ಗಿಲಾನಿ ಭೇಟಿಯಾಗಿದ್ದು ನಿಜ
ಶ್ರೀನಗರ: ನಾನು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯ್ಯದ್ ಅಲಿ ಶಾ ಗಿಲಾನಿ ಅವರನ್ನು ಭೇಟಿಯಾಗಿದ್ದು ನಿಜ. ಆದರೆ ಮೋದಿಯ ಪ್ರತಿನಿಧಿಯಾಗಿ ಅಲ್ಲ ಎಂದು ಲೋಕಜನಶಕ್ತಿ ಪಕ್ಷದ ನಾಯಕ ಸಂಜಯ್ ಸರಾಫ್ ಭಾನುವಾರ ಸ್ಪಷ್ಟಪಡಿಸಿದ್ದಾರೆ. ಎನ್ಡಿಎ ಮೈತ್ರಿಕೂಟವಾಗಿರುವ ಎಲ್ಜೆಪಿ ನಾಯಕ ಸಂಜಯ್ ಅವರು ಮೋದಿ ನೀಡಿರುವ ಸಂದೇಶವನ್ನು ಹುರಿಯತ್ ನಾಯಕನಿಗೆ ತಲುಪಿಸಲೆಂದು ಅವರನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿತ್ತು. ಇದನ್ನು ತಿರಸ್ಕರಿಸಿದ ಸಂಜಯ್, ನನ್ನ ಮತ್ತು ಗಿಲಾನಿ ಭೇಟಿ ವೈಯಕ್ತಿಕ ಎಂದಿದ್ದಾರೆ.