ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕ್ಷೇತ್ರ ನಿಭಾಯಿಸಲಾಗದ ಅಸಮರ್ಥ ದೇಶ ಕಾವನೇ?

ಗಾಂಧಿಗೆ ಸರಿಯಾಗಿ ಸ್ವಕ್ಷೇತ್ರ ಅಮೇಠಿಯ..

Srinivasa Murthy VN
Updated On : 21 Apr 2014, 12:56 pm

ಸರ್ಗುಜಾ/ಬಿಲಾಸ್ಪುರ/ಕರೌಲಿ/ನಾಸಿಕ್:
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಛತ್ತೀಸ್‌ಗಡ, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ತಮ್ಮ ಪಕ್ಷದ ಪರವಾಗಿ ಪ್ರಚಾರ ನಡೆಸಿ ವಾಕ್ಸಮರ ನಡೆಸಿದರು.

ಕ್ಷೇತ್ರ ಮುನ್ನಡೆಸಲು ಅಸಮರ್ಥ: ಮೋದಿ

ಛತ್ತೀಸ್‌ಗಡದ ಸರ್ಗುಜಾ, ಮಹಾರಾಷ್ಟ್ರದ ನಾಸಿಕ್, ಬಿಲಾಸ್ಪುರಗಳಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಹೇಳಿದ್ದು
- ಗಾಂಧಿಗೆ ಸರಿಯಾಗಿ ಸ್ವಕ್ಷೇತ್ರ ಅಮೇಠಿಯನ್ನೇ ನೋಡಿಕೊಳ್ಳಲು ಆಗುತ್ತಿಲ್ಲ. ಇನ್ನು ದೇಶದ ಆಡಳಿತವನ್ನು ಸರಿಯಾಗಿ ನೋಡಿಕೊಂಡಾರೇ?
- ತಾಯಿ-ಮಗನ ಸರ್ಕಾರದ ಅವಧಿಯಲ್ಲಿ ರಾಬರ್ಟ್ ವಾದ್ರಾರ ಆಸ್ತಿಯೂ ಗಣನೀಯವಾಗಿ ಹೆಚ್ಚಿತು.
- ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿ ವಂಚಿಸಿದರು.
- ದೇಶದ ಯುವಕರಿಗೆ ಸಿಗುವ ಉದ್ಯೋಗ ಜೀಜಾಜಿ (ರಾಹುಲ್ ಭಾವ ರಾಬರ್ಟ್ ವಾದ್ರಾ)ಗೆ ಸಿಕ್ಕಿದೆ.
- ಮಹಿಳೆಯರ ಸುರಕ್ಷತೆ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷರು ದೇಶಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ.
- ಶರದ್ ಪವಾರ್ ಬುದ್ಧಿವಂತ ರಾಜಕಾರಣಿ. ತಾನು ಸೋಲುತ್ತೇನೆ ಎಂದು ಗೊತ್ತಿದ್ದಿದ್ದಕ್ಕೆ ಅವರು ಚುನಾವಣೆಯಿಂದ ಹಿಂದೆ ಸರಿದರು.

ರಾಜಸ್ಥಾನ ಕರೌಲಿಯಲ್ಲಿ ರಾಹುಲ್ ಗಾಂಧಿ
- ಮಾಜಿ ಪ್ರಧಾನಿ ವಾಜಪೇಯಿ ಈಗಲೂ ರಾಜಕೀಯದಲ್ಲಿರುತ್ತಿದ್ದರೆ ಜಸ್ವಂತ್ ಸಿಂಗ್, ಎಲ್.ಕೆ.ಆಡ್ವಾಣಿಯವರನ್ನು ಮೂಲೆಗುಂಪು ಮಾಡಿದಂತೆ ಅವರನ್ನೂ ನರೇಂದ್ರ ಮೋದಿ ಬದಿಗೆ ಸರಿಸುತ್ತಿದ್ದರು.
- ದೇಶಕ್ಕೆ ಕಾವಲುಗಾರ ಬೇಕೆಂದು ಹೇಳುವ ವ್ಯಕ್ತಿ ಗುಜರಾತ್‌ನಲ್ಲಿ ಉದ್ಯಮಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ.
- ಗುಜರಾತ್‌ನಲ್ಲಿ ಅಭಿವೃದ್ಧಿಯಾಗಿರುವುದು ವ್ಯಕ್ತಿಯೊಬ್ಬನಿಂದ ಅಲ್ಲ. ಅಲ್ಲಿನ ಜನರು, ಕಾರ್ಮಿಕರು ಮತ್ತು ಇತರರು ಈ ಉದ್ದೇಶಕ್ಕಾಗಿ ಶ್ರಮಿಸಿದ್ದಾರೆ.
ಮೋದಿಯೇ ಪ್ರಧಾನಿ
ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದರೆ ಮೋದಿಯೇ ಪ್ರಧಾನಿ ಆಗಲಿದ್ದಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಎನ್‌ಡಿಎಗೆ ಬಹುಮತದ ಕೊರತೆ ಬಿದ್ದು, ಯಾವುದಾದರೂ ಮೈತ್ರಿ ಪಕ್ಷ ಮೋದಿ ಬದಲು ಬೇರೊಬ್ಬ ನಾಯಕನ ಆಯ್ಕೆ ಬಯಸಿದರೆ ಅದನ್ನು ಒಪ್ಪಲಾಗದು ಎಂದು ತಿಳಿಸಿದ್ದಾರೆ. ಸದ್ಭಾವನಾ ಉಪವಾಸದ ಸಂದರ್ಭದಲ್ಲಿ ನರೇಂದ್ರ ಮೋದಿ ಮುಸ್ಲಿಮರ ಟೋಪಿ ಧರಿಸದೇ ಇದ್ದ ಬಗ್ಗೆ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳು ವಿನಾಕಾರಣ ವಿವಾದ ಉಂಟುಮಾಡುತ್ತಿವೆ ಎಂದು ಅವರು ದೂರಿದರು. 'ನಾನು ಧೋತಿ- ಕುರ್ತಾ, ನೀವು ಪ್ಯಾಂಟ್-ಶರ್ಟ್, ಮೋದಿ ಕುರ್ತಾ-ಪೈಜಾಮ ಧರಿಸುತ್ತಾರೆ. ಇಂಥ ವಿಚಾರಕ್ಕೆಲ್ಲ ಅಪಸ್ವರ ಎತ್ತಬಹುದೇ? ಟೀಕೆಗೆ ಅದೊಂದು ವಿಷಯವೇ?' ಎಂದು ರಾಜನಾಥ್ ಸಿಂಗ್ ಪ್ರಶ್ನಿಸಿದರು.

ಮ್ಯಾನ್ ಆಫ್ ಡ್ಯಾಮೇಜ್ ಟು ಇಂಡಿಯಾ - ಮೋದಿ
(MODI)

'ಮೋದಿ ಅಂದರೆ ಮ್ಯಾನ್ ಆಫ್ ಡ್ಯಾಮೇಜ್ ಟು ಇಂಡಿಯಾ. ಬಿಜೆಪಿ ಅಂದರೆ ಭಾರತ್ ಜಲಾವೋ ಪಾರ್ಟಿ (ಭಾರತವನ್ನು ಉರಿಸುವ ಪಕ್ಷ). ಹೀಗೆಂದು ತಲೆಹರಟೆ ವ್ಯಾಖ್ಯಾನ ಮಾಡಿದ್ದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ. ಅಹಮದಾಬಾದ್‌ನಲ್ಲಿ ಭಾನುವಾರ ಮಾತನಾಡಿದ ಅವರು ಗುಜರಾತ್ ಅಭಿವೃದ್ಧಿಗೆ ಜನರೇ ಕಾರಣ ಎಂದು ಅಭಿಪ್ರಾಯಪಟ್ಟರು. ಮೋದಿಯಿಂದ ದೇಶಕ್ಕೆ ಹಾನಿ, ಬಿಜೆಪಿ ದೇಶವನ್ನೇ ಹೊತ್ತಿ ಉರಿಸುತ್ತಿದೆ ಎಂದರು. ರ್ಯಾಲಿಯೊಂದರಲ್ಲಿ ನರೇಂದ್ರ ಮೋದಿ ಕಾಂಗ್ರೆಸ್ ಅನ್ನು ಆರ್‌ಎಸ್‌ವಿಪಿ (RSVP) ಮಾದರಿ ಅಂದರೆ ರಾಹುಲ್, ಸೋನಿಯಾ, ವಾದ್ರಾ, ಪ್ರಿಯಾಂಕಾ ಎಂದು ಟೀಕಿಸಿದ್ದರು. ಅದಕ್ಕೆ ಪ್ರತಿಯಾಗಿ ಸಿಂಘ್ವಿ ಈ ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement