ಮೋದಿ ಇಲ್ಲದಿದ್ರೆ 'ಕೈ'ಗೇ ಅಧಿಕಾರ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಬಿಜೆಪಿ ಮುಂಚೂಣಿ ನಾಯಕ ಎಂದು..
ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಬಿಜೆಪಿ ಮುಂಚೂಣಿ ನಾಯಕ ಎಂದು ಘೋಷಿಸದೇ ಇರುತ್ತಿದ್ದರೆ ಕಾಂಗ್ರೆಸ್‌ಗೆ ಅನುಕೂಲವಾಗುತ್ತಿತ್ತು. ಹೀಗೆಂದು ಹೇಳಿದ್ದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಪ್ರತಿಪಾದಿಸಿದ್ದಾರೆ. ಈ ಮೂಲಕ ಬಿಜೆಪಿ ನಾಯಕರಲ್ಲಿ ಇರಿಸು ಮುರಿಸು ಉಂಟು ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಮೋದಿಯವರಂಥ ಪ್ರಭಾವಿ ನಾಯಕರಿಲ್ಲ. ದೇಶದಲ್ಲಿ ನರೇಂದ್ರ ಮೋದಿಯವರನ್ನು ಜನರು ಸ್ವೀಕರಿಸಿದ್ದಾರೆ.
ಸೌಹಾರ್ದಯುತ ಪರಿಹಾರ: ರಾಮಮಂದಿರ ವಿಚಾರವನ್ನು ಬಿಜೆಪಿ ಮರೆತಿಲ್ಲ ಎಂದು ನಖ್ವಿ ತಿಳಿಸಿಜ್ಜಾರೆ. ಆ ವಿಚಾರವನ್ನು ಸಂವಿಧಾನದ ನೆಲೆಯಲ್ಲಿ ಪರಿಹಾರ ಮಾಡುವ ಬಗ್ಗೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ. ಸ್ವಂತ ಬಲದಿಂದ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ದಶಕಗಳಿಂದ ಉಳಿದಿರುವ ವಿವಾದವನ್ನು ಬಗೆಹರಿಸಲಾಗುತ್ತದೆ ಎನ್ನುವುದು ಪಕ್ಷದ ನಿಲುವಾಗಿದೆ ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.