- ಕಡಲೆ ಹಿಟ್ಟು- 1 ಬಟ್ಟಲು
- ಅಕ್ಕಿ ಹಿಟ್ಟು- 2 ಚಮಚ
- ಅರಿಶಿಣದ ಪುಡಿ- ಕಾಲು ಚಮಚ
- ಅಚ್ಚ ಖಾರದ ಪುಡಿ- ಮುಕ್ಕಾಲು ಚಮಚ
- ಓಂ ಕಾಳು- ಕಾಲು ಚಮಚ
- ಇಂಗು- ಚಿಟಿಕೆ
- ಉಪ್ಪು- ರುಚಿಗೆ ತಕ್ಕಷ್ಟು
- ಅಡುಗೆ ಸೋಡಾ- ಕಾಲು ಚಮಚ
- ಪಾಲಾಕ್ ಸೊಪ್ಪಿನ ಎಲೆ- 10-15
- ಎಣ್ಣೆ- ಅಗತ್ಯಕ್ಕನುಗುಣವಾಗಿ
- ಮೊದಲಿಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟನ್ನು ಮಿಶ್ರಣ ಮಾಡಿಕೊಂಡು ಅದಕ್ಕೆ ಅರಿಶಿಣದ ಪುಡಿ, ಅಚ್ಚ ಖಾರದ ಪುಡಿ, ಓಂ ಕಾಳು, ಇಂಗು, ಉಪ್ಪು, ಅಡುಗೆ ಸೋಡಾ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
- ನಂತರ ಸ್ವಲ್ಪ, ಸ್ವಲ್ಪವೇ ನೀರಿ ಹಾಕಿ ಹಿಟ್ಟನ್ನು ಗಟ್ಟಿಯಾಗಿ ಕಲಸಿಕೊಳ್ಳಬೇಕು.
- ಪಾಲಾಕ್ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು ಒರೆಸಿಟ್ಟುಕೊಳ್ಳಬೇಕು.
- ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡುಬೇಕು. ಎಣ್ಣೆ ಕಾದ ನಂತರ ಪಾಲಾಕ್ ಎಲೆಗಳನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಗೆ ಬಿಟ್ಟು, ಕೆಂಪಗೆ ಕರಿದರೆ ರುಚಿಕರವಾದ ಪಾಲಾಕ್ ಪಕೋಡಾ ಸವಿಯಲು ಸಿದ್ಧ.