್ ಕ್ಷೇತ್ರದಿಂದ ಕಣಕ್ಕೆ. ಸಿಎಂ ನಿತೀಶ್ ಕುಮಾರ್ ವರ್ಚಸ್ಸೇ ಆಶೀರ್ವಾದ.
ರಾಜ್‌ಬಬ್ಬರ್ 61
ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು. ಪತ್ರಕರ್ತರಾಗಿದ್ದವರು. 4 ಬಾರಿ ಲೋಕಸಭೆಗೆ ಆಯ್ಕೆ. ಈ ಬಾರಿ ಗಾಜಿಯಾಬಾದ್‌ನಿಂದ ಸ್ಪರ್ಧೆ.
ಮನೋಜ್ ತಿವಾರಿ 42
ಈಶಾನ್ಯ ದೆಹಲಿಯಿಂದ ಬಿಜೆಪಿ ಹುರಿಯಾಳು. ಪೂರ್ವಾಂಚಲ ಪ್ರದೇಶದವರನ್ನು ಒಲಿಸಲು ಇನ್ನಿಲ್ಲದ ಕಸರತ್ತು ನಡೆಸಬೇಕಾಗಿದೆ.
ರಮ್ಯಾ 31
ಕನ್ನಡ ನಟಿ, ಮಂಡ್ಯದ ಹಾಲಿ ಸಂಸದೆ. ತಮಿಳು, ತೆಲುಗು ಸಿನಿಮಾಗಳಲ್ಲೂ ನಟಿಸಿದವರು. ಕಾಂಗ್ರೆಸ್ ಅಭ್ಯರ್ಥಿಯಾಗಿ 2ನೇ ಬಾರಿ ಕಣಕ್ಕೆ.
ಮೂನ್ ಮೂನ್ 65
ಕನ್ನಡ ಸೇರಿ ಪ್ರಮುಖ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ. ತೃಣಮೂಲ ಕಾಂಗ್ರೆಸ್ ನಿಂದ ಪಶ್ಚಿಮ ಬಂಗಾಳದ ಬಂಕುರಾದಿಂದ ಸ್ಪರ್ಧೆ.
ಶತ್ರುಘ್ನ ಸಿನ್ಹ 67
ಹಿಂದಿ ಸಿನಿಮಾದ ಹೆಸರಾಂತ ನಟ. ಬಿಹಾರದ ಪಟನಾ ಸಾಹಿಬ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ.
ಬಿಸ್ವಜಿತ್ 77
ಬಂಗಾಳ ಮೂಲದ ಖ್ಯಾತ ನಟ. ತೃಣಮೂಲ ಕಾಂಗ್ರೆಸ್‌ನಿಂದ ನವದೆಹಲಿ ಕ್ಷೇತ್ರದಿಂದ ಸ್ಪರ್ಧೆ.