ರಾಹುಲ್ಗೆ ನೋಟಿಸ್
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದಲ್ಲಿ 22 ಸಾವಿರ ಮಂದಿ ಸಾವಿಗೀಡಾಗುತ್ತಾರೆ...
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದಲ್ಲಿ 22 ಸಾವಿರ ಮಂದಿ ಸಾವಿಗೀಡಾಗುತ್ತಾರೆ ಎಂದು ಹೇಳಿದ ರಾಹುಲ್ ಗಾಂಧಿಗೆ ಆಯೋಗ ನೋಟಿಸ್ ನೀಡಿದೆ. ಮೇ 12ರ ಒಳಗಾಗಿ ಈ ಬಗ್ಗೆ ಉತ್ತರ ನೀಡಬೇಕೆಂದು ಆಯೋಗ ಕಾಂಗ್ರೆಸ್ ಉಪಾಧ್ಯಕ್ಷಗೆ ಸೂಚಿಸಿದೆ. ಮತ್ತೊಂದೆಡೆ ಅಮೇಠಿಯಲ್ಲಿ ಅವರು ಮತಗಟ್ಟೆ ಪ್ರವೇಶ ವಿವಾದಕ್ಕೆ ಸಂಬಂಧಿಸಿದಂತೆ ಆಯೋಗ ಹೆಚ್ಚಿನ ತನಿಖೆಗೆ ಆದೇಶಿಸಿದೆ. ಸೋಮವಾರದ ಒಳಗೆ ತನಿಖಾ ವರದಿ ಕೈಸೇರಬೇಕೆಂದು ಆಯೋಗ ಸೂಚಿಸಿದೆ.
ಇಂದು ರೋಡ್ಶೋ
ನವದೆಹಲಿ: ಅಮೇಠಿಯಲ್ಲಿ ನರೇಂದ್ರ ಮೋದಿ ಪ್ರಚಾರ ನಡೆಸಿದ್ದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ರೋಡ್ಶೋ ನಡೆಸಲಿದ್ದಾರೆ. ಮೇ 12ರಂದು ಮತದಾನ ನಡೆವ ಹಿನ್ನೆಲೆಯಲ್ಲಿ ಶನಿವಾರ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಈ ನಡುವೆ ರಾಹುಲ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ ನಾಯಕ ರವಿಶಂಕರ ಪ್ರಸಾದ್ ರಾಹುಲ್ ಗಾಂಧಿ ಮತ್ತು ಕೇಜ್ರಿವಾಲ್ ರೋಡ್-ಶೋ ಮಾಡಲಿ ಅಥವಾ ಏರ್-ಶೋ ಮಾಡಲಿ. ಮೋದಿಯವರನ್ನು ಗೆಲ್ಲಿಸಲು ವಾರಾಣಸಿ ಜನರು ನಿರ್ಧರಿಸಿದ್ದಾರೆ ಎಂದಿದ್ದಾರೆ.