ಖನ್ನಾ ವಿರುದ್ಧ ಕಾಂಗ್ರೆಸ್ ದೂರು
ಸಾಮಾಜಿಕ ತಾಣದಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ ನಟ, ಬಿಜೆಪಿ ಅಭ್ಯರ್ಥಿ ವಿನೋದ್ ಖನ್ನಾ ವಿರುದ್ಧ..
ಚಂಡೀಗಡ: ಸಾಮಾಜಿಕ ತಾಣದಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ ನಟ, ಬಿಜೆಪಿ ಅಭ್ಯರ್ಥಿ ವಿನೋದ್ ಖನ್ನಾ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ. ವಿನೋದ್ ಖನ್ನಾ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಜಯ್ ಶರ್ಮಾ ವಿರುದ್ಧ ಕಾಂಗ್ರೆಸ್ ದೂರು ಸಲ್ಲಿಸಿದೆ. ಇವರಿಬ್ಬರೂ ವಾಟ್ಸ್ಆ್ಯಪ್ ಮೂಲಕ ದ್ವೇಷಪೂರಿತ, ಸಮಾಜದ ಶಾಂತಿಗೆ ಭಂಗವುಂಟುಮಾಡುವ ಸಂದೇಶಗಳನ್ನು ಕಳುಹಿಸುತ್ತಿರುವುದಾಗಿ ಕಾಂಗ್ರೆಸ್ ಆರೋಪಿಸಿದೆ.