- ಬೆಳ್ಳುಳ್ಳಿ- 3 ಸಣ್ಣಗೆ ಹೆಚ್ಚಿಕೊಂಡಿದ್ದು,
- ಶುಂಠಿ- ಸ್ವಲ್ಪ, ಸಣ್ಣಗೆ ಹೆಚ್ಚಿಕೊಂಡಿದ್ದು,
- ಸ್ಪ್ರಿಂಗ್ ಆನಿಯನ್ (ಹಸಿರು ಈರುಳ್ಳಿ)- ಸಣ್ಣಗೆ ಹೆಚ್ಚಿಕೊಂಡಿದ್ದು ಸ್ವಲ್ಪ
- ಎಣ್ಣೆ- ಸ್ವಲ್ಪ
- ಕ್ಯಾರೆಟ್- ಸಣ್ಣಗೆ ಹೆಚ್ಚಿಕೊಂಡಿದ್ದು ಸ್ವಲ್ಪ
- ಬೀನ್ಸ್- ಸಣ್ಣಗೆ ಹೆಚ್ಚಿಕೊಂಡಿದ್ದು ಸ್ವಲ್ಪ
- ಕ್ಯಾಪ್ಸಿಕಂ- ಸಣ್ಣಗೆ ಹೆಚ್ಚಿಕೊಂಡಿದ್ದು ಸ್ವಲ್ಪ
- ಎಲೆಕೋಸು- ಸಣ್ಣಗೆ ಹೆಚ್ಚಿಕೊಂಡಿದ್ದು ಸ್ವಲ್ಪ
- ಬಟಾಣಿ- ಸ್ವಲ್ಪ
- ಸ್ವೀಟ್ ಕಾರ್ನ್- ಸ್ವಲ್ಪ
- ನೀರು- 4 ಬಟ್ಟಲು
- ಉಪ್ಪು- ರುಚಿಗೆ ತಕ್ಕಷ್ಟು
- ಕಾರ್ನ್ ಫ್ಲೋರ್- ಮುಕ್ಕಾಲು ಚಮಚ
- ವಿನೇಗರ್- ಅರ್ಧ ಚಮಚ
- ಮಿಕ್ಸ್ಡ್ ಹರ್ಬ್ಸ್- ಅರ್ಧ ಚಮಚ
- ಕಾಳು ಮೆಣಸಿನ ಪುಡಿ- ಅರ್ಧ ಚಮಚ
- ಒಣಗಿದ ಮೆಣಸಿನ ಪದರದ ಪುಡಿ- ಅರ್ಧ ಚಮಚ
- ಮೊದಲಿಗ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಸ್ಪ್ರಿಂಗ್ ಆನಿಯನ್, ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಹುರಿದುಕೊಳ್ಲಬೇಕು.
- ಬಳಿಕ ಎಲೋಕೋಸು, ಬಟಾಣಿ, ಸ್ವೀಟ್ ಕಾರ್ನ್ ಹಾಗೂ 4 ಬಟ್ಟಲು ನೀರು ಹಾಕಿ 5-6 ನಿಮಿಷ ಬೇಯಲು ಬಿಡಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರಿನಲ್ಲಿ ಕಲಸಿಕೊಂಡ ಕಾರ್ನ್ ಫ್ಲೋರ್ ಹಾಕಿ ಸೂಪ್ ಗಟ್ಟಿಯಾಗುವವರೆಗೂ ಕುದಿಯಲು ಬಿಡಿ.
- ಕೊನೆಯದಾಗಿ ವಿನೇಗರ್, ಮಿಕ್ಸ್ಡ್ ಹರ್ಬ್ಸ್, ಕಾಳುಮೆಣಸಿನ ಪುಡಿ, ಒಣಗಿದ ಮೆಣಸಿನ ಪದರದ ಪುಡಿ ಹಾಕಿ 2 ನಿಮಿಷ ಕುದಿಯಲು ಬಿಟ್ಟರೆ, ರುಚಿಕರ ಹಾಗೂ ಆರೋಗ್ಯಕರವಾದ ತರಕಾರಿ ಸೂಪ್ ಕುಡಿಯಲು ಸಿದ್ಧ.