3 ದಿನ ಟಿವಿ ಆಫ್ ಮಾಡ್ಬೇಕಂತೆ
ಕರೌಲಿ: ಬಿಜೆಪಿ ನೀಡುತ್ತಿರುವ ಜಾಹೀರಾತಿನ ಬಗ್ಗೆ ಲೇವಡಿ ಮಾಡಿರುವ ಕಾಂಗ್ರೆಸ್ ಗುರುವಾರ (ಏ.24)ದವರೆಗೆ ಎಲ್ಲರೂ ತಮ್ಮ ಟಿವಿಗಳನ್ನು ಸ್ವಿಚ್ ಆಫ್ ಮಾಡಿಡುವಂತೆ ಮತದಾರರಿಗೆ ಆಗ್ರಹಿಸಿದೆ. ರಾಜಸ್ಥಾನದ ಕರೌಲಿಯಲ್ಲಿ ಭಾನುವಾರ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಪಿ. ಜೋಶಿ, ದೇಶದಲ್ಲಿ ಬಿಜೆಪಿ ಅಲೆ ಇಲ್ಲ. ಮುಂದಿನ 3 ದಿನ ನಿಮ್ಮ ಟಿವಿಗಳನ್ನು ಸ್ವಿಚ್ ಆಫ್ ಮಾಡುವುದು ಒಳ್ಳೆಯದು ಎಂದಿದ್ದಾರೆ. 24ರಂದು ರಾಜಸ್ಥಾನದ ಉಳಿದ 5 ಸೀಟುಗಳಿಗೆ ಮತದಾನ ನಡೆಯಲಿದೆ.