ದೇಶ

ಅಮೆರಿಕ ಬಿಟ್ಟು ಎಲ್ಲರಿಗೂ ಥ್ಯಾಂಕ್ಸ್!

ಲೋಕಸಭಾ ಫಲಿತಾಂಶ ಹೊರಬೀಳುತ್ತಲೇ ತಮ್ಮನ್ನು ಅಭಿನಂದಿಸಿದ ಜಗತ್ತಿನ ಹಲವು..

ನವದೆಹಲಿ: ಲೋಕಸಭಾ ಫಲಿತಾಂಶ ಹೊರಬೀಳುತ್ತಲೇ ತಮ್ಮನ್ನು ಅಭಿನಂದಿಸಿದ ಜಗತ್ತಿನ ಹಲವು ರಾಷ್ಟ್ರಗಳ ನಾಯಕರಿಗೆ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಸಲ್ಲಿಸಿದ್ದಾರೆ. ಆದರೆ, ಅಚ್ಚರಿಯ ಸಂಗತಿಯೆಂದರೆ, ಎಲ್ಲರಿಗಿಂತ ಮೊದಲು ಅಭಿನಂದನೆ ಸಲ್ಲಿಸಿದ್ದ ಅಮೆರಿಕಕ್ಕೆ ಮೋದಿ ಧನ್ಯವಾದ ಹೇಳಿಲ್ಲ. ಇದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ಬಳಸಿಕೊಂಡಿರುವ ಮೋದಿ, ತಮಗೆ ಅಭಿನಂದನೆ ಸಲ್ಲಿಸಿದ್ದ ಎಲ್ಲಾ ದೇಶಗಳಿಗೆ ಧನ್ಯವಾದ ಹೇಳಿದ್ದಾರೆ. ಆದರೆ, ಅಮೆರಿಕದ ಹೆಸರನ್ನು ಅವರೆಲ್ಲಿಯೂ ಉಲ್ಲೇಖಿಸಿಲ್ಲ. ಗುಜರಾತ್ ನರಮೇಧದ ನಂತರ ಅಮೆರಿಕ ಮೋದಿ ಅವರನ್ನು ತನ್ನ ನೆಲದಲ್ಲಿ ಬಿಟ್ಟುಕೊಳ್ಳಲು ನಿರಾಕರಿಸಿತ್ತು. ಯೂರೋಪ್‌ನ ಕೆಲ ರಾಷ್ಟ್ರಗಳೂ ಮೋದಿ ವಿಚಾರದಲ್ಲಿ ಅಮೆರಿಕವನ್ನೇ ಅನುಸರಿಸಿದ್ದವು. ಇದೀಗ, ಮೋದಿ ಪ್ರಧಾನಿಯಾಗುವುದು ಖಾತ್ರಿಯಾಗುತ್ತಲೇ ಈ ಎಲ್ಲಾ ರಾಷ್ಟ್ರಗಳು ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!