ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮೋದಿ ಆಡ್ವಾಣಿಯ ಚೇಲಾ

Srinivasa Murthy VN
Updated On : 11 May 2014, 1:33 am

ಮೋತಿಹಾರಿ: ಬಿಜೆಪಿ ನಾಯಕ ನರೇಂದ್ರ ಮೋದಿ ಅವರನ್ನು ಆಡ್ವಾಣಿ ಅವರ ಚೇಲಾ ಎಂದಿದ್ದಾರೆ ಆರ್‌ಜೆಡಿ ನಾಯಕ ಲಾಲು ಯಾದವ್. 'ಗುರು'ವಿನಿಂದ 'ಶಿಷ್ಯ' ಎಲ್ಲ ರೀತಿಯ ವಿದ್ಯೆಯನ್ನೂ ಕಲಿತಿದ್ದಾರೆ. ಆದರೆ ಒಂದು ವಿಚಾರವನ್ನು ಮಾತ್ರ ಅವರು ಕಲಿತಿಲ್ಲ. ವರ್ಷಗಳ ಹಿಂದೆ ಗುರುವನ್ನು ನಾನೇ ತಡೆದಿದ್ದೆ. ಅದನ್ನು ಅವರು ನೆನಪಿಸಿಕೊಳ್ಳಲಿ ಎಂದು ಲಾಲು ಯಾದವ್ ಲೇವಡಿ ಮಾಡಿದ್ದಾರೆ. 1990ರಲ್ಲಿ ಆಡ್ವಾಣಿಯವರ ರಥಯಾತ್ರೆಯನ್ನು ತಡೆದು ಗುರಿವಿನ ಬಲೂನಿನಿಂದ ಗಾಳಿ ತೆಗೆದೆ. ಅದೇ ರೀತಿ ಇದೀಗ ಚೇಲನ ಬಲೂನಿನಿಂದಲೂ ಗಾಳಿ ತೆಗೆಯುತ್ತೇನೆ ಎಂದು ಲಾಲು ಮೋತಿಹಾರಿಯಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದರು.

ಎನ್‌ಸಿಪಿ ನಾಯಕರ ಜತೆ ಸಭೆ
ಮುಂಬೈ: 
ಚುನಾವಣಾ ಸಮರ ಕೊನೆಹಂತ ತಲುಪುತ್ತಿದ್ದಂತೆ ಕೇಂದ್ರ ಸಚಿವ, ಎನ್‌ಸಿಪಿ ನಾಯಕ ಶರದ್ ಪವಾರ್ ಮುಂಬೈನಲ್ಲಿ ಪಕ್ಷದ ನಾಯಕರ ಜತೆ ಸಭೆ ನಡೆಸಿದರು. ಇತ್ತೀಚಿನ ದಿನಗಳಲ್ಲಿ ಯುಪಿಎ ತೊರೆದು ಎನ್‌ಡಿಎ ಸೇರ್ಪಡೆ, ತೃತೀಯ ರಂಗ ಸೇರುವ ಬಗ್ಗೆ ಶರದ್ ಪವಾರ್ ಭಿನ್ನ ರೀತಿಯ ಹೇಳಿಕೆ ನೀಡಿದ್ದರಿಂದ ಈ ಸಭೆಗೆ ಮಹತ್ವ ಬಂದಿದೆ. ಮಹಾರಾಷ್ಟ್ರದಲ್ಲಿ ಚುನಾವಣೆ ನಂತರ ಉಂಟಾಗಬಹುದಾದ ಸಂಭಾವ್ಯ ರಾಜಕೀಯ ವಿಚಾರದ ಬಗ್ಗೆಯೂ ಪವಾರ್ ಪಕ್ಷದ ನಾಯಕರೊಂದಿಗೆ ಚರ್ಚಿಸಿದರು.

ಸರ್ಕಾರ ಪತನ ಹೇಳಿಕೆ ಹಾಸ್ಯಾಸ್ಪದ
ಮೋತಿಹಾರಿ: 
ಚುನಾವಣೆ ಬಳಿಕ ತಮ್ಮ ಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ಪ್ರತಿಪಾದಿಸುತ್ತಿರುವುದು ಹಾಸ್ಯಾಸ್ಪದ ಎಂದು ಬಿಹಾರ ಸಿಎಂ ನಿತೀಶ್‌ಕುಮಾರ್ ಹೇಳಿದ್ದಾರೆ.  ಜೀವನದ ಬಗ್ಗೆ ಏನೂ ಗೊತ್ತಿಲ್ಲದಿದ್ದಾಗ ಗದ್ದುಗೆ ಬಗ್ಗೆ ಹೇಗೆ ಹೇಳಲು ಸಾಧ್ಯ? ದೇಶ ಇದ್ದರೆ ಮಾತ್ರ ಗದ್ದುಗೆ. ಬಿಜೆಪಿಯ ಸಿದ್ಧಾಂತ ಸರಿಯಿಲ್ಲದ ಕಾರಣ ಮೈತ್ರಿ ಮುರಿದೆ ಎಂದಿದ್ದಾರೆ ನಿತೀಶ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement