ಅಮೇಠಿ: ಕೇಜ್ರಿ ವಿರುದ್ಧ ಪ್ರತಿಭಟನೆ
ಅಮೇಠಿ: ಅಮೇಠಿಯಲ್ಲಿ ರೋಡ್ಶೋ ನಡೆಸಲು ಬಂದ ಆಪ್ ನಾಯಕ ಕೇಜ್ರಿವಾಲ್ ಹಾಗೂ ಅವರ ಬೆಂಬಲಿಗರ ಮೇಲೆ ಮಹಿಳೆಯರ ಗುಂಪೊಂದು ಘೇರಾವ್ ಹಾಕಿದ ಘಟನೆ ಭಾನುವಾರ ನಡೆದಿದೆ. ಅಯೋಧ್ಯಾನಗರದಲ್ಲಿ ಆಪ್ ಅಭ್ಯರ್ಥಿ ಕುಮಾರ್ ವಿಶ್ವಾಸ್ ಪರ ಮತ ಯಾಚಿಸಲೆಂದು ಕೇಜ್ರಿವಾಲ್ ಆಗಮಿಸಿದ್ದರು. ಈ ವೇಳೆ 'ರಾಹುಲ್ ಗಾಂಧಿ ಜಿಂದಾಬಾದ್, ದೆಹಲಿಯಿಂದ ಪರಾರಿಯಾದವ ವಾಪಸ್ ಹೋಗು' ಎಂದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾಕಾರರು ಕೇಜ್ರಿಗೆ ಮುತ್ತಿಗೆ ಹಾಕಿದರು.