ರಾಜ್ಯ

ಪುನೀತ್ ರಾಜ್ ಕುಮಾರ್ ನಿಧನ: ಡಾ. ರಮಣರಾವ್ ವಿರುದ್ಧ ಮತ್ತೊಂದು ದೂರು

Srinivasamurthy VN

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದ ಹಿನ್ನಲೆಯಲ್ಲಿ ಡಾ.ರಮಣ ರಾವ್ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.

ಕನ್ನಡಪರ ಚಿಂತಕ ಡಾ.ಆರ್.ಎ. ಪ್ರಸಾದ್ ಅವರು ಸದಾಶಿವನಗರ ಠಾಣೆಯಲ್ಲಿ ದೂರು ದೂಖಲು ಮಾಡಿದ್ದು ಪುನೀತ್ ರಾಜ್ ಕುಮಾರ್ ಅವರ ನಿವಾಸದ ಹತ್ತಿರದಲ್ಲಿರುವ ಎಂ ಎಸ್ ರಾಮಯ್ಯಗೆ ಕಳಿಸದೇ ವಿಕ್ರಮ್ ಆಸ್ಪತ್ರೆಗೆ ದಾಖಲು ಮಾಡಿದ್ಯಾಕೆ ಎಂದು ಪ್ತಶ್ನಿಸಿದ್ದಾರೆ. 

ಹೃದಯಾಘಾತ ಸೂಚನೆ ಕಂಡರೂ ಎಂ ಎಸ್ ರಾಮಯ್ಯ ಹೃದಯ ಘಟಕಕ್ಕೆ ದಾಖಲು ಮಾಡಿಲ್ಲ. ಹೀಗಾಗಿ ವೈದ್ಯರು ನಿರ್ಲಕ್ಷ್ಯ ಮಾಡುವುದರ ಮೂಲಕ ವೃತ್ತಿಗೆ ಕರ್ತವ್ಯಲೋಪ ಎಸಗಿರೋದಾಗಿ ದೂರಿನಲ್ಲಿ ಆಪಾದಿಸಲಾಗಿದೆ. ಸ್ಲೋ ಪಾಯಿಜನ್ ಆಗಿರುವ ಸಾಧ್ಯತೆಯ ಬಗ್ಗೆಯೂ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ನಿಗೂಢ ಸಾವಿಗೆ ಕಾರಣವೇನೆಂದು ತಿಳಿಯಲು ಕಾನೂನಾತ್ಮಕ ತನಿಖೆ ನಡೆಸಬೇಕೆಂದು ಹೇಳಲಾಗಿದೆ.

ಡಾ. ರಮಣ ರಾವ್ ವಿರುದ್ಧ ಈಗಾಗಲೇ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅವರ ನಿವಾಸಕ್ಕೆ, ಹಾಗೂ ಕ್ಲಿನಿಕ್ ಗೆ ಬಿಗಿ ಭದ್ರತೆ ಒದಗಿಸಲಾಗಿದೆ.

ವೈದ್ಯರ ವಿರುದ್ಧ ದೂರು, ಸಿಎಂಗೆ ಪತ್ರ ಬರೆದಿದ್ದ ಫನಾ
ಖ್ಯಾತ ನಟ ಪುನೀತ್ ರಾಜ್​ಕುಮಾರ್ ಅವರಿಗೆ ಎದೆನೋವು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ನೀಡಿದ್ದ ವೈದ್ಯ ರಮಣರಾವ್ ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನ ನಡೆಯುತ್ತಿರುವ ಬಗ್ಗೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಒಕ್ಕೂಟವು (ಫನಾ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಗಮನ ಸೆಳೆದಿತ್ತು. 

ಸಾವಿನ ಬಗ್ಗೆ ಚರ್ಚೆಯಿಂದ ವೈದ್ಯಕೀಯ ಗೌಪ್ಯತೆ ಉಲ್ಲಂಘನೆಯಾಗುತ್ತಿದೆ. ಈ ವಿಚಾರದಲ್ಲಿ ಎಫ್​ಐಆರ್ ಅಥವಾ ಪಿಸಿಆರ್ ದಾಖಲಿಸುವ ಮುನ್ನ ಸುಪ್ರೀಂಕೋರ್ಟ್​ ರೂಪಿಸಿರುವ ನಿಯಮಾವಳಿಗಳನ್ನು ಗಮನಿಸಬೇಕು ಎಂದು  ಫನಾ ಅಧ್ಯಕ್ಷ ಡಾ.ಪ್ರಸನ್ನ ಹೇಳಿದ್ದರು.

SCROLL FOR NEXT