- ಆಲೂಗಡ್ಡೆ - 2 ಬಟ್ಟಲು
- ಕಾರ್ನ್ ಫ್ಲೋರ್- 2 ಚಮಚ
- ಕಾಳು ಮೆಣಸಿನ ಪುಡಿ - ಅರ್ಧ ಚಮಚ
- ಎಣ್ಣೆ- ಅಗತ್ಯಕ್ಕನುಗುಣವಾಗಿ
- ಶುಂಠಿ, ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು
- ಹಸಿಮೆಣಸಿನ ಕಾಯಿ - ಸಣ್ಣಗೆ ಹೆಚ್ಚಿದ್ದು 2-3
- ಸ್ಪ್ರಿಂಗ್ ಆನಿಯನ್ - ಸ್ವಲ್ಪ
- ಈರುಳ್ಳಿ- 1-2
- ಕ್ಯಾಪ್ಸಿಕಂ- 1
- ಟೊಮೆಟೋ ಸಾಸ್ - 1 ಚಮಚ
- ಸೋಯಾ ಸಾಸ್ - 2 ಚಮಚ
- ವಿನೆಗರ್ - 1 ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಜೇನು ತುಪ್ಪ - 1 ಚಮಚ
- ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಉದ್ದುದ್ದಕ್ಕೆ ಹಾಗೂ ಸ್ವಲ್ಪ ದಪ್ಪದಾಗಿ ಕತ್ತರಿಸಬೇಕು.
- ಒಲೆಯ ಮೇಲೆ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಇಟ್ಟು, ನೀರು ಕುದಿಯುತ್ತಿರುವ ಸಂದರ್ಭದಲ್ಲಿ ಆಲೂಗಡ್ಡೆ ಹಾಗೂ ಸ್ವಲ್ಪ ಉಪ್ಪು ಹಾಕಿ 2 ನಿಮಿಷ ಬೇಯಿಸಿ, ನೀರಿನಿಂದ ಆಲೂಗಡ್ಡೆಯನ್ನು ತೆಗೆದುಕೊಳ್ಳಬೇಕು.
- ನಂತರ ಬಟ್ಟಲಿಗೆ ಕಾರ್ನ್ ಫ್ಲೋರ್, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
- ನಂತರ ಒಲೆಯ ಮೇಲೆ ಬಾಣಲೆಗೆ ಎಣ್ಣೆಯನ್ನು ಹಾಕಿ, ಕಾದ ನಂತರ ಮಿಶ್ರಣ ಮಾಡಿಕೊಂಡ ಆಲೂಗಡ್ಡೆಯನ್ನು ಎಣ್ಣೆಗೆ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
- ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಕಾದ ನಂತರ ಶುಂಠಿ, ಬೆಳ್ಳುಳ್ಳು, ಹಸಿಮೆಣಸಿನ ಕಾಯಿ, ಈರುಳ್ಳು, ಕ್ಯಾಪ್ಸಿಕಂ, ಟೊಮೆಟೋ ಸಾಸ್, ಸೋಯಾ ಸಾಸ್, ವಿನೆಗರ್, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ನಂತರ ಅರ್ಧ ಚಮಚದಷ್ಟು ಕಾರ್ನ್ ಫ್ಲೋರ್ ಜೊತೆಗೆ ನೀರನ್ನು ಮಿಶ್ರಣ ಮಾಡಿ ಮಸಾಲೆಗೆ ಹಾಕಿ, 2 ನಿಮಿಷ ಬೇಯಲು ಬಿಡ್ಡು, ಈಗಾಗಲೇ ಫ್ರೈ ಮಾಡಿಕೊಂಡ ಆಲೂಗಡ್ಡೆಗಳ, ಜೇನುತುಪ್ಪ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ, ಕೊನೆಯಲ್ಲಿ ಸ್ಪ್ರಿಂಗ್ ಆನಿಯನ್ ಹಾಕಿ ಅಲಂಕರಿಸಿದರೆ ರುಚಿಕರವಾದ ಹನಿ ಚಿಲ್ಲಿ ಪೊಟಾಟೋ ಸವಿಯಲು ಸಿದ್ಧ.