ಪ್ರಿಯಾಂಕಾ ವಿರುದ್ಧ ದೂರು
ಅಮೇಠಿ: 'ಪ್ರಿಯಾಂಕಾ ವಾದ್ರಾ ನನ್ನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ' ಎಂದು ಆರೋಪಿಸಿದ್ದ ಆಪ್ ಅಭ್ಯರ್ಥಿ ಕುಮಾರ್ ವಿಶ್ವಾಸ್, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಅಮೇಠಿಯಲ್ಲಿ ರಾಹುಲ್ ವಿರುದ್ಧ ಕಣಕ್ಕಿಳಿದಿರುವ ಕುಮಾರ್ ವಿಶ್ವಾಸ್ ಗುರುವಾರವಷ್ಟೇ 'ಪ್ರಿಯಾಂಕಾ ನನ್ನ ಕೊಲ್ಲಲು ಸಂಚು ರೂಪಿಸಿದ್ದಾರೆ. ಇದಕ್ಕಾಗಿಯೇ ವ್ಯಕ್ತಿಯೊಬ್ಬನನ್ನು ನಿಯೋಜಿಸಿದ್ದು ತಮ್ಮ ಅತಿಥಿಗೃಹಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಈ ವ್ಯಕ್ತಿಯೊಂದಿಗೆ ರಾಹುಲ್ ಹಾಗೂ ಪ್ರಿಯಾಂಕಾ ಆಪ್ತರಾಗಿದ್ದಾರೆ' ಎಂದು ಆರೋಪಿಸಿದ್ದರು.