ನೀಚ ರಾಜನೀತಿ ಸೋನಿಯಾ ಗರಂ
ನರೇಂದ್ರ ಮೋದಿ ಅವರ 'ನೀಚ ರಾಜನೀತಿ' ಮಾಡುತ್ತಿದ್ದಾರೆ ಎಂದು ಹೇಳಿ ಪ್ರಿಯಾಂಕಾ ವಾದ್ರಾ ವಿವಾದ ಸೃಷ್ಟಿಸಿದ ಬೆನ್ನಲ್ಲೇ...
ನರೇಂದ್ರ ಮೋದಿ ಅವರ 'ನೀಚ ರಾಜನೀತಿ' ಮಾಡುತ್ತಿದ್ದಾರೆ ಎಂದು ಹೇಳಿ ಪ್ರಿಯಾಂಕಾ ವಾದ್ರಾ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಈಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಮೋದಿ ವಿರುದ್ಧ ಅದೇ ಟೀಕೆ ಮಾಡಿದ್ದಾರೆ. ಗುರುವಾರ ಉತ್ತರಪ್ರದೇಶದ ಖುಷಿನಗರ್‌ನಲ್ಲಿ ಸೋನಿಯಾ ರ್ಯಾಲಿ ನಡೆಸಿದರೆ, ಬಿಹಾರದ ಗೋಪಾಲ್‌ಗಂಜ್‌ನಲ್ಲಿ ರಾಹುಲ್ ರ್ಯಾಲಿ ನಡೆಯಿತು. ತಾಯಿ-ಮಗ ಇಬ್ಬರೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೇಲೆ ವಾಗ್ದಾಳಿ ನಡೆಸಲು ಮರೆಯಲಿಲ್ಲ.
- ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರನ್ನು ಮೋದಿ ಅವರು ಪದೇ ಪದೆ ಅವಮಾನಿಸುತ್ತಿದ್ದಾರೆ. ಇಂತಹ ಕೆಳಮಟ್ಟದ ರಾಜಕೀಯವು ಮೋದಿ ಅವರಿಗಾಗಲೀ, ರಾಷ್ಟ್ರ ರಾಜಕೀಯಕ್ಕಾಗಲೀ ಸರಿಕಾಣುವುದಿಲ್ಲ.
- ವಾಜಪೇಯಿ ಹಾಗೂ ಇತರೆ ಮಾಜಿ ಪ್ರಧಾನಿಗಳು ತಮ್ಮ ಹುದ್ದೆಯ ಘನತೆಯನ್ನು ಕಾಪಾಡಿಕೊಂಡಿದ್ದರು. ಆದರೆ ಮೋದಿ ಅವರು ರಾಜೀವ್ ಬಗ್ಗೆ ಆಡುತ್ತಿರುವ ಮಾತುಗಳು ಅವರೆಷ್ಟು ನೀಚ ಮಟ್ಟಕ್ಕಿಳಿದಿದ್ದಾರೆ ಎಂಬುದನ್ನು ತೋರಿಸುತ್ತದೆ
- ಮೋದಿ ಅವರು ಈ ಮಹಾನ್ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಹೃದಯ ವೈಶಾಲ್ಯತೆಯನ್ನು ಅರಿತುಕೊಳ್ಳಬೇಕು. ಅವರ ಮಾತುಗಳಲ್ಲಿ ಇಂತಹ ಕೀಳು ಪದಗಳು ಬರುತ್ತದೆಂದಾದರೆ, ಅವರ ಕೆಲಸ ಹೇಗಿರಬಹುದೆಂಬುದು ಎಲ್ಲರಿಗೂ ಅರ್ಥವಾಗುತ್ತದೆ.
- ಇತರೆ ನಾಯಕರನ್ನು ದೂಷಿಸುವುದು ನೈಜ ನಾಯಕನ ಲಕ್ಷಣವಲ್ಲ
- ಮೋದಿ ಅವರ ಮಾತುಗಳಲ್ಲಿ ಕೋಪವು ತಾಂಡವವಾಡುತ್ತಿರುತ್ತದೆ. ಈ ಕೋಪವು ಮನಸ್ಸಿನೊಳಗಿನ ಕೋಪ ಮತ್ತು ದ್ವೇಷದ ಸಂಕೇತ. ನೀವೇ ನೋಡಿ, ಮಹಾತ್ಮ ಗಾಂಧಿ ಹಾಗೂ ರಬೀಂದ್ರನಾಥ ಟ್ಯಾಗೋರ್ ಅವರು ಭಯರಹಿತ ವ್ಯಕ್ತಿಗಳು. ಅವರಲ್ಲಿ ಎಂದಿಗೂ ಕೋಪ ಕಾಣುತ್ತಿರಲಿಲ್ಲ.
- ಇತರರ ಮಾತುಗಳನ್ನು ಸಹನೆಯಿಂದ ಆಲಿಸುವವ ಮತ್ತು ಪ್ರೀತಿ, ಸೌಹಾರ್ದತೆಯ ಸಂದೇಶ ಸಾರುವವನೇ ನೈಜ ನಾಯಕ
- ನಾವು ದೇಶವು ಎಲ್ಲ ವರ್ಗಗಳ ಜನರಿಗೂ ಸೇರಿದ್ದು ಎಂದು ಭಾವಿಸುತ್ತೇವೆ. ಆದರೆ ಬಿಜೆಪಿ ಮಾತ್ರ ನಮ್ಮ ದೇಶವು ಕೇವಲ ಒಂದು ಧರ್ಮ ಅಥವಾ ಜಾತಿ ಅಥವಾ 2-3 ಉದ್ಯಮಿಗಳಿಗೆ ಸೇರಿದ್ದು ಎಂದು ಭಾವಿಸಿದೆ.