- ರವೆ - 1 ಬಟ್ಟಲು
- ಮೊಸರು - ಅರ್ಧ ಬಟ್ಟಲು
- ಉಪ್ಪು- ರುಚಿಗೆ ತಕ್ಕಷ್ಟು
- ಈರುಳ್ಳಿ - ಸಣ್ಣಗೆ ಹೆಚ್ಚಿದ್ದು ಒಂದು ಚಿಕ್ಕ ಬಟ್ಟಲು
- ಟೊಮೆಟೋ- ಸಣ್ಣಗೆ ಹೆಚ್ಚಿದ್ದು ಒಂದು ಚಿಕ್ಕ ಬಟ್ಟಲು
- ಕ್ಯಾಪ್ಸಿಕಂ - ಸಣ್ಣಗೆ ಹೆಚ್ಚಿದ್ದು ಒಂದು ಚಿಕ್ಕ ಬಟ್ಟಲು
- ಹಸಿಮೆಣಸಿನ ಕಾಯಿ- 2-3 ಸಣ್ಣಗೆ ಹೆಚ್ಚಿದ್ದು
- ಕ್ಯಾರೆಟ್- ಸಣ್ಣಗೆ ಹೆಚ್ಚಿದ್ದು ಒಂದು ಚಿಕ್ಕ ಬಟ್ಟಲು
- ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
- ಬ್ರೆಡ್ - 2-3
- ಬೆಣ್ಣೆ - ಸ್ವಲ್ಪ
- ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ರವೆ ಹಾಗೂ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ಕಲಸಿಕೊಳ್ಳಬೇಕು.
- ನಂತರ ಇದಕ್ಕೆ ಈರುಳ್ಳಿ, ಟೊಮೆಟೋ, ಕ್ಯಾಪ್ಸಿಕಂ, ಕ್ಯಾರೆಟ್, ಕೊಬ್ಬಂಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಂಡು 10-15 ನಿಮಿಷ ನೆನೆಯಲು ಬಿಡಬೇಕು.
- ನಂತರ ಬ್ರೆಡ್ ಗಳ ಒಂದು ಬಂದಿಗೆ ಗ್ರೀನ್ ಚಟ್ನಿಯನ್ನು ಹಾಕಿ ಅದರ, ಮೇಲೆ ರವೆ ಮಸಾಲೆಯನ್ನು ಹಾಕಬೇಕು.
- ಒಲೆಯ ಮೇಲೆ ತವ ಇಟ್ಟು, ಅದು ಕಾದ ನಂತರ ಮಸಾಲೆಯುಕ್ತ ಬ್ರೆಡ್ ಗಳನ್ನು ಹಾಕಿ ಕೆಂಪಗೆ ಸುಡಬೇಕು, ಮತ್ತೊಂದು ಬದಿಗೆ ಬೆಣ್ಣೆ ಹಾಕಿ ಕೆಂಪಗೆ ಸುಟ್ಟರೆ ರುಚಿಕರವಾದ ಬ್ರೆಡ್ ಟೋಸ್ಟ್ ಸವಿಯಲು ಸಿದ್ಧ.