ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಹಿಟ್ಲರ್, ಮುಸೊಲೊನಿ, ಇದಿ ಅಮೀನ್; ಮೋದಿಗೆ ಮತ್ತಷ್ಟು ಕೈ 'ಬಿರುದು'

ಹಿಟ್ಲರ್, ಮುಸಲೊನಿ, ಇದಿ ಅಮೀನ್, ಝಿಯಾವುಲ್ ಹಖ್...

Srinivasa Murthy VN
Updated On : 18 Apr 2014, 1:42 am

ನವದೆಹಲಿ: ಹಿಟ್ಲರ್, ಮುಸಲೊನಿ, ಇದಿ ಅಮೀನ್, ಝಿಯಾವುಲ್ ಹಖ್... ಇವುಗಳು ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಕೊಟ್ಟ 'ಬಿರುದು'ಗಳು!
ಹೌದು. ಮೋದಿ ವಿರುದ್ಧದ ತನ್ನ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಈಗ ಮೋದಿಯನ್ನು ಈ ಸರ್ವಾಧಿಕಾರಿಗಳ ಸಾಲಿಗೆ ಸೇರಿಸಿದೆ. ಈ ಎಲ್ಲ ಸರ್ವಾಧಿಕಾರಿಗಳೂ ಭಾರಿ ಮತಗಳ ಅಂತರದಿಂದ ಗೆದ್ದವರು. ಆದರೆ ಅವರ ಗೆಲವು ಅವರು ಮಾಡಿದ ನರಮೇಧದ ಆರೋಪಗಳಿಂದ ದೋಷಮುಕ್ತಗೊಳಿಸಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ. ಇಂತಹ ಚುನಾಯಿತ ಸರ್ವಾಧಿಕಾರಿಗಳೆಂದರೆ- ಗುಜರಾತ್‌ನಲ್ಲಿ ಮೋದಿ, ಉಗಾಂಡಾದಲ್ಲಿ ಇದಿ ಅಮೀನ್... ಇವರ ಪ್ರಕರಣದಲ್ಲಿ ನ್ಯಾಯಾಧೀಶರೂ ಇವರೇ, ತೀರ್ಪುಗಾರರೂ ಇವರೇ, ಪ್ರಾಸಿಕ್ಯೂಟರ್‌ಗಳೂ ಇವರೇ. ಈ ಸರ್ವಾಧಿಕಾರಿಗಳಿಗೆ ಕರುಣೆ ಎಂಬುದಿಲ್ಲ. ಅವರು ತಮ್ಮ ತಪ್ಪುಗಳ ಜತೆ ರಾಜಿ ಮಾಡಿಕೊಂಡಿದ್ದಾರೆ. ಹಾಗಾಗಿ ಅವರು ಕ್ಷಮೆ ಕೋರುವುದೂ ಇಲ್ಲ ಎಂದೂ ಹೇಳಿದ್ದಾರೆ ಸಿಂಘ್ವಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement