ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಅಭ್ಯರ್ಥಿಗಳ ಆಸ್ತಿ ವಿವರ

ಈ ಬಾರಿಯ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಹಿನ್ನೆಲೆ ದೃಷ್ಟಿಯಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ.

Srinivasa Murthy VN
Updated On : 10 Apr 2014, 12:58 pm

ಈ ಬಾರಿಯ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಹಿನ್ನೆಲೆ ದೃಷ್ಟಿಯಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. 9 ಕೋಟಿ ಆಸ್ತಿ ಹೊಂದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗಿಂತಲೂ ಅನೇಕ ಶ್ರೀಮಂತ ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದಾರೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

 ಕಿರಣ್ ಖೇರ್-45.87 ಕೋಟಿ
ಚಂಡೀಗಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕಿರಣ್ ಖೇರ್. ನಟಿಯೂ ಆಗಿರುವ ಕಿರಣ್ 7.69 ಕೋಟಿ ಚರ ಆಸ್ತಿ ಮತ್ತು 22.88 ಕೋಟಿ ಸ್ಥಿರ ಆಸ್ತಿ ಹೊಂದಿದ್ದಾರೆ.

ನಂದನ್ ನಿಲೇಕಣಿ 7,700 ಕೋಟಿ
ಇನ್ಫೋಸಿಸ್‌ನ ಸಹಸಂಸ್ಥಾಪಕರೂ ಆಗಿರುವ ನಿಲೇಕಣಿ ಕಾಂಗ್ರೆಸ್‌ನ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ. ಈ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅತಿ ಶ್ರೀಮಂತ ಅಭ್ಯರ್ಥಿ.

ಅನಿಲ್ ಕುಮಾರ್ ಶರ್ಮಾ 850 ಕೋಟಿ
ಬಿಹಾರದ ಜೆಹನಾಬಾದ್‌ನ ಜೆಡಿಯು ಅಭ್ಯರ್ಥಿ. ಅಮರ್‌ಪಾಲಿ ಗ್ರೂಪ್ ಆಫ್ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಶರ್ಮಾ ಚರ ಆಸ್ತಿ ಮೌಲ್ಯ 815 ಕೋಟಿ. ಇವರು ಕೈಯಲ್ಲಿ 2.15 ಕೋಟಿ ಹಣ ಇಟ್ಟುಕೊಂಡಿದ್ದಾರೆ. 3.1 ಕೋಟಿ ಆಭರಣ ಹೊಂದಿದ್ದಾರೆ.

ಮೊನಿ ಕುಮಾರ್ ಸುಬ್ಬ 205 ಕೋಟಿ
ಅಸ್ಸಾಂನ ತೇಜ್‌ಪುರ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದಾರೆ. ಈ ಬಾರಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಮೊನಿ ಅವರು 59.17 ಕೋಟಿ ಚರ ಹಾಗೂ 146.33 ಕೋಟಿ ಸ್ಥಿರ ಆಸ್ತಿಹೊಂದಿದ್ದಾರೆ.

ನವೀನ್ ಜಿಂದಾಲ್ 300 ಕೋಟಿ
ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಸಂಸದ. ಜಿಂದಾಲ್ ಹಾಗೂ ಅವರ ಪತ್ನಿ ಆಸ್ತಿ 300 ಕೋಟಿ. ಇದರಲ್ಲಿ 207.87 ಕೋಟಿ ಚರ ಆಸ್ತಿ.

ಪ್ರಭಾಕರ್ ರೆಡ್ಡಿ 200 ಕೋಟಿ
ಜೆಡಿಎಸ್ ಅಭ್ಯರ್ಥಿ ಪ್ರಭಾಕರ್ ರೆಡ್ಡಿ ಆಸ್ತಿ 200 ಕೋಟಿ.

ಕುಮಾರಸ್ವಾಮಿ 190 ಕೋಟಿ
ಮಾಜಿ ಮುಖ್ಯಮಂತ್ರಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ.

ಬಾಲಕೃಷ್ಣನ್ 160 ಕೋಟಿ
ಲೋಕಸಭಾ ಚುನಾವಣೆಯಲ್ಲಿ ಕಣದಲ್ಲಿರುವ ಮತ್ತೊಬ್ಬ ಐಟಿ ಹಿನ್ನೆಲೆ ಹೊಂದಿರುವ ವ್ಯಕ್ತಿ ವಿ. ಬಾಲಕೃಷ್ಣನ್. ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಆಗಿರುವ ಬಾಲಕೃಷ್ಣನ್ ಅವರು ಬೆಂಗಳೂರು ಕೇಂದ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ.

ಪಿನಾಕಿ ಮಿಶ್ರಾ 137 ಕೋಟಿ
ವಕೀಲ, ರಾಜಕಾರಣಿ ಪಿನಾಕಿ ಮಿಶ್ರಾ ಅವರು ಬಿಜು ಜನತಾದಳದಿಂದ ಒಡಿಶಾದ ಪುರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಡಿ.ಕೆ. ಸುರೇಶ್ 85ಕೋಟಿ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ.

ಕುಲ್‌ದೀಪ್ ಬಿಷ್ಣೋಯ್ 78 ಕೋಟಿ
ಹರ್ಯಾಣ್ ಜನ್‌ಹಿತ್ ಕಾಂಗ್ರೆಸ್‌ನ ಮುಖ್ಯಸ್ಥ. ಹಿಸಾರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಎ.ಕೃಷ್ಣಪ್ಪ 70ಕೋಟಿ
ತುಮಕೂರಿನಿಂದ ಸ್ಪರ್ಧಿಸುತ್ತಿರುವ ಜೆಡಿಎಸ್ ಅಭ್ಯರ್ಥಿ ಎ. ಕೃಷ್ಣಪ್ಪ ಅವರ ಆಸ್ತಿ ಮೌಲ್ಯ 70 ಕೋಟಿ. ಕೃಷ್ಣಪ್ಪ ಕರ್ನಾಟಕ ಜೆಡಿಎಸ್‌ನ ಅಧ್ಯಕ್ಷರೂ ಹೌದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement