ಆರೋಪ ಸಂಚಿನ ಫಲ: ಅಜಯ್
ವಾರಾಣಸಿ: ನಾನು ಅಕ್ರಮ ಗನ್ ವ್ಯಾಪಾರ ಮಾಡುತ್ತೇನೆ ಎಂಬ ಮೋದಿ ಆಪ್ತ ಅಮಿತ್ ಷಾ ಅವರ ಆರೋಪ ಶುದ್ಧ ಸುಳ್ಳು, ಇದೊಂದು ಕುತಂತ್ರ ಎಂದು ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದಿರುವ ಕಾಂಗ್ರೆಸ್ನ ಅಜಯ್ ರಾಯ್ ತಿಳಿಸಿದ್ದಾರೆ. ಒಂದು ವೇಳೆ ಷಾ ಮಾಡಿರುವ ಆರೋಪ ನಿಜವೆಂದಾದರೆ, ನಾನು ಸಕ್ರಿಯ ರಾಜಕಾರಣವನ್ನೇ ತ್ಯಜಿಸುತ್ತೇನೆ ಎಂದೂ ಹೇಳಿದ್ದಾರೆ. ಜತೆಗೆ ಈ ಬಗ್ಗೆ ಆಯೋಗಕ್ಕೆ ದೂರು ನೀಡುವುದಾಗಿಯೂ ತಿಳಿಸಿದ್ದಾರೆ.