ಪವಾರ್ ವಿರುದ್ಧ ಎಫ್‌ಐಆರ್
ತನ್ನ ಸಂಬಂಧಿ ಸುಪ್ರಿಯಾ ಸುಳೆ ಅವರಿಗೆ ಮತ ಹಾಕುವಂತೆ ಬೆದರಿಕೆ ಹಾಕಿದ ಎನ್‌ಸಿಪಿ ನಾಯಕ, ಮಹಾರಾಷ್ಟ್ರ ಉಪಮುಖ್ಯಮಂತ್ರಿ..
ಮುಂಬೈ: ತನ್ನ ಸಂಬಂಧಿ ಸುಪ್ರಿಯಾ ಸುಳೆ ಅವರಿಗೆ ಮತ ಹಾಕುವಂತೆ ಬೆದರಿಕೆ ಹಾಕಿದ ಎನ್‌ಸಿಪಿ ನಾಯಕ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸುಳೆ ಅವರಿಗೆ ಮತ ಹಾಕದಿದ್ದರೆ ನೀರು ಪೂರೈಕೆ ಸ್ಥಗಿತಗೊಳಿಸುತ್ತೇನೆ ಎಂದು ಪವಾರ್ ಇತ್ತೀಚೆಗೆ ರ್ಯಾಲಿಯೊಂದರಲ್ಲಿ ಮತದಾರರಿಗೆ ಬೆದರಿಕೆ ಹಾಕಿದ್ದರು. ಬಾರಾಮತಿಯ ಆಪ್ ಅಭ್ಯರ್ಥಿ ಸುರೇಶ್ ಖೋಪ್ಡೆ ಅವರು ಈ ಬಗ್ಗೆ ದೂರು ದಾಖಲಿಸಿದ್ದು, ಪವಾರ್ ಭಾಷಣದ ಆಡಿಯೋ ಸಿಡಿಯನ್ನೂ ಒದಗಿಸಿದ್ದಾರೆ.