ರುಚಿಕರವಾದ ಡಾಬಾ ಸ್ಟೈಲ್ ಪನ್ನೀರ್ ಮಸಾಲಾ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
ಏಲಕ್ಕಿ- 2
ಲವಂಗ- 4
ಚಕ್ಕೆ- 3-2
ಕಾಳುಮೆಣಸು- 5-6
ಪಲಾವ್ ಎಲೆ- 2-3
ತುಪ್ಪ- 2 ಚಮಚ
ಈರುಳ್ಳಿ-ಸಣ್ಣಗೆ ಹೆಚ್ಚಿದ್ದು 1 ಬಟ್ಟಲು
ಶುಂಠಿ,ಬೆಳ್ಳುಳ್ಳಿ ಪೇಸ್ಟ್- 1 ಚಮಚ
ಟೊಮೆಟೋ ಪೇಸ್ಟ್- 1 ಬಟ್ಟಲು
ಅರಿಶಿಣದ ಪುಡಿ- ಸ್ವಲ್ಪ
ಉಪ್ಪು-ರುಚಿಗೆ ತಕ್ಕಷ್ಟು
ಕಾಶ್ಮೀರಿ ಚಿಲ್ಲಿ ಪೌಡರ್-2 ಚಮಚ
ದನಿಯಾ ಪುಡಿ- 1 ಚಮಚ
ಜೀರಿಗೆ ಪುಡಿ- ಅರ್ಧ ಚಮಚ
ಕಡಲೆಹಿಟ್ಟು- 2 ಚಮಚ
ಪನೀರ್- 200 ಗ್ರಾಂ
ಗರಂ ಮಸಾಲೆಪುಡಿ- ಅರ್ಧ ಚಮಚ
ಕಸೂರಿ ಮೇಥಿ- ಸ್ವಲ್ಪ
ಸಕ್ಕರೆ- 1 ಚಮಚ
ಮಾಡುವ ವಿಧಾನ...
ಮೊದಲಿಗೆ ಬಾಣಲೆಗೆ 2 ಚಮಚ ತುಪ್ಪವನ್ನು ಹಾಕಿ, ಕಾದ ನಂತರ ಏಲಕ್ಕಿ, ಲವಂಗ, ಚಕ್ಕೆ, ಕಾಳುಮೆಣಸು, ಪಲಾವ್ ಎಲೆ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
ಬಳಿಕ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಂಡು ಶುಂಠಿ,ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ ಪೇಸ್ಟ್ ಹಾಕಿ 10 ನಿಮಿಷ ಬೇಯಿಸಿಕೊಳ್ಳಬೇಕು. ನಂತರ ಅರಿಶಿಣದ ಪುಡಿ, ಉಪ್ಪು, ಕಾಶ್ಮೀರಿ ಚಿಲ್ಲಿ ಪೌಡರ್, ದನಿಯಾ ಪುಡಿ, ಜೀರಿಗೆ, ಕಡಲೆಹಿಟ್ಟು ಹಾಕಿ 15 ನಿಮಿಷ ಬೇಯಿಸಿಕೊಂಡು ನಂತರ ಪನೀರ್ ಹಾಕಿ 5-10 ನಿಮಿಷ ಒಲೆಯ ಮೇಲಿಡಬೇಕು. ಬಳಿಕ ಗರಂ ಮಸಾಲೆಪುಡಿ, ಕಸೂರಿ ಮೇಥಿ ಹಾಗು ಸಕ್ಕರೆ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಡಾಬಾ ಸ್ಟ್ರೈಲ್ ಪನೀರ್ ಮಸಾಲಾ ಸವಿಯಲು ಸಿದ್ಧ.