ರಜೆ ನೆಪ ಬೇಡ, ಇಲ್ಲೇ ಇದ್ದು ಮತಹಾಕಿ
ಪ್ರತಿ ಚುನಾವಣೆಗಳಲ್ಲೂ ನೀವು ಗಮನಿಸಿಯೇ ಇರುತ್ತೀರಿ... ವಯಸ್ಸಾದವರು ವಿಕಲಚೇತನರು ಮರೆಯದೇ ಮತಹಾಕುತ್ತಾರೆ. ಎಲ್ಲಾ ಸರಿ ಇರುವ ನೀವೇಕೇ ಮತಹಾಕಬಾರದು ಅಲ್ಲವೇ...?
ಪ್ರತಿ ಚುನಾವಣೆಗಳಲ್ಲೂ ನೀವು ಗಮನಿಸಿಯೇ ಇರುತ್ತೀರಿ..., ಯಾರೊ ಒಬ್ಬರು ಕಾಲಿಲ್ಲದ, ವಯಸ್ಸಾದ ಅಥವಾ ಇನ್ನಿತರ ವಿಕಲಚೇತನರನ್ನು ಎತ್ತಿಕೊಂಡೋ ಅಥವಾ ಇನ್ನಾವುದೇ ಸಹಾಯದ ಮೂಲಕ ಮತಗಟ್ಟೆಗೆ ಕರೆದೊಯ್ಯುವುದನ್ನು ನೋಡಿರುತ್ತೀರಿ. ಇವರೇ ಮರೆಯದೇ ಮತಹಾಕುತ್ತಾರೆ ಎಂದಾದಲ್ಲಿ ಎಲ್ಲಾ ಸರಿ ಇರುವ ನೀವೇಕೇ ಮತಹಾಕಬಾರದು ಅಲ್ಲವೇ...?
ಬೆಂಗಳೂರು: ಪ್ರತಿ ಚುನಾವಣೆಗಳಲ್ಲೂ ನೀವು ಗಮನಿಸಿಯೇ ಇರುತ್ತೀರಿ..., ಯಾರೊ ಒಬ್ಬರು ಕಾಲಿಲ್ಲದ, ವಯಸ್ಸಾದ ಅಥವಾ ಇನ್ನಿತರ ವಿಕಲಚೇತನರನ್ನು ಎತ್ತಿಕೊಂಡೋ ಅಥವಾ ಇನ್ನಾವುದೇ ಸಹಾಯದ ಮೂಲಕ ಮತಗಟ್ಟೆಗೆ ಕರೆದೊಯ್ಯುವುದನ್ನು ನೋಡಿರುತ್ತೀರಿ. ಇವರೇ ಮರೆಯದೇ ಮತಹಾಕುತ್ತಾರೆ ಎಂದಾದಲ್ಲಿ ಎಲ್ಲಾ ಸರಿ ಇರುವ ನೀವೇಕೇ ಮತಹಾಕಬಾರದು ಅಲ್ಲವೇ...? ಗುರುವಾರ ಚುನಾವಣೆ, ಶುಕ್ರವಾರ ಗುಡ್ಫ್ರೈಡೆ, ಶನಿವಾರ ಒಂದು ದಿನ ರಜಾ ಹಾಕಿಕೊಂಡರೆ, ಭಾನುವಾರವೂ ಸೇರಿದರೆ ನಾಲ್ಕು ದಿನ ರಜೆ ಸಿಗುತ್ತೆ ಎಂಬ ಕಾರಣದಿಂದ ಪ್ರವಾಸವನ್ನೋ ಅಥವಾ ಇನ್ನೇನೋ ಕಾರಣದಿಂದ ಊರಿಂದ ಹೊರಗೆ ಹೋಗಲು ನೋಡಬೇಡಿ. ದಯಮಾಡಿ ಮನೆಯಲ್ಲೇ ಇದ್ದು ಮತಹಾಕಿ. ಬಳಿಕ ಇನ್ನೂ ಮೂರು ದಿನ ರಜೆ ಇರುತ್ತೆ, ಎಲ್ಲಿಗೆ ಬೇಕಾದರೂ ಹೋಗಿ. ನನ್ನ ಕ್ಷೇತ್ರದಲ್ಲಿರುವ ಯಾವ ಅಭ್ಯರ್ಥಿಯೂ ಇಷ್ಟವಿಲ್ಲ. ಹೀಗಾಗಿ ಮತಹಾಕಲ್ಲ ಎಂಬ ಅಭಿಪ್ರಾಯ ಬೇಡ. ಅಭ್ಯರ್ಥಿ ಇಷ್ಟವಿಲ್ಲದಿದ್ದರೆ, ನಿಮಗಾಗಿಯೇ 'ನೋಟಾ' ಎಂಬ ಆಯ್ಕೆ ಇದೆ. ಇದನ್ನು ಒತ್ತಿ ಬನ್ನಿ. ನಿಮ್ಮ ತಿರಸ್ಕಾರದ ಹಕ್ಕಿನ ಮತದಿಂದ ಇಂದು ಯಾವ ಪ್ರಯೋಜನ ಆಗದಿದ್ದರೂ, ಮುಂದೊಂದು ದಿನ ಇದರಿಂದಲೇ ಅಭ್ಯರ್ಥಿಯನ್ನೇ ನಿರಾಕರಿಸುವ ಸಾಧ್ಯತೆಗಳು ಬಂದರೂ ಬರಬಹುದು.
ಮತ ಹಾಕೋಕೆ ಮುನ್ನ ಹೀಗೆ ಮಾಡಿ...
ಹೌದು, ಮತ ಏನೋ ಹಾಕುತ್ತೇವೆ, ಆದ್ರೆ ನನ್ನ ವೋಟು ಎಲ್ಲಿದೆ ಎಂದು ಹೇಗೆ ತಿಳಿದುಕೊಳ್ಳೋದು ಎಂಬ ಪ್ರಶ್ನೆಗಳಿದ್ದರೆ ಮುಂದೆ ಓದಿ. ನೀವು ಮನೆಯಿಂದ ಹೇಗೆ ತಯಾರಿಯಾಗಿ ಹೋಗಬೇಕು ಎಂಬುದರಿಂದ ಹಿಡಿದು, ಹೇಗೆ ಮತಹಾಕಿ ಬರಬೇಕು ಎಂಬ ಬಗ್ಗೆಯೂ ಇಲ್ಲಿವೆ ಕೆಲವೊಂದು ಸಲಹೆಗಳು...
ಗುರುತಿಗಾಗಿ ಏನು ಬೇಕು?
- ಫೊಟೋ ಗುರುತು
- ವೋಟರ್ ಐಡಿ
ಇವೆರಡು ಇಲ್ಲವಾದಲ್ಲಿ
- ಪಾಸ್ಪೋರ್ಟ್
- ಡ್ರೈವಿಂಗ್ ಲೈಸೆನ್ಸ್
- (PAN) ಪ್ಯಾನ್ ಕಾರ್ಡ್
- ರಾಜ್ಯ / ಕೇಂದ್ರ ಸರ್ಕಾರ ನೀಡಿರುವ ಸೇವಾ ಗುರುತಿನ ಚೀಟಿ (ಖಜ್ಠಢ್ಝ್ಛಜ ಐಉ)
- ಕಿಸಾನ್ ಪಾಸ್ಪುಸ್ತಕ, ಅಂಚೆ ಪಾಸ್ಪುಸ್ತಕ ಅಥವಾ ಸರ್ಕಾರಿ ಬ್ಯಾಂಕ್ ಪಾಸ್ ಪುಸ್ತಕ
- ಅಧಿಕೃತ ವಿದ್ಯಾಸಂಸ್ಥೆ ನೀಡಿರುವ ವಿದ್ಯಾರ್ಥಿ ಗುರುತಿನ ಚೀಟಿ
- ಭಾವಚಿತ್ರವಿರುವ ಆಸ್ತಿ ಕರಪತ್ರಗಳು
- ರೇಷನ್ ಚೀಟಿ
- ಭಾವಚಿತ್ರವಿರುವ ಎಸ್.ಸಿ/ ಎಸ್.ಟಿ/ ಒಬಿಸಿ ಪ್ರಮಾಣಪತ್ರ
- ಭಾವಚಿತ್ರವಿರುವ ಪಿಂಚಣಿ ದಾಖಲಾಪತ್ರಗಳು
- ಸ್ವಾತಂತ್ರ ಹೋರಾಟಗಾರರ ಗುರುತಿನ ಚೀಟಿ
- ಭಾವಚಿತ್ರವಿರುವ ಆರ್ಮ್ಸ್ ಲೈಸೆನ್ಸ್
- ಭಾವಚಿತ್ರವಿರುವ ಅಂಗವಿಕಲರ ಪ್ರಮಾಣಪತ್ರ
- ಭಾವಚಿತ್ರವಿರುವ ಮಾಜಿ ಸೇವಾ ಸಿ.ಎಸ್.ಡಿ ಕ್ಯಾಂಟೀನ್ ಚೀಟಿ
- ಭಾವಚಿತ್ರವಿರುವ ಸಂಧ್ಯಾ ಸುರಕ್ಷಾ ಯೋಜನಾ ಚೀಟಿ
- ಎನ್.ಆರ್.ಈ.ಜಿ ಯೋಜನೆಯಡಿ ನೀಡಲಾದ ಭಾವಚಿತ್ರವಿರುವ ಉದ್ಯೋಗ ಚೀಟಿ
- ಭಾವಚಿತ್ರವಿರುವ ಯಶಸ್ವಿನಿ ಚೀಟಿ
- ಆಧಾರ್ ಕಾರ್ಡ್
ನಿಗದಿಯಾದ ದಿನಾಂಕದಂದು ಮತಹಾಕಲು ಆಗದಿದ್ದರೆ, ಬೇರೆ ದಿನ ಮತ ಹಾಕಬಹುದೇ?
ಇಲ್ಲ
ಎಡಗೈ ಹೆಬ್ಬೆರಳಿಗೆ ಶಾಯಿ
ಇತ್ತೀಚೆಗಷ್ಟೆ ಕೆಲವೆಡೆ ಗ್ರಾಮ ಪಂಚಾಯಿತಿ, ಎಪಿಎಂಸಿ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಈ ಕ್ರಮ. ಬಹಿರಂಗ ಪ್ರಚಾರ ಕೊನೆ. ಇನ್ನು ಮನೆ ಮನೆಗೆ ತೆರಳಿ ಮತಯಾಚನೆ ಮಾಡುವುದಕ್ಕೆ ಮಾತ್ರ ಅವಕಾಶ
ನನ್ನ ಬದಲಿಗೆ ಬೇರೊಬ್ಬರು ಮತ ಹಾಕಲು ಸಾಧ್ಯವೇ?
ಇಲ್ಲ. ನಿಮ್ಮ ಮತ ನೀವೇ ಹಾಕತಕ್ಕದ್ದು. ಅಂಚೆ ಮೂಲಕ ಮತ ಹಾಕುವ ಯೋಜನೆಯಡಿ ನಿಮ್ಮ ಹೆಸರು ನೊಂದಾಯಿಸಿದ್ದರೆ, ನೀವು ಅಧಿಕೃತ ಮಾಡಿದ ್ಛಟಛಡಡ್ಝಜ್ಝಿಜಜ ಡಜ್ಠಢ್ಝ್ಛಜ ಢ್ಟಡಿಜ್ಠಡ ಮೂಲಕ ಮತ ಹಾಕಬಹುದು. ದೈಹಿಕ ದೌರ್ಬಲ್ಯವಿದ್ದರೆ ಅಥವಾ ಚುನಾವಣಾ ಚಿನ್ಹೆಗಳನ್ನು ಗುರುತಿಸುವಲ್ಲಿ ಸಮಸ್ಯೆಯಾದರೆ, 18 ವರ್ಷಕ್ಕಿಂತ ಮೇಲ್ಪಟ್ಟವರ ಅಥವಾ ಅಧಿಕಾರಿಗಳ ಸಹಾಯ ಪಡೆಯಬಹುದು.
ನನ್ನ ಮತಗಟ್ಟೆ ಯಾವುದು?
ನಿಮ್ಮ ಮತಗಟ್ಟೆ ಹೆಚ್ಚೇನೂ ದೂರವಿರಲ್ಲ, ಮನೆಯಿಂದ ಕೇವಲ 2 ಕಿ.ಮೀ. ಒಳಗೆ ಇರುತ್ತದೆ. ಈ ಬಗ್ಗೆ ಮಾಹಿತಿ ನೀಡಲು ಹಲವಾರು ಕಾರ್ಯಕರ್ತರಿರುತ್ತಾರೆ. ಇವರು ಸಿಗದಿದ್ದರೆ ಪಕ್ಕದ ಮನೆಯವರನ್ನ ಕೇಳಿ. ಇದೂ ಸಾಧ್ಯವಾಗದಿದ್ದರೆ ಆಯೋಗವೇ ಹೇಗೆ ವಿಳಾಸ ಪತ್ತೆ ಹಟ್ಟೋದು ಎಂಬ ಬಗ್ಗೆ ಕೆಲವೊಂದು ಸಲಹೆ ನೀಡಿರುತ್ತದೆ, ಪಾಲಿಸಿ. ಸಾಮಾನ್ಯವಾಗಿ ಮತಕೇಂದ್ರಗಳಾಗಿ, ಶಾಲೆಗಳು, ಸಮುದಾಯ ಕೇಂದ್ರಗಳನ್ನ ಬಳಕೆ ಮಾಡಿರುತ್ತಾರೆ. ನೋಡಿಕೊಳ್ಳಿ.
ನನ್ನ (IDENTITY) ಗುರುತನ್ನು ಪ್ರಶ್ನಿಸಿದ್ದಲ್ಲಿ ನಾನೇನು ಮಾಡಬೇಕು?
ನಿಮ್ಮ ಗುರುತಿನ ಚೀಟಿ ತೋರಿಸಬೇಕು. ಆದರೂ ಗುರುತು ಸ್ಪಷ್ಟವಾಗದಿದ್ದಲ್ಲಿ ನೇರವಾಗಿ ಈಆರ್ಓರಲ್ಲಿ ದೂರು ದಾಖಲಿಸಬೇಕು. ಪರಿಹಾರ ಸಿಗದಿದ್ದಲ್ಲಿ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಬೇಕು. ನೀವು ಬೇರೆಯವರ ಗುರುತಿನ ಚೀಟಿಯೊಂದಿಗೆ ಮತಹಾಕಲು ಹೊರಟರೆ, ಪೊಲೀಸ್ಗೆ ನಿಮ್ಮನ್ನು ಒಪ್ಪಿಸಲಾಗುವುದು.
ನನ್ನ ಮತಹಾಕಲು ತಡೆ ಇದೆಯೆ?
ಇಲ್ಲ, ಆದರೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ, ಸಂಬಂಧಪಟ್ಟ ದಾಖಲೆ/ ಗುರುತಿನ ಚೀಟಿ ಇಲ್ಲದಿದ್ದಲ್ಲಿ, ಅಪರಾಧ ಮಾಡಿದ್ದಲ್ಲಿ ಅಥವಾ ಮಾನಸಿಕವಾಗಿ ಅಸ್ವಸ್ಥರಾಗಿದ್ದಲ್ಲಿ ಮತಹಾಕಲು ಬಿಡಲಾಗುವುದಿಲ್ಲ.
ನನ್ನ ಹೆಸರಿನಲ್ಲಿ ಬೇರೆ ಯಾರೋ ಮತಹಾಕ್ಕಿದ್ದರೆ ಏನುಮಾಡಬೇಕು?
ಕೂಡಲೇ ಚುನಾವಣಾಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತರಬೇಕು. ನಿಮಗೆ “Tendered Ballot Paper” ನಲ್ಲಿ ಮತಹಾಕಲು ಅವಕಾಶ ಕಲ್ಪಿಸಲಾಗುವುದು.
ಅಂಚೆ ಮೂಲಕ ಮತ ಚಲಾಯಿಸಬಹುದೇ?
ಸಾಧ್ಯವುಂಟು, ಆದರೆ ಸೇವೆಯಲ್ಲಿ ನಿರತರಾದ ಸರ್ಕಾರಿ ನೌಕರ ಅಥವಾ ಸೇನಾ ಸಿಬ್ಬಂದಿ ಮಾತ್ರ ಈ ಸೌಲಭ್ಯಕ್ಕೆ ಅರ್ಹರು.
ಕಣದಲ್ಲಿರುವ ಹಾಲಿ ಸಂಸದರು
09 ಕಾಂಗ್ರೆಸ್
15 ಬಿಜೆಪಿ
01 ಜೆಡಿಎಸ್
23 ಒಟ್ಟು
ಕಣದಲ್ಲಿರುವ ಹಾಲಿ ಶಾಸಕರು
04 ಕಾಂಗ್ರೆಸ್
02 ಬಿಜೆಪಿ
01 ಜೆಡಿಎಸ್
07 ಒಟ್ಟು
ಚುನಾವಣಾ ವಿವರ
434 ಒಟ್ಟು ಅಭ್ಯರ್ಥಿಗಳು
ಒಟ್ಟು ಮತದಾರರು
46211844
ಪುರುಷರು
23555074
ಮಹಿಳೆಯರು
22612084
ತೃತೀಯ
3957