ಹೇಮಾ ನಿಂತಿದ್ದ ವೇದಿಕೆ ಕುಸಿತ
ಮಥುರಾ: ಚುನಾವಣಾ ಪ್ರಚಾರದ ವೇಳೆ ಮಥುರೆಯ ಬಿಜೆಪಿ ಅಭ್ಯರ್ಥಿ, ನಟಿ ಹೇಮಮಾಲಿನಿ ಅವರಿದ್ದ ವೇದಿಕೆಯು ಭಾಗಶಃ ಕುಸಿದ ಘಟನೆ ಶನಿವಾರ ನಡೆದಿದೆ. ರಿಫೈನರಿ ನಗರದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಹೇಮಾ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೇಮಾ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಆಕೆಯನ್ನು ನೋಡಲೆಂದು ಸೇರಿದ್ದ ಜನ ಆಕೆಯೊಡನೇ ವೇದಿಕೆ ಹತ್ತಲು ಯತ್ನಿಸಿದಾಗ ಈ ಘಟನೆ ನಡೆದಿದೆ.