- ನುಗ್ಗೇಕಾಯಿ- 4
- ತೊಗರಿಬೇಳೆ - 1 ಚಮಚ
- ಕಡಲೇಬೇಳೆ- 1 ಚಮಚ
- ಮೈಸೂರ್ ಬೇಳೆ- 1 ಚಮಚ
- ಹೆಸರುಬೇಳೆ- 1 ಚಮಚ
- ಟೊಮೆಟೋ ಪ್ಯೂರಿ- 1 ಸಣ್ಣ ಬಟ್ಟಲು
- ಈರುಳ್ಳಿ- 1
- ಅಚ್ಚಖಾರದ ಪುಡಿ- 1 ಚಮಚ
- ಕೊತ್ತಂಬರಿ ಸೊಪ್ಪು-ಸ್ವಲ್ಪ
- ಜೀರಿಗೆ-ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
- ಮೊದಲು ಬೇಳೆಗಳೆಲ್ಲವನ್ನೂ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಬೇಕು.
- ನುಗ್ಗೇಕಾಯಿಗಳನ್ನು ಚೆನ್ನಾಗಿ ತೊಳೆದುಕೊಂಡು ತುಂಡು ಮಾಡಿಟ್ಟುಕೊಳ್ಳಿ.
- ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಖಾರದ ಪುಡಿಯನ್ನು ರುಬ್ಬಿಟ್ಟುಕೊಳ್ಳಿ.
- ಸ್ವಲ್ಪ ನೀರಿಗೆ ಉಪ್ಪು ಹಾಕಿ ನುಗ್ಗೆಕಾಯಿ ಬೇಯಿಸಿಕೊಳ್ಳಿ. ಬೆಂದ ನುಗ್ಗೆಕಾಯಿದೆ ಬೇಯಿಸಿದ ಬೇಳೆಯನ್ನು ಹಾಕಿ ಮಿಶ್ರಣ ಮಾಡಿ. ನಂತರ ಈಗಾಗಲೇ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ.
- ಬಳಿಕ ಉಪ್ಪು, ಅರಿಶಿನದ ಪುಡಿ, ಜೀರಿಗೆ ಪುಡಿ ಹಾಗೂ ಟೊಮೆಟೋ ಪ್ಯೂರಿಯನ್ನು ಹಾಕಿ ಕುದಿಯಲು ಬಿಡಿ. ಮಿಶ್ರಣ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಿ ಕುದಿಸಿದರೆ ರುಚಿಕರವಾದ ನುಗ್ಗೇಕಾಯಿ ದಾಲ್ ಸವಿಯಲು ಸಿದ್ಧ.